X
ಹೋಮ್ » ಸೆಲಬ್ರಿಟಿಗಳು » ಇರ್ಫಾನ್ ಖಾನ್
ಇರ್ಫಾನ್ ಖಾನ್

ಇರ್ಫಾನ್ ಖಾನ್

ಜೀವನ ಚರಿತ್ರೆ :  ಇರ್ಫಾನ್ ಖಾನ್ ಹಿಂದಿ ಚಿತ್ರರಂಗದಲ್ಲಿ ತಮ್ಮ ನೈಸರ್ಗಿಕ ಅಭಿನಯದಿಂದ ಅಚ್ಚಳಿಯದ ಛಾಯೆಯನ್ನು ಮೂಡಿಸಿದ್ದಾರೆ. ಹಿಂದಿ ಮಾತ್ರವಲ್ಲದೇ ಕೆಲ ಬ್ರಿಟಿಷ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಮೂವತ್ತು ವರ್ಷಗಳ ಸಿನಿ ಜೀವನದಲ್ಲಿ ಸುಮಾರು ಎಂಭತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಫಿಲ್ಮ್ಸ್ ಫೇರ್ ಮುಂತಾದ ಪ್ರಶಸ್ತಿಗಳ್ನು ಪಡೆದಿದ್ದಾರೆ. 1988 ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕೆಲ ಚಿತ್ರಗಳಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸಿದರೂ, ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು 2007 ರಲ್ಲಿ ತೆರೆಕಂಡ ಲೈಫ್ ಇನ್ ಮೆಟ್ರೋ ಚಿತ್ರ. 2011 ರಲ್ಲಿ ತೆರೆಕಂಡ ಪಾನ್ ಸಿಂಗ್ ತೋಮರ್ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ಸ್ ಫೇರ್ ಕ್ರಿಟಿಕ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಲಂಚ್ ಬಾಕ್ಸ್, ಹೈದರ್, ಪೀಕು ,ತಲ್ವಾರ್ ಮುಂತಾದ ಚಿತ್ರಗಳು ಇರ್ಫಾನ್ ಖಾನ್ ಗೆ ಒಳ್ಳೆ ಹೆಸರು ತಂದು ಕೊಟ್ಟಿತು. 2017 ರಲ್ಲಿ ತೆರೆಕಂಡ ಹಿಂದಿ ಮೀಡಿಯಂ ಚಿತ್ರ ಉತ್ತಮ ವಿಮರ್ಶೆ ಪಡೆದು ಬಾಕ್ಸಾಫೀಸಿನಲ್ಲಿ 320 ಕೋಟಿಗೂ ಅಧಿಕ ಹಣ ಗಳಿಸಿತು.   2018 ರಲ್ಲಿ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಗೆ ತುತ್ತಾದರು. ಕರುಳಿನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್ ಖಾನ್ 2020 ಎಪ್ರಿಲ್ 29 ರಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು.     ಇರ್ಫಾನ್ ಖಾನ್ ನಟಿಸಿದ ಇಂಗ್ಲೀಷ್ ಚಿತ್ರಗಳು 1. The Warrior (2001) 2. The Namesake (2006) 3. The Darjeeling Limited (2007) 4. Slumdog Millionaire (2008) 5. New York, I Love You (2009) 6. The Amazing Spider-Man (2012) 7. Life of Pi (2012) 8. Jurassic World (2015) 9. Inferno (2016)
ಮುಂದೆ ಓದಿ

ಇರ್ಫಾನ್ ಖಾನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಇರ್ಫಾನ್ ಖಾನ್

ಹೆಸರು ಇರ್ಫಾನ್ ಖಾನ್
ಹುಟ್ಟಿದ ದಿನ 07 Jan 1967
ವಯಸ್ಸು 59
ಹುಟ್ಟಿದ ಸ್ಥಳ Jaipur
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಇರ್ಫಾನ್ ಖಾನ್ ಆಸ್ತಿ

ಆಸ್ತಿ

ಇರ್ಫಾನ್ ಖಾನ್ ಫೋಟೋಗಳು

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+