twitter
    X
    Home ಚಲನಚಿತ್ರಗಳ ಒಳನೋಟ

    ಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಕನ್ನಡದ ಟಾಪ್ 10 ಸೂಪರ್ ಹಿಟ್ ಹಾಡುಗಳಿವು

    Author Sowmya Bairappa | Updated: Tuesday, January 17, 2023, 10:05 AM [IST]

    ಕನ್ನಡದ ಅನೇಕ ಸೂಪರ್ ಹಾಡುಗಳು ಬೇರೆ-ಬೇರೆ ಭಾಷೆಯ ಹಾಡುಗಳ ಟ್ಯೂನ್ ಗಳಿಗೆ ಹೋಲಿಕೆ ಆಗುವಂತಿದೆ. ಅರ್ಜುನ್ ಜನ್ಯ, ಗುರುಕಿರಣ್, ವಿ ಹರಿಕೃಷ್ಣ ಅವರ ಕೆರಿಯರ್ ನ ಸೂಪರ್ ಹಿಟ್ ಹಾಡುಗಳು ಈ ಪಟ್ಟಿಯಲ್ಲಿ ಇವೆ. ಹಂಸಲೇಖ ಅವರ 'ಪ್ರೇಮಲೋಕ'ದ ಒಂದು ಹಾಡು ಕೂಡ ಬೇರೊಂದು ಹಾಡಿನ ಮಾದರಿಯಲ್ಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕಾತರ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್​ ಟ್ಯೂನ್ ಮೇಲೂ ಕದ್ದ ಆರೋಪ ಬಂದಿದೆ. ಹೀಗೆ ಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಕನ್ನಡದ ಟಾಪ್ 10 ಸೂಪರ್ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ.

    cover image

    ವರಾಹ ರೂಪಂ

    ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್​ ಟ್ಯೂನ್​ ಅನ್ನು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್ 5 ವರ್ಷ ಹಳೆಯ ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.  ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್‌ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ತಿಳಿಸಿತ್ತು. ಹೀಗಾಗಿ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್‌ನ ಅನುಮತಿ ಇಲ್ಲದೆ ವರಾಹ ರೂಪಂ ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿತ್ತು. 

    'ಕಣ್ಣ ಮುಚ್ಚೆ ಗಾಡೆ ಗೂಡೆ'

    ರಾಂಬೋ' ಸಿನಿಮಾದ 'ಕಣ್ಣ ಮುಚ್ಚೆ ಗಾಡೆ ಗೂಡೆ' ಹಾಡು ಮರಾಠಿಯ ಹಾಡಿದ ಟ್ಯೂನ್ ಹೊಂದಿದೆ. 'ನಟರಾಂಗ್' ಎಂಬ ಸಿನಿಮಾದ 'ಕೇಲ ಮಾಂಡಲ..' ಎಂಬ ಹಾಡಿ ಟ್ಯೂನ್ ಅನ್ನೇ ಈ ಹಾಡಿನಲ್ಲಿಯೂ ಬಳಸಲಾಗಿದೆ. ಅರ್ಜುನ್ ಜನ್ಯ 'ರಾಂಬೋ' ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದಾರೆ. ಮರಾಠಿಯಲ್ಲಿ ಈ ಹಾಡಿಗೆ ಅಜಯ್ ಅತುಲ್ ಸಂಗೀತ ನೀಡಿದ್ದರು. 

    'ಉಸಿರೇ.. ಉಸಿರೇ...'

    'ಉಸಿರೇ.. ಉಸಿರೇ...' ಎಂಬ ಹಾಡು ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾದಲ್ಲಿ ಇದೆ. ಈ ಹಾಡು ದೊಡ್ಡ ಹಿಟ್ ಆಗಿದೆ. ಆದರೆ, ಈ ಹಾಡಿನಲ್ಲಿರುವ ಟ್ಯೂನ್ ಬೇರೊಂದು ಹಾಡಿಗೆ ಹೋಲಿಕೆ ಆಗುತ್ತಿದೆ. 'ಟೇಕ್ ಮಿ ಅವೇ..' ಎಂಬ ಇಂಗ್ಲೀಷ್ ಹಾಡಿನ ಟ್ಯೂನ್ ರೀತಿಯೇ 'ಉಸಿರೇ.. ಉಸಿರೇ...' ಹಾಡು ಇದೆ. ಈ ಹಾಡಿನ ಸಂಗೀತ ನಿರ್ದೇಶಕರು ಕೂಡ ಅರ್ಜುನ್ ಜನ್ಯ. 

    ನೀರಿಗೆ ಬಾರೇ ಚೆನ್ನಿ..

    'ನೀರಿಗೆ ಬಾರೆ ಚೆನ್ನಿ..' ಎಂಬ 'ಜರಾಸಂಧ' ಸಿನಿಮಾದ ಹಾಡು ಸೂಪರ್ ಹಿಟ್ ಆಗಿದೆ. ಜನಪದ ಶೈಲಿಯಲ್ಲಿ ಇರುವ ಈ ಹಾಡು ಗ್ರಾಮೀಣ ಭಾಗದಲ್ಲಿಯೂ ತುಂಬ ಫೇಮಸ್ ಆಗಿದೆ. ಆದರೆ, ಈ ಹಾಡು 'Mata Aloke' ಎಂಬ ಹಾಡಿನ ಶೈಲಿಯಲ್ಲಿ ಇದೆ. 'ಜರಾಸಂಧ' ಸಿನಿಮಾ ಸಹ ಅರ್ಜುನ್ ಜನ್ಯ ಸಂಗೀತ ಹೊಂದಿದೆ.

    ಕಮಾನ್ ಕಮಾನ್ ಡೈರೆಕ್ಟರ್

    ಸೂಪರ್ ಸಿನಿಮಾದ 'ಕಮಾನ್ ಕಮಾನ್ ಡೈರೆಕ್ಟರ್..' ಹಾಡು ಕಾಫಿ ಮಾಡಿದ್ದಾರೆಯೇ ಎನ್ನುವ ಅನುಮಾನ ಮೂಡಿಸುತ್ತದೆ. ಕಾರಣ ಈ ಹಾಡು 'ಮಿಸಿರಲೌ' ಎಂಬ ಹಾಡಿನ ಹಾಡಿನ ರೀತಿಯೇ ಇದೆ. 1963ರಲ್ಲಿ ಈ ಹಾಡು ಬಂದಿದ್ದು, ಡಿಕ್ ದಲೆ ಸಂಗೀತ ಇದಾಗಿದೆ. 'ಸೂಪರ್' ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಸಿನಿಮಾ.

    'ಆಕಾಶ ಇಷ್ಟೇ ಯಾಕಿದೆಯೋ'

    'ಆಕಾಶ ಇಷ್ಟೇ ಯಾಕಿದೆಯೋ. 'ಆಕಾಶ ಇಷ್ಟೇ ಯಾಕಿದೆಯೋ.' 'ಗಾಳಿಪಟ' ಸಿನಿಮಾದ ಹಾಡು. ವಿ ಹರಿಕೃಷ್ಣ ಈ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್. ಆದರೆ, ಈ ಹಾಡು 'ಡ್ಯಾನ್ಸ್ ವಿತ್ ದಿ ವುಲ್ಫ್' ಎಂಬ ಹಾಡಿನ ಟ್ಯೂನ್ ಗೆ ಹೋಲಿಕೆ ಆಗುತ್ತಿದೆ. ಎರಡು ಹಾಡನ್ನು ಕೇಳಿದ್ರೆ ಸೇಮ್ ಟಿ ಸೇಮ್ ಇದೆ. ಅಂದಹಾಗೆ, ಇದು 2004ರಲ್ಲಿ ಬಂದ ಅಮೇರಿಕನ್ ಹಾಡು.

    ಊರಿಗೊಬ್ಬಳೆ ಪದ್ಮಾವತಿ

    'ಊರಿಗೊಬ್ಬಳೆ ಪದ್ಮಾವತಿ..' ರಮ್ಯಾ ಕೆರಿಯರ್ ನ ಸೂಪರ್ ಹಿಟ್ ಹಾಡು. ಈ ಹಾಡನ್ನು ನೀಡಿದ್ದು, ವಿ ಹರಿಕೃಷ್ಣ. ಈ ಹಾಡು 'ಜಾನಿ ಮೇರಾ ನಾಮ್' ಸಿನಿಮಾದಾಗಿದೆ. ಈ ಹಾಡು ಅರೇಬಿಯಾನ್ ಹಾಡಿನ ಟ್ಯೂನ್ ರೀತಿಯೇ ಇದೆ. 'ಐವಾ ಐವಾ..' ಎಂಬ ಹಾಡಿನ ಕಾಪಿ ಎನ್ನುವುದು ಹಾಡು ಕೇಳಿದ ತಕ್ಷಣ ತಿಳಿದುಬಿಡುತ್ತದೆ.

    'ಪ್ರೇಮಲೋಕದಿಂದ ಬಂದ'

    ಟ್ಯೂನ್ ಕದ್ದ ಆರೋಪ ಹಂಸಲೇಖ ಅವರನ್ನು ಬಿಟ್ಟಿಲ್ಲ. 'ಪ್ರೇಮಲೋಕದಿಂದ ಬಂದ..' ಎಂಬ ಹಾಡು 'ಪ್ರೇಮ ಲೋಕ' ಚಿತ್ರದ ಬೆಸ್ಟ್ ಹಾಡುಗಳಲ್ಲಿ ಒಂದು. ಈ ಹಾಡು 'ಇನ್ ದಿ ಶಾಡೋ..' ಎಂಬ ಹಾಡಿಗೆ ಹೋಲಿಕೆ ಆಗುತ್ತದೆ. ಇದೊಂದು ಚೀನಿ ಹಾಡಾಗಿದ್ದು, 1963ರಲ್ಲಿಯೇ ಈ ಹಾಡು ಬಂದಿತ್ತು.

    ಡಾಕ್ಟರ್ ಸತ್ಯ

    'ಸತ್ಯವಾನ್ ಸಾವಿತ್ರಿ' ಸಿನಿಮಾದ 'ಡಾಕ್ಟರ್ ಸತ್ಯ..' ಹಾಡು ಸಖತ್ ಫೇಮಸ್. ಗುರುಕಿರಣ್ ಈ ಹಾಡಿಗೆ ಸಂಗೀತ ನೀಡಿ ತಾವೇ ಹಾಡಿದ್ದಾರೆ. ಆದರೆ, ಈ ಹಾಡು 'ಓ ಮೈ ಡಾರ್ಲಿಂಗ್..' ಎಂಬ ಇಂಗ್ಲೀಷ್ ಹಾಡಿನ ಮಾದರಿಯಲ್ಲಿದೆ. 

    'ಮುದ್ದಾಗಿ ನೀನು ನನ್ನ ಕೂಗಿದೆ'

    'ಗಣಪ' ಸಿನಿಮಾದ ಒಂದು ಹಾಡು ನಕಲಿ ಎನ್ನುವ ಅಪವಾದ ಪಡೆದಿದೆ. 'ಮುದ್ದಾಗಿ ನೀನು ನನ್ನ ಕೂಗಿದೆ...' ಹಾಡು, Law Bass Fe Eyne ಎಂಬ ಹಾಡಿಗೆ ಮಾದರಿಯಲ್ಲಿಯೇ ಇದೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X