ಸಿನಿಮಾ ನಟ-ನಟರು ತಮ್ಮ ಒಂದೊಂದು ಸಿನಿಮಾಗಳಲ್ಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಕೊಂಚ ಹೆಚ್ಚಾಗಿದೆ ಅಂತಲೇ ಹೇಳಬಹುದು. ತೆರೆ ಮೇಲೆ ಎಲ್ಲರನ್ನು ರಂಜಿಸುವ ಕಲಾವಿದರಿಗೆ ಮುಖದ ಸೌಂದರ್ಯ ಕೂಡ ಮುಖ್ಯವಾಗುತ್ತದೆ. ನೋಡಲು ಸುಂದರವಾಗಿದ್ದು, ಪ್ರತಿಭೆಯಿದ್ದರೆ ಆ ನಟ ಪ್ರೇಕ್ಷಕರ ಮೆಚ್ಚುಗೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ನಮ್ಮ ಚಂದನವನದ 80-90ರ ದಶಕದ ನಟರು ಕೂಡ ತಮ್ಮ ಅದ್ಭುತ ನಟನೆ ಜೊತೆಗೆ ಹ್ಯಾಂಡ್ಸಮ್ ಲುಕ್‌ನಿಂದಲೇ ಸಿನಿಪ್ರಿಯರ ಮನಗೆದ್ದಿದ್ದರು. ಇಲ್ಲಿ ಸ್ಯಾಂಡಲ್‌ವುಡ್‌ನ ಆ ಕಾಲದ ಚಾಕೊಲೇಟ್ ಹೀರೋಸ್‌ಗಳ ಪಟ್ಟಿಯನ್ನು ನೀಡಲಾಗಿದೆ.