twitter
    X
    Home ಚಲನಚಿತ್ರಗಳ ಒಳನೋಟ

    ಬಾಕ್ಸಿಂಗ್ ಆಧಾರಿತ ಕನ್ನಡ ಚಲನಚಿತ್ರಗಳು

    Author Administrator | Updated: Wednesday, May 25, 2022, 03:11 PM [IST]

    ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಕ್ರೀಡಾತ್ಮಕ ಚಿತ್ರಗಳು ಬಿಡುಗಡೆಯಾಗುವುದು ಹಿಂದಿ ಭಾಷೆಯಲ್ಲಿ. ಕನ್ನಡದಲ್ಲಿ ತೆರೆಕಂಡ ಕ್ರೀಡಾತ್ಮಕ `ಕೊಟ್ರೇಶಿ ಕನಸು' ಚಿತ್ರ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿತ್ತು. ಬಾಕ್ಸಿಂಗ್ ಚಿತ್ರಗಳ ವಿಚಾರಕ್ಕೆ ಬಂದರೆ ಡಾ. ರಾಜಕುಮಾರ್ `ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಟೈಗರ್ ಪ್ರಭಾಕರ್ ರ ಬಹುತೇಕ ಚಿತ್ರಗಳಲ್ಲಿ ಫೈಟಿಂಗ್ ದೃಶ್ಯಗಳಲ್ಲಿ ಬಾಕ್ಸಿಂಗ್ ಶೈಲಿ ಬಳಸುತ್ತಿದ್ದರು. ಇಲ್ಲಿ ಕನ್ನಡದ ಅತ್ಯುತ್ತಮ ಬಾಕ್ಸಿಂಗ್ ಚಿತ್ರಗಳನ್ನು ನೀಡಿದೆ.

    cover image
    ತಾಯಿಗೆ ತಕ್ಕ ಮಗ

    ತಾಯಿಗೆ ತಕ್ಕ ಮಗ

    1

    ಡಾ. ರಾಜಕುಮಾರ್ ಮತ್ತು ಪದ್ಮಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ರಾಜ್ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದರು. ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್ ರವರು ಪೂರ್ಣಿಮಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. ಸಾಕು ತಂದೆ-ತಾಯಿಗಳ ಆಶ್ರಯದಲ್ಲಿ ಬೆಳೆಯುವ ಕುಮಾರ್ ಬಾಕ್ಸಿಂಗ್ ಮೂಲಕ ತನ್ನ ನಿಜವಾದ ತಂದೆಯ ಹಂತಕರ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯನ್ನು ಚಿತ್ರ ಹೊಂದಿತ್ತು.

    ಯುವರಾಜ

    ಯುವರಾಜ

    2

    ತೆಲುಗಿನ ತಮ್ಮಡು ಚಿತ್ರದ ರಿಮೇಕ್ ಆದ ಯುವರಾಜ ಚಿತ್ರದಲ್ಲಿ ಶಿವರಾಜಕುಮಾರ್ ,ಲೀಸಾ ರೇ, ಕುಮಾರ್ ಗೋವಿಂದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ತೆಲುಗು ನಿರ್ದೇಶಕ ಪುರಿ ಜಗನ್ನಾಥ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಶಿವಣ್ಣ ಮತ್ತು ಕುಮಾರ್ ಗೋವಿಂದ್ ಬಾಕ್ಸರ್ ಪಾತ್ರಗಳಲ್ಲಿ ನಟಿಸಿದ್ದರು. ಯಾವುದೇ ಜವಾಬ್ದಾರಿ ಇಲ್ಲದೇ ಕಾಲೇಜಿನಲ್ಲಿ ಓದಿಕೊಂಡಿದ್ದ ರಾಜ್ ತನ್ನ ಅಣ್ಣನಿಗಾಗಿ ಬಾಕ್ಸಿಂಗ್ ಕಣಕ್ಕಿಳಿಯುತ್ತಾನೆ.

    ಮೌರ್ಯ

    ಮೌರ್ಯ

    3

    ತೆಲುಗಿನ ಚಿತ್ರದ ರಿಮೇಕ್ ಆದ ಮೌರ್ಯ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕಿಕ್ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದರು. ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ರಾಕಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಭಿನ್ನಾಭಿಪ್ರಾಯಗಳಿಂದ ತನ್ನನ್ನು ಮತ್ತು ತನ್ನ ತಾಯಿಯನ್ನು ತೊರೆದಿದ್ದ ತಂದೆಯನ್ನು ಅರಸುತ್ತಾ ಹೋಗುವ ನಾಯಕ ಕೊನೆಗೆ ಹೇಗೆ ತನ್ನ ತಂದೆಯ ಆಸೆಯನ್ನು ಪೂರೈಸುತ್ತಾನೆ ಎಂಬುದು ಚಿತ್ರದ ಕಥೆ.

    ಬಾಕ್ಸರ್

    ಬಾಕ್ಸರ್

    4

    ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದ ಬಾಕ್ಸರ್ ಚಿತ್ರದಲ್ಲಿ ಧನಂಜಯ್ ಮತ್ತು ಕೃತಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂಧಳೊಬ್ಬಳ ಪ್ರೀತಿಯಲ್ಲಿ ಬೀಳುವ ನಿವೃತ್ತ ಬಾಕ್ಸರ್ ಒಬ್ಬ ಅವಳ ಚಿಕಿತ್ಸೆಗಾಗಿ ಮತ್ತೆ ಬಾಕ್ಸಿಂಗ್ ಇಳಿಯುತ್ತಾನೆ. ಜಯಣ್ಣ ಮತ್ತು ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

    ಪೈಲ್ವಾನ್

    ಪೈಲ್ವಾನ್

    5

    ಖ್ಯಾತ ಕುಸ್ತಿ ಪಟುವೊಬ್ಬ ಮದುವೆ ನಂತರ ಕುಸ್ತಿಯಿಂದ ನಿವೃತ್ತನಾಗುತ್ತಾನೆ. ಆದರೆ ಮುದೊಂದು ದಿನ ಒಂದು ದೊಡ್ಡ ಸಮಾಜಮುಖಿ ಕೆಲಸಕ್ಕಾಗಿ ಬಾಕ್ಸಿಂಗ್ ಆಖಾಡಕ್ಕೆ ಇಳಿಯುತ್ತಾನೆ. ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಬಾಕ್ಸಿಂಗ್ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದರು. ಚಿತ್ರ ಬಾಕ್ಸಾಫೀಸಿನಲ್ಲಿ ಭರ್ಜರಿ ಯಶಸ್ಸು ಪಡೆಯಿತು.

    10

    10

    6

    ಕರ್ಮ ಚಾಮ್ಲಾ ನಿರ್ದೇಶನದಲ್ಲಿ ಮೂಡಿ ಬಂದಿರುವ 10 ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಾಕ್ಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X