ನಿಜ ಜೀವನದ ರೌಡಿಸಂ ಕಥೆ ಆಧರಿಸಿ ಯಶಸ್ವಿಯಾದ ಕನ್ನಡ ಸಿನಿಮಾಗಳ ಪಟ್ಟಿ

  ಸ್ಯಾಂಡಲ್​ವುಡ್​ನಲ್ಲಿ ಟ್ರೆಂಡ್ ಸೆಟರ್ ರೌಡಿಸಂ ಸಿನಿಮಾ ಅಂದರೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ. ಈ ಸಿನಿಮಾ ನಂತರ ಸ್ಯಾಂಡಲ್​​​​​​​​​​ವುಡ್​​​​ನಲ್ಲಿ ರೌಡಿಸಂ ಸಿನಿಮಾಗಳು ತಯಾರಾಗಲು ಪ್ರಾರಂಭವಾದವು. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್​ಕುಮಾರ್ ಲಾಂಗ್ ಹಿಡಿಯೋ ಸ್ಟೈಲ್ ಜನರಿಗೆ ಬಹಳ ಇಷ್ಟವಾಗಿತ್ತು. ಆ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ನಿಜ ಜೀವನದ ರೌಡಿಸಂ ಕಥೆ ಆಧರಿತ ಚಿತ್ರಗಳು ಮೂಡಿಬಂದವು. ಹೀಗೆ ನಿಜ ಜೀವನದ ರೌಡಿಸಂ ಕಥೆ ಆಧರಿಸಿ ಯಶಸ್ವಿಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
  1. ಓಂ
  ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ 'ಓಂ'. ಈ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡಿದ್ದರು. ನಿರ್ದೇಶಕ ಉಪೇಂದ್ರ ಕೆಲವು ಪತ್ರಿಕೆಗಳಲ್ಲಿ ಬಂದ ನೈಜ ಘಟನೆಗಳ ಜೊತೆಗೆ ನಿಜವಾದ ರೌಡಿಗಳ ಕಥೆಯನ್ನು ಬೆಳ್ಳಿ ತೆರೆ ಮೇಲೆ ತೋರಿಸುವ ಮೂಲಕ ರೌಡಿಸಂ, ಶಾಶ್ವತ ಅಲ್ಲ ಎಂಬ ಜಾಗೃತಿಯನ್ನು ಮೂಡಿಸಿದ್ದರು. ಜೇಡರಹಳ್ಳಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಮುಂತಾದ ನಿಜ ಜೀವನದ ರೌಡಿಗಳು 'ಓಂ' ಚಿತ್ರದಲ್ಲಿ ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು. ಕಪಾಲಿ ಚಿತ್ರಮಂದಿರದಲ್ಲಿಯೇ ಇದು 30 ಬಾರಿ ಬಿಡುಗಡೆಯಾಗಿತ್ತು. ಸಿನಿಮಾವೊಂದು ಒಂದೇ ಚಿತ್ರಮಂದಿರದಲ್ಲಿ ಇಷ್ಟು ಬಾರಿ ಬಿಡುಗಡೆಯಾದ ಬೇರೆ ನಿದರ್ಶನವಿಲ್ಲ.  ಸಾಮಾನ್ಯವಾಗಿ ಚಿತ್ರಗಳು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಅದರ ಉಪಗ್ರಹ ಪ್ರಸಾರ ಹಕ್ಕು ಮಾರಾಟವಾಗುತ್ತದೆ. ಆದರೆ ಓಂ 1995ರಲ್ಲಿ ಬಿಡುಗಡೆಯಾಗಿದ್ದರೂ ಅದರ ಸ್ಯಾಟಲೈಟ್ ಹಕ್ಕು ಮಾರಾಟವಾಗಿದ್ದು 2015ರಲ್ಲಿ. ಅದೂ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು.

  ಓಂ ನಂತರ ಕನ್ನಡ ಚಿತ್ರರಂಗದಲ್ಲಿ ಬಂದ ನೈಜ ಘಟನೆಯ ರೌಡಿಸಂ ಸಿನಿಮಾ ಆ ದಿನಗಳು. ಇದು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ರಿಯಲ್ ಸ್ಟೋರಿ ಸಿನಿಮಾ. ಅಂದಿನ ರೌಡಿಸಂ ದಿನಗಳಲ್ಲಿ ಗುರುತಿಸಿಕೊಂಡಿದ್ದ, ಬರಹಗಾರ ಅಗ್ನಿ ಶ್ರೀಧರ್ ಬರೆದಿರುವ ನೈಜ ಕಥೆಯನ್ನು ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದರು. 'ಆ ದಿನಗಳು' ಸಿನಿಮಾ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸಿದ್ದ ಕೊತ್ವಾಲ್​​​ ರಾಮಚಂದ್ರ ಎಂಬ ರೌಡಿಯ ಕಥೆಯನ್ನು 'ಆ ದಿನಗಳು' ಸಿನಿಮಾ ಒಳಗೊಂಡಿತ್ತು. 2007ರಲ್ಲಿ ತೆರೆಕಂಡ ಈ ಸಿನಿಮಾ ನೈಜ ಕಥೆ ಆಧರಿಸಿದ್ದ ಕಾರಣಕ್ಕೆ ಸಕ್ಸಸ್ ಕಂಡು ನಟ ಚೇತನ್​​​ಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಈ ಸಿನಿಮಾ ಬಳಿಕ ನಟ ಚೇತನ್, ಆ ದಿನಗಳು ಹೀರೋ ಎಂದೇ ಗುರುತಿಸಿಕೊಂಡಿದ್ದಾರೆ.

  2007ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾ ನಂತರ ಕನ್ನಡದಲ್ಲಿ ಬಂದ ಮತ್ತೊಂದು ರೌಡಿಸಂ ಸಿನಿಮಾ ಅಂದರೆ ಡೆಡ್ಲಿ ಸೋಮ. 2005ರಲ್ಲಿ ತೆರೆಕಂಡ 'ಡೆಡ್ಲಿ ಸೋಮ' ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಬರಹಗಾರ ರವಿ ಬೆಳಗೆರೆ ಈ ಕಥೆಯನ್ನು ಬರೆದರೆ, ರವಿ ಶ್ರೀವತ್ಸ ಚಿತ್ರಕ್ಕೆ ಸಾರಥಿಯಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ನಟ ಆದಿತ್ಯ  ಡೆಡ್ಲಿ ಸೋಮನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಕಾರಣ  ನಿರ್ದೇಶಕ ರವಿ ಶ್ರೀವತ್ಸ 'ಡೆಡ್ಲಿ ಸೋಮ ಭಾಗ 2' ಕೂಡ ಮಾಡಿದ್ದರು.  

   

  4. ಸ್ಲಂ ಬಾಲ

  ನಂತರ ಬಂದ ಚಿತ್ರ 'ಸ್ಲಂ ಬಾಲ'. 2008ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದರು. ಅಂಡರ್ ವರ್ಲ್ಡ್ ಕಥೆ ಆಧರಿಸಿದ ಕಥೆಯನ್ನು ಮಹಿಳಾ ನಿರ್ದೇಶಕಿ ಸಿನಿಮಾವಾಗಿ ಹೊರತಂದಿದ್ದು ವಿಶೇಷವಾಗಿತ್ತು. ಬೆಂಗಳೂರು ಭೂಗತ ಜಗತ್ತಿನ ಕುಖ್ಯಾತ ರೌಡಿಗಳನ್ನು ಗಡಿಪಾರು ಮಾಡುವ ಕಥೆ ಆಧರಿಸಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಗಡಿಪಾರು ಆಗುವ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡಾ ನೈಜ ಘಟನೆ ಆಧರಿಸಿದ್ದರಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

  2008ರಲ್ಲಿ ಬಿಡುಗಡೆಯಾದ ಸ್ಲಂ ಬಾಲ ಸಿನಿಮಾ ಬಳಿಕ ಬಂಡ ಮತ್ತೊಂದು ಚಿತ್ರ ಎದೆಗಾರಿಕೆ. ಈ ಸಿನಿಮಾವನ್ನು ಕೂಡ ನಿರ್ದೇಶಕಿ ಸುಮನಾ ನಿರ್ದೇಶಿಸಿದ್ದರು.  ಈ ಚಿತ್ರದಲ್ಲಿ ಆದಿತ್ಯ ಮುಂಬೈ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಇದು ಬರಹಗಾರ ಅಗ್ನಿ ಶ್ರೀಧರ್​​​​​​​​​​ ಬರೆದ ಕಥೆಯಾದ್ದರಿಂದ ಇದು ಕೂಡ ಯಶಸ್ವಿಯಾಗಿತ್ತು. 

  ಎದೆಗಾರಿಕೆ ನಂತರ ಸ್ಯಾಂಡಲ್​ವುಡ್​ನಲ್ಲಿ ಮೂಡಿಬರುತ್ತಿರುವ ರೌಡಿಸಂ ಆಧಾರಿತ ಸಿನಿಮಾ ಹೆಡ್ ಬುಷ್. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ 70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗಲಿದೆ. 

  Related Lists
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X