X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್ ನಟರ ಈ ಸಿನಿಮಾಗಳು ಅರ್ಧಕ್ಕೆ ನಿಂತಿದ್ಯಾಕೆ ಗೊತ್ತಾ?

Author Administrator | Published: Thursday, November 7, 2024, 03:22 PM [IST]

ಸಾಕಷ್ಟು ಸಿನಿಮಾಗಳು ಘೋಷಣೆಯಾಗಿ ಅರ್ಧಕ್ಕೆ ನಿಂತು ಬಿಡುತ್ತವೆ. ಕೆಲವೊಂದು ಸಿನಿಮಾಗಳು ಶೂಟಿಂಗ್ ಹಂತದಲ್ಲಿ ನಿಂತರೆ ಮತ್ತೆ ಕೆಲವು ಶೂಟಿಂಗ್ ಮುಗಿದರೂ ಪೋಸ್ಟ್ ಪ್ರೊಡಕ್ಷನ್ ಶುರು ಆಗುವುದಿಲ್ಲ. ಇನ್ನೂ ಕೆಲವು ಪೋಸ್ಟ್ ಪ್ರೊಡಕ್ಷನ್ ಮುಗಿದರೂ ಬಿಡುಗಡೆಯ ಭಾಗ್ಯ ಕಾಣುವುದಿಲ್ಲ. ಹೆಚ್ಚಿನ ಚಿತ್ರಗಳು ಬಜೆಟ್ ಕಾರಣಕ್ಕೆ ನಿಂತ,ರೆ ಇನ್ನು ಕೆಲ ಸಿನಿಮಾಗಳು ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿವೆ. ಇಲ್ಲಿ ಅರ್ಧಕ್ಕೆ ನಿಂತ ಸ್ಯಾಂಡಲ್‌ವುಡ್ ನಟರ ಸಿನಿಮಾಗಳ ವಿವರವನ್ನು ನೀಡಲಾಗಿದೆ.


cover image
ಯುವ ರಾಜ್‌ಕುಮಾರ್

ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ 'ಯುವ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಅವರು 'ಯುವ ರಣಧೀರ ಕಂಠೀರವ' ಸಿನಿಮಾ ಮೂಲಕ ಲಾಂಚ್ ಆಗಬೇಕಿತ್ತು. ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು, ಟೀಸರ್ ಕೂಡ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಕೆಜಿಎಫ್ ಖ್ಯಾತಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪುನೀತ್ ರುದ್ರನಾಗ್ ನಿರ್ದೇಶನ ಮಾಡಿದ್ದರು. ಆದರೆ, ಅಪ್ಪು ಮರಣದ ನಂತರ ಎಲ್ಲವೂ ಬದಲಾಗಿ 'ಯುವ' ಸಿನಿಮಾ ಮೂಲಕ ಲಾಂಚ್ ಆದರು. 


ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟನೆಯ 'ದುಬಾರಿ' ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡುವುದಾಗಿ ಖಾತ್ರಿಯಾಗಿತ್ತು. ಇಬ್ಬರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಪೊಗರು ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಸಿನಿಮಾ ಅನೌನ್ಸ್ ಆದ ಕೆಲವೇ ದಿನಗಳ ಬಳಿಕ ಎ ಪಿ ಅರ್ಜುನ್ ಹಾಗೂ ಧ್ರುವಾ ಕಾಂಬಿನೇಷನ್‌ನ ಮಾರ್ಟಿನ್ ಸಿನಿಮಾ ಅನೌನ್ಸ್ ಆಯಿತು. ಇದಾದ ಬಳಿಕ ದುಬಾರಿ ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. 


ಧನಂಜಯ

ನಟ ರಾಕ್ಷಸ ಡಾಲಿ ಧನಂಜಯ್ ಅವರ 'ವಿಜಯಾದಿತ್ಯ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತೆ. ಈ ಚಿತ್ರದಲ್ಲಿ ಡಾಲಿ ಜೊತೆಗೆ ಜಗಪತಿ ಬಾಬು ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಈ ಸಿನಿಮಾ ಕೂಡ ಸೈಲೆಂಟ್ ಆಯಿತು. ಇದರ ಜೊತೆಗೆ 'ಡಾಲಿ' ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. 'ಟಗರು' ಚಿತ್ರದಲ್ಲಿನ 'ಡಾಲಿ' ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಇದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿತ್ತು. ಗಣಪ ಖ್ಯಾತಿಯ ಪ್ರಭು ಶ್ರೀನಿವಾಸ ಆಕ್ಷನ್ ಕಟ್ ಹೇಳಲು ಹೊರಟಿದ್ದರು. 


ದುನಿಯಾ ವಿಜಯ್

ದುನಿಯಾ ವಿಜಯ್ ಅವರ ಅರ್ಧಕ್ಕೆ ನಿಂತ ಸಿನಿಮಾಗಳ ಬಗ್ಗೆ ನೋಡುವುದಾದರೆ, ಹೆಚ್ ವಾಸು ನಿರ್ದೇಶನದಲ್ಲಿ ಮೂಡಿಬರಬೇಕಿದ್ದ ಕೋಬ್ರಾ ಸಿನಿಮಾ. ಶೋಭರಾಜ್, ರವಿ ಕಾಳೆ, ರಮ್ಯಾ ಬರ್ನಾ ಅವರನ್ನು ಒಳಗೊಂಡಿದ್ದ ಈ ಸಿನಿಮಾ ಅರ್ಧದಲ್ಲೇ ಸೈಲೆಂಟ್ ಆಯ್ತು. ಇನ್ನು ದುನಿಯಾ ವಿಜಯ್ ಅವರ 'ಪುಟ್ಟ' ಸಿನಿಮಾವೂ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾ ೨೦೧೨ರಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನಲ್ಲಿ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಸಿನಿಮಾ ಇದುವರೆಗೂ ಬಿಡುಗಡೆಯಾಗಿಲ್ಲ. ಈ ಲಿಸ್ಟ್‌ನಲ್ಲಿ 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾ ಕೂಡ ಇದೆ. ರವಿ ಬೆಳಗೆರೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಬೇಕಿತ್ತು. ಆದರೆ, ಇದು ಕುಮಾರಸ್ವಾಮಿಯವರ ಫ್ಯಾಮಿಲಿಗೆ ಸಂಬಂಧಪಟ್ಟಂತಹ ಕಥೆ ಹೊಂದಿದೆ ಎಂಬ ಕಾರಣಕ್ಕೆ ಕೋರ್ಟ್‌ನಲ್ಲಿ ಸಾಕಷ್ಟು ಕೇಸ್‌ಗಳು ನಡೆದವು. ಆಮೇಲೆನಾಯ್ತು ಎಂಬ ಸುದ್ದಿ ಯಾರಿಗೂ ತಿಳಿದಿಲ್ಲ. 


ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಅಭಿನಯದ ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ರಮ್ಯಾ ಹಾಗೂ ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಸಿನಿಮಾ ಅರ್ಧಕ್ಕೆ ನಿಂತಿದೆ. ನಾಲ್ವರು ಬಾಲ ಕಲಾವಿದರನ್ನು ಒಳಗೊಂಡ ಈ ಚಿತ್ರದಲ್ಲಿ ಅನಿಮೇಷನ್ ಮತ್ತು ವಿಜ್ಯುವಲ್ ಎಫೆಕ್ಟ್​​​​​​ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಒಂದು ಅನಿಮೇಟೆಡ್ ಪಾತ್ರವನ್ನು ಕೂಡಾ ಸೃಷ್ಟಿಸಲಾಗಿರುವ ಈ ಚಿತ್ರ ಭಯೋತ್ಪಾದಕರೊಂದಿಗಿನ ಹೋರಾಟದ ಕಥೆ ಒಳಗೊಂಡಿತ್ತು. ಈ ಸಿನಿಮಾ ಕೂಡ ಬಜೆಟ್ ಕಾರಣದಿಂದ ಅರ್ಧಕ್ಕೆ ನಿಂತಿತ್ತು.  


ಸುದೀಪ್

ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ವೀರ ಪರಂಪರೆ' ಸಿನಿಮಾಗಿಂತಲೂ ಮೊದಲು 'ಬ್ರಹ್ಮ' ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಕುಳ್ಳ ಶಾಂತಕುಮಾರ್ ಎಂದೇ ಹೆಸರಾದ ನಿರ್ಮಾಪಕ ಶಾಂತಕುಮಾರ್ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರವನ್ನು ಮಾಡಲು ಮುಂದಾಗಿದ್ದರು. ಓಂ ಪ್ರಕಾಶ್ ರಾವ್ ಬ್ರಹ್ಮ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಆದರೆ, ಬಜೆಟ್ ಹೆಚ್ಚಾದ ಕಾರಣ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು.  


ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿಬೇಕಿದ್ದ ಒಂದಷ್ಟು ಸಿನಿಮಾಗಳು ಇದೇ ರೀತಿ ಕಾರಣಾಂತರಗಳಿಂದ ನಿಂತಿವೆ. ಅದರಲ್ಲಿ ಕೆಲವು ಅಧಿಕೃವಾಗಿ ಘೋಷಣೆ ಸಹ ಆಗಿರಲಿಲ್ಲ. ಈ ಪೈಕಿ ಗೋಲ್ಡ್ ರಿಂಗ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಕ್‌ಲೈನ್ ವೆಂಕಟೇಶ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗಿತ್ತು. ಇದರಲ್ಲಿ ದರ್ಶನ್ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.  ಆದ್ರೀಗ 'ಗೋಲ್ಡ್ ರಿಂಗ್' ಕಥೆ ಏನಾಯ್ತು? ಮುಂದೆ ಈ ಸಿನಿಮಾ ತೆರೆಗೆ ಬರಲಿದ್ಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದಲ್ಲದೇ  ಆಸ್ಫೋಟ, ಸರ್ವಾಂತರ್ಯಾಮಿ, ನವಗ್ರಹ 2 ಸಿನಿಮಾಗಳು ಅರ್ಧಕ್ಕೆ  ನಿಂತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+