twitter
    X
    Home ಚಲನಚಿತ್ರಗಳ ಒಳನೋಟ

    2020 ರಲ್ಲಿ ನಿಧನರಾದ ಭಾರತೀಯ ಸಿನಿತಾರೆಯರು

    Author Administrator | Updated: Saturday, May 15, 2021, 09:59 AM [IST]

    2020 ರ ವರ್ಷ ಭಾರತೀಯ ಚಿತ್ರರಂಗಕ್ಕೆ ಒಂದು ತರ ಗ್ರಹಣ ತಂದಿದೆ. ಮಹಾಮಾರಿ ಕೊರೋನಾ ಆತಂಕದಿಂದ ಚಿತ್ರಮಂದಿರ ಮತ್ತು ಚಲನಚಿತ್ರಗಳ ಕೆಲಸಗಳು ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದವು. ಈ ಸಮಯದಲ್ಲಿ ಕೆಲವು ಪ್ರಮುಖ ಸಿನಿತಾರೆಯರು ವಿವಿಧ ಕಾರಣಗಳಿಂದ ವಿಧಿವಶರಾಗಿದ್ದಾರೆ. ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿ ಅನಿರೀಕ್ಷಿತವಾಗಿ ಬಾರದ ಲೋಕಕ್ಕೆ ಹೋದ ಸಿನಿತಾರೆಯರನ್ನು ಇಲ್ಲಿ ನೀಡಲಾಗಿದೆ.

    cover image
    ಇರ್ಫಾನ್ ಖಾನ್

    ಇರ್ಫಾನ್ ಖಾನ್

    1

    ಹಿಂದಿ ಚಿತ್ರರಂಗದಲ್ಲಿ ಮಕಬೂಲ್, ಹಿಂದಿ ಮೀಡಿಯಂ, ಪಾನ್ ಸಿಂಗ್ ತೋಮರ್ ನಂತಹ ಅದ್ಭುತ ಚಿತ್ರಗಳನ್ನು ನೀಡಿ ಪ್ರೇಕ್ಷಕರನ್ನು ತಮ್ಮ ಆಳವಾದ ನೋಟದಿಂದ ಸೆರೆ ಹಿಡಿದಿದ್ದ ಇರ್ಫಾನ್ ಖಾನ್ ಎಪ್ರಿಲ್ 29, 2020 ರಂದು ನಿಧನರಾದರು. ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಇರ್ಫಾನ್ ಕರುಳಿನ ಸೋಂಕಿನಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು. ಹಾಲಿವುಡ್ ನಲ್ಲಿಯೂ ಲೈಫ್ ಆಫ್ ಪೈ, ಜುರಾಸಿಕ್ ವರ್ಲ್ಡ್, ಸ್ಲಮ್ ಡಾಗ್ ಮಿಲಿಯನೇರ್ ಮುಂತಾದ ಚಿತ್ರಗಳಲ್ಲಿ ನಟಿಸಿ ಭಾರತೀಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದರು.

    ಬುಲೆಟ್ ಪ್ರಕಾಶ್

    ಬುಲೆಟ್ ಪ್ರಕಾಶ್

    2

    ತಮ್ಮ ಹಾಸ್ಯ ನಟನೆಯಿಂದ ಕನ್ನಡಿಗರಿಗೆ ಕಚಗುಳಿಯಿಟ್ಟಿದ್ದ ಬುಲೆಟ್ ಪ್ರಕಾಶ್ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದರು.ತೂಕ ಇಳಿಸಿಕೊಳ್ಳುಲು ಆಪರೇಷನ್ ಗೆ ಒಳಗಾಗಿದ್ದ ಪ್ರಕಾಶ್ ಮುಂದೆ ಹಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸತೊಡಗಿದರು. ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ರಾಜಾಜಿನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ 2020 ಎಪ್ರಿಲ್ 6 ರಂದು ವಿಧಿವಶರಾದರು.

    ರಿಷಿ ಕಪೂರ್

    ರಿಷಿ ಕಪೂರ್

    3

    ಮೇರಾ ನಾಮ್ ಜೋಕರ್ ಚಿತ್ರದಿಂದ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ್ದ ರಿಷಿ ಕಪೂರ್ ಮುಂದೆ ಬಾಬಿ, ಚಾಂದಿನಿ, ಅಮರ್ ಅಕ್ಬರ್ ಅಂಥೋನಿ ಮುಂತಾದ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದ ಪ್ರಮುಖ ನಟರಾಗಿ ಬೆಳದರು. ತುಂಬು ಕಲಾಕುಟುಂಬದಿಂದ ಬಂದ ರಿಷಿ ಕಪೂರ್ ಬಾಲಿವುಡ್ ನಲ್ಲಿ ಪ್ರೀತಿಯಿಂದ ಚಿಂಟು ಎಂದೇ ಕರೆಸಿಕೊಳ್ಳುತ್ತಿದ್ದರು. ಲ್ಯುಕೋಮಿಯಾದಿಂದ ಬಳಲುತ್ತಿದ್ದ ರಿಷಿ ಕಪೂರ್ ಎಪ್ರಿಲ್ 30, 2020 ರಂದು ಮುಂಬೈನ್ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಿಧನರಾದರು.

    ಚಿರಂಜೀವಿ ಸರ್ಜಾ

    ಚಿರಂಜೀವಿ ಸರ್ಜಾ

    4

    ವಾಯುಪುತ್ರನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ಚಿರು, ಆಟಗಾರ, ಚಂದ್ರಲೇಖಾ ಮುಂತಾದ ಚಿತ್ರಗಳಿಂದ ಖ್ಯಾತಿ ಪಡೆದ ಚಿರಂಜೀವಿ ಸರ್ಜಾ ದಿವಂಗತ ಖಳನಟ ಶಕ್ತಿ ಪ್ರಸಾದ್ ಕಲಾ ಕುಟುಂಬದ ಕುಡಿ. ಮಾವ ಅರ್ಜುನ್ ಸರ್ಜಾ, ತಮ್ಮ ಧ್ರುವ, ಪತ್ನಿ ಮೇಘನಾ ಹೀಗೆ ಎಲ್ಲರೂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. 2018 ರಲ್ಲಿ ಮೇಘನಾರನ್ನು ಕೈ ಹಿಡಿದಿದ್ದ ಚಿರು ಇನ್ನೂ ಕೆಲವೇ ತಿಂಗಳುಗಳಲ್ಲಿ ತಂದೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ದುರ್ದೈವವಶಾತ್ ಜೂನ್ 7, 2020 ರಂದು ಹೃದಯಾಘಾತದಿಂದ ವಿಧಿವಶರಾದರು.

    ಸುಶಾಂತ್ ಸಿಂಗ್ ರಜಪೂತ್

    ಸುಶಾಂತ್ ಸಿಂಗ್ ರಜಪೂತ್

    5

    ಕಿರುತೆರೆ ಹಿನ್ನಲೆಯಿಂದ ಬಂದು 2013 ರಲ್ಲಿ ಕಾಯ್ ಪೋ ಚೆ ಚಿತ್ರದಿಂದ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ಸುಶಾಂತ್ ಸಿಂಗ್ ರಜಪೂತ್ ಪ್ರತಿಭಾನಿತ್ವ ನಟ, ಎಂ.ಎಸ್.ಧೋನಿ, ಕೇದಾರನಾಥ್, ಚಿಚೋರೆ, ರಾಬ್ತಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಖಗೋಳ ವಿಜ್ಙಾನದಲ್ಲಿ ಅಪಾರ ಆಸಕ್ತಿಯಿದ್ದ ಸುಶಾಂತ್ ಮನೆಯಲ್ಲಿ ಒಂದು ದೂರದರ್ಶಕ ಮಾತ್ರವಲ್ಲದೇ ಚಂದ್ರನ ಮೇಲೆ ಒಂದು ಜಾಗವನ್ನು ಖರೀದಿಸಿದ್ದರು. ಬಾಲಿವುಡ್ ನ ಕೆಲ ವ್ಯಕ್ತಿಗಳ ಸ್ವಜನಪಕ್ಷಪಾತದಿಂದ ಚಿಚೋರೆ ಚಿತ್ರದ ನಂತರ ನಟಿಸಲು ಒಪ್ಪಿಕೊಂಡಿದ್ದ ಏಳು ಚಿತ್ರಗಳಿಂದ ಸುಶಾಂತ್ ರನ್ನು ಕೈ ಬಿಡಲಾಯಿತು. ಇದರಿಂದ ತೀವ್ರ ಖಿನ್ನತೆಗೆ ಒಳಗಾದ ಸುಶಾಂತ್ ಜೂನ್ 15, 2020 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

    ಬಸು ಚಟರ್ಜಿ

    ಬಸು ಚಟರ್ಜಿ

    6

    ಬಾಲಿವುಡ್ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದ ಹಿರಿಯ ನಿರ್ದೇಶಕ ಬಸು ಚಟರ್ಜಿ ಜೂನ್ 4, 2020 ರಂದು ಮುಂಬೈನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಕೆಲವು ಬಂಗಾಳಿ ಚಿತ್ರಗಳನ್ನು ನಟಿಸಿದ್ದ ಇವರು ಹಲವು ಫಿಲ್ಮ್‍ ಫೇರ್ ಸೇರಿದಂತೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.ಚಿತ್ ಚೋರ್, ರಜನಿಗಂಧ, ಖಟ್ಟಾ ಮೀಠಾ ಸ್ವಾಮಿ, ಚಮೇಲಿ ಕಿ ಶಾದಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    ವಾಜಿದ್ ಖಾನ್

    ವಾಜಿದ್ ಖಾನ್

    7

    ಬಾಲಿವುಡ್ ಚಿತ್ರರಂಗದಲ್ಲಿ ಸಾಜಿದ್-ವಾಜಿದ್ ಖಾನ್ ಸಹೋದರ ಜೋಡಿ ಸಂಗೀತ ನಿರ್ದೇಶಕರಾಗಿ ತುಂಬಾ ಖ್ಯಾತಿ ಪಡೆದಿದ್ದರು. ಬಹುತೇಕ ಸಲ್ಮಾನ್ ಖಾನ್ ಚಿತ್ರಗಳಿಗೆ ಈ ಜೋಡಿ ಸಂಗೀತ ನೀಡಿತ್ತು. ದಬಾಂಗ್ 3, ಮೈ ತೇರಾ ಹೀರೋ, ಎಕ್ ಥಾ ಟೈಗರ್, ರೌಡಿ ರಾಥೋಡ್ ಮುಂತಾದ ಹಿಟ್ ಚಿತ್ರಗಳಿಗೆ ಇವರ ಸಂಗೀತವಿತ್ತು. ಇವರಲ್ಲಿ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಾಜಿದ್ ಖಾನ್ ಕೊರೊನಾ ಸೊಂಕಿನಿಂದ ಜೂನ್ 1, 2020 ರಂದು ಮೃತಪಟ್ಟರು.

    ಮೈಕಲ್ ಮಧು

    ಮೈಕಲ್ ಮಧು

    8

    ಮೈಕಲ್ ಮಧು ಕನ್ನಡ ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಖ್ಯಾತಿ ಗಳಿಸಿದ್ದರು. ಯಜಮಾನ, ಓಂ, ಶ! , ಭಜರಂಗಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮೇ 13, 2020 ರಂದು ಹೃದಯಾಘಾತದಿಂದ ತಮ್ಮ 51 ನೇ ವಯಸ್ಸಿನಲ್ಲಿ ನಿಧನರಾದರು.

    ಮೆಬಿನಾ ಮೈಕಲ್

    ಮೆಬಿನಾ ಮೈಕಲ್

    9

    ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನಾಲ್ಕನೇ ಸೀಸನ್ ಗೆದ್ದು ಬೆಳಕಿಗೆ ಬಂದಿದ್ದ ಮೆಬಿನಾ ಮೈಕಲ್ ನಂತರ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು. ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿ ಬಂದಿತ್ತು. ಹಾಗೇ ಮಾಡೆಲಿಂಗ್ ನಲ್ಲೂ ಸಕ್ರಿಯವಾಗಿದ್ದರು. ಮೇ 26, 2020 ರಾತ್ರಿ ಇವರು ಚಲಿಸುತ್ತಿದ್ದ ಕಾರು ಬೆಳ್ಳೂರು ಕ್ರಾಸ್ ಹತ್ತಿರ ಟ್ರಾಕರ್ ಗೆ ಡಿಕ್ಕಿ ಹೊಡೆದು ತಮ್ಮ 23 ನೇ ವಯಸ್ಸಿನಲ್ಲಿ ಮೃತಪಟ್ಟರು.

    ರಾಕಲೈನ್ ಸುಧಾಕರ್

    ರಾಕಲೈನ್ ಸುಧಾಕರ್

    10

    ಹಲವು ಚಿತ್ರಗಳಲ್ಲಿ ಪೋಷಕ ನಟನ ಪಾತ್ರಗಳಿಂದ ಮಿಂಚಿದ್ದ ರಾಕಲೈನ್ ಸುಧಾಕರ್ 2020 ಸೆಪ್ಟೆಂಬರ್ 24 ರಂದು `ಶುಗರ್ ಲೆಸ್' ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ಹೃದಯಾಘಾತದಿಂದ ನಿಧನರಾದರು. ಆಗತಾನೇ ಕೋವಿಡ್ 19 ದಿಂದ ಚೇತರಿಸಿಕೊಂಡು ಶೂಟಿಂಗ್ ಗೆ ಹಾಜರಾಗಿದ್ದರು. ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದಿಂದ ಸಿನಿದುನಿಯಾಕ್ಕೆ ಎಂಟ್ರಿ ಕೊಟ್ಟಿದ್ದರು.

    ರವಿ ಬೆಳೆಗೆರೆ

    ರವಿ ಬೆಳೆಗೆರೆ

    11

    ಖ್ಯಾತ ಪತ್ರಕರ್ತ, ಸಾಹಿತಿ ಮತ್ತು ನಟ ರವಿ ಬೆಳಗೆರೆ 2020 ನವೆಂಬರ್ 13 ರಂದು ಹೃದಯಾಘಾತದಿಂದ ನಿಧನರಾದರು. ಹಾಯ್ ಬೆಂಗಳೂರು ಮೂಲಕ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮೂಡಿಸಿದ್ದ ಬೆಳಗೆರೆ ಕೆಲ ಚಿತ್ರಗಳಲ್ಲಿ ನಟಿಸಿವುದರ ಜೊತೆಗೆ ಕೆಲ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X