twitter
    X
    Home ಚಲನಚಿತ್ರಗಳ ಒಳನೋಟ

    ಅತಿಹೆಚ್ಚು ಸಂಭಾವನೆ ಪಡೆಯುವ ಕನ್ನಡದ ನಟಿಯರ ಪಟ್ಟಿ ಇಲ್ಲಿದೆ.

    Author Sowmya Bairappa | Published: Sunday, December 4, 2022, 12:37 PM [IST]

    ಇತ್ತೀಚೆಗೆ ತೆರೆ ಕಾಣುತ್ತಿರುವ ಕನ್ನಡದ ಸಿನಿಮಾಗಳು ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ಹವಾ ಕ್ರಿಯೇಟ್ ಮಾಡುವ ಮಟ್ಟಿಗೆ ನಿರ್ಮಾಣ ಆಗುತ್ತಿವೆ. ಸದ್ಯ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಒಳ್ಳೆ ಕಂಟೆಂಟ್ ಸಿನಿಮಾಗಳು, ಅದ್ಧೂರಿ ಮೇಕಿಂಗ್​​​​ನೊಂದಿಗೆ 100 ಕ್ಲಬ್ ಸೇರುವಲ್ಲಿ ಇತಿಹಾಸ ಬರೆದಿಡುತ್ತಿವೆ. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಹೊಸ-ಹೊಸ ನಾಯಕಿಯರ ಪರಿಚಯವೂ ಆಗುತ್ತಿದೆ. ಕನ್ನಡದ ನಟಿಯರಿಗೆ ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಅತಿಹೆಚ್ಚು ಸಂಭಾವನೆ ಪಡೆಯುವ ಕನ್ನಡದ ನಟಿಯರ ಪಟ್ಟಿ ಇಲ್ಲಿದೆ.

    cover image
    ಶ್ರೀನಿಧಿ  ಶೆಟ್ಟಿ

    ಶ್ರೀನಿಧಿ ಶೆಟ್ಟಿ

    1

    ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದಲ್ಲೇ ಸಾಕಷ್ಟು ಯಶಸ್ಸು ಕಂಡರು. ನಂತರ ಕೆಜಿಎಫ್ ಭಾಗ 2ರಲ್ಲಿ ನಟಿಸಿದರು.  ಕೆಜಿಎಫ್ ಸಿನಿಮಾಗಾಗಿ ಶ್ರೀನಿಧಿ ಶೆಟ್ಟಿ 3 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಕೆಜಿಎಫ್ ಬಳಿಕ ಶ್ರೀನಿಧಿಗೆ ಡಿಮ್ಯಾಂಡ್ ಹೆಚ್ಚಾಯಿತು. ನಂತರ ಶ್ರೀನಿಧಿ ಶೆಟ್ಟಿ ಅವರು  ಚಿಯಾನ್ ವಿಕ್ರಂ ಅಭಿನಯದ ಕೋಬ್ರಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಸಿನಿಮಗಾಗಿ ಅವರು 7 ಕೋಟಿ ರೂ. ಸಂಭಾವನೆ ಪಡೆದಿದ್ದರು.   

    ಸಪ್ತಮಿ ಗೌಡ

    ಸಪ್ತಮಿ ಗೌಡ

    2

    ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿಗೌಡ ಎರಡನೇ ಸಿನಿಮಾದಲ್ಲೇ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರ ನಿರ್ವಹಿಸುವ ಮೂಲಕ ಕಮಾಲ್ ಮಾಡಿದರು. ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡಗೆ ಬೇಡಿಕೆ ಹೆಚ್ಚಾಗಿದೆ. ಸಪ್ತಮಿ ಸಿನಿಮಾ ಒಂದರಲ್ಲಿ ಅಭಿನಯಿಸಲು 1.25 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.  

    ಆಶಿಕಾ ರಂಗನಾಥ

    ಆಶಿಕಾ ರಂಗನಾಥ

    3

    ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಜೊತೆಗೆ ತೆಲುಗು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆಶಿಕಾ ಪ್ರತಿ ಸಿನಿಮಾಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.   

    ರಚಿತಾ ರಾಮ್

    ರಚಿತಾ ರಾಮ್

    4

    ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಒಬ್ಬರು. ರಚಿತಾ ರಾಮ್  ಒಂದು ಸಿನಿಮಾಗೆ 60 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಸದ್ಯ ರಚಿತಾ ಸಾಲು- ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

    ಶಾನ್ವಿ ಶ್ರೀವಾತ್ಸವ

    ಶಾನ್ವಿ ಶ್ರೀವಾತ್ಸವ

    5

    ದಿನದಿಂದ ದಿನಕ್ಕೆ ಶಾನ್ವಿ ಶ್ರೀವಾಸ್ತವ್ ಬೇಡಿಕೆ ಕನ್ನಡದಲ್ಲಿ ಹೆಚ್ಚಾಗುತ್ತಿದೆ. ಒಂದು ಸಿನಿಮಾಗೆ ಶಾನ್ವಿ ಶ್ರೀವಾಸ್ತವ್ 20 ರಿಂದ 25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ವರ್ಷ ಶಾನ್ವಿ ಶ್ರೀವಾಸ್ತವ್ ಈ ವರ್ಷ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.  

     

    ಆದಿತಿ ಪ್ರಭುದೇವ

    ಆದಿತಿ ಪ್ರಭುದೇವ

    6

    ಕನ್ನಡದ ಚಿತ್ರರಂಗದ ಕ್ಯೂಟ್  ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಒಂದು ಸಿನಿಮಾಗೆ 10 ರಿಂದ 15 ಲಕ್ಷ ಸಂಭಾವನೆ ಪಡೆಯುತ್ತಾರೆ. ಕಮರ್ಷಿಯಲ್ ಸಿನಿಮಾ ಹಾಗೂ ಪ್ರಯೋಗ ಎರಡನ್ನು ಮಾಡಲು ಸಿದ್ಧವಿರುವ ಅದಿತಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಇನ್ನು ಈ ವರ್ಷ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

    ಶ್ರದ್ಧಾ ಶ್ರೀನಾಥ್

    ಶ್ರದ್ಧಾ ಶ್ರೀನಾಥ್

    7

    'ಯೂ ಟರ್ನ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರದ್ಧಾ ಶ್ರೀನಾಥ್ ಬೇರೆ ಬೇರೆ ಸಿನಿಮಾಗಲ್ಲೂ ನಟಿಸುತ್ತಿದ್ದಾರೆ. ಕನ್ನಡದ ಸಿನಿಮಾಗಳಿಗೆ ಶ್ರದ್ಧಾ ಶ್ರೀನಾಥ್ 20 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.  ಬೇರೆ ಭಾಷೆಗಳ ಸಿನಿಮಾಗೆ ಅವರು ಪಡೆಯುವ ಸಂಭಾವನೆ ನಿಗೂಢವಾಗಿದೆ.   

     

    ರಾಗಿಣಿ ದ್ವಿವೇದಿ

    ರಾಗಿಣಿ ದ್ವಿವೇದಿ

    8

    ನಟಿ ರಾಗಿಣಿ ದ್ವಿವೇದಿ ಸಿನಿಮವೊಂದಕ್ಕೆ 15 ರಿಂದ 20 ಲಕ್ಷ ಸಂಭಾವನೆ ಪಡೆಯುತ್ತಾರೆ. ರಾಗಿಣಿ ಡ್ರಗ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. ಸದ್ಯ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X