90ರ ದಶಕದಲ್ಲಿ ಕನ್ನಡ ಚಿತ್ರರಂಗ ರಿಮೇಕ್ ಗೆ ಹೆಚ್ಚು ಒತ್ತು ನೀಡಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ರಿಮೇಕ್ ಪ್ರಮಾಣ ಕಡಿಮೆಯಾಗಿದೆ. ಈಗ ಕನ್ನಡ ಸಿನಿಮಾಗಳು ಬೇರೆ-ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿವೆ. 1958ರಲ್ಲಿ ಸದ್ದು ಮಾಡಿದ್ದ ಸ್ಕೂಲ್ ಮಾಸ್ಟರ್ ಸಿನಿಮಾದದಿಂದ ಹಿಡಿದು ಹಲವು ಸ್ಯಾಂಡಲ್‌ವುಡ್ ಚಿತ್ರಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗಿವೆ. ಹಲವು ಸಿನಿಮಾಗಳು ಒಂದೆರಡು ಭಾಷೆಗಳಿಗೆ ರಿಮೇಕ್ ಆಗಿದ್ದರೆ, ಕೆಲವು ನಾಲ್ಕಕ್ಕಿಂತ ಹೆಚ್ಚು ಭಾಷೆಗಳಿಗೆ ರಿಮೇಕ್ ಆಗಿವೆ. ಇಲ್ಲಿ ಅತಿಹೆಚ್ಚು ಭಾಷೆಗಳಿಗೆ ರಿಮೇಕ್ ಆದ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.