X
ಹೋಮ್ » ಸೆಲಬ್ರಿಟಿಗಳು » ಆಶಿಕಾ ರಂಗನಾಥ್
ಆಶಿಕಾ ರಂಗನಾಥ್

ಆಶಿಕಾ ರಂಗನಾಥ್

Actress/Actor
ಜೀವನ ಚರಿತ್ರೆ :  ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್  5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನು‍ಷಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.  ತುಮಕೂರಿನಲ್ಲಿ ಬೆಳೆದ ಆಶಿಕಾ, ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ನಂತರ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ, MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ, ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇವರು 2014ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿದ್ದರು. ಸಿನಿಜೀವನ 2016ರಲ್ಲಿ ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ ' ಕ್ರೇಜಿ ಬಾಯ್ ' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು. ನಂತರ ಮಾಸ್ ಲೀಡರ್, ಮುಗಳು ನಗೆ, ರಾಜು ಕನ್ನಡ ಮೀಡಿಯಂ ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು. 2018ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಷನ್‌ನಲ್ಲಿ ಬಂದ ' ರ‍್ಯಾಂಬೋ 2 ' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು.  ಈ ಚಿತ್ರದ ನಟನೆಗಾಗಿ ಆಶಿಕಾ ಫಿಲ್ಮೀಬೀಟ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಆಶಿಕಾ, ಕನ್ನಡ ಮಾತ್ರವಲ್ಲದೇ ಟಾಲಿವುಡ್‌ನಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. 
ಮುಂದೆ ಓದಿ

ಆಶಿಕಾ ರಂಗನಾಥ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸಿಂಪಲ್ ಸುನಿ 09 May 2025
ಸಿಂಪಲ್ ಸುನಿ 05 Apr 2024
as Actress
ರಾಘವ್ ನಾಯಕ್ 19 Apr 2024
ಚೇತನ್ ಕುಮಾರ್ 17 Mar 2022

ಆಶಿಕಾ ರಂಗನಾಥ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಆಶಿಕಾ ರಂಗನಾಥ್

ಹೆಸರು ಆಶಿಕಾ ರಂಗನಾಥ್
ಹುಟ್ಟಿದ ದಿನ 05 Aug 1996
ವಯಸ್ಸು 30
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಆಶಿಕಾ ರಂಗನಾಥ್ ಆಸ್ತಿ

ಆಸ್ತಿ

ಆಶಿಕಾ ರಂಗನಾಥ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+