X
ಕನ್ನಡ » ಚಲಚಿತ್ರಗಳು » ಹೆಡ್ ಬುಷ್
ಹೆಡ್ ಬುಷ್

ಹೆಡ್ ಬುಷ್

Biography | 21 Oct 2022 |
Kannada

2.5 /5 Users

0 /5 Filmibeat

ಹೆಡ್ ಬುಷ್ ಕಥೆ

`ಹೆಡ್ ಬುಷ್' ಸಿನಿಮಾವನ್ನುಶೂನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ಕೋ ಸೋಮಣ್ಣ ಜೊತೆಗೆ ಧನಂಜಯ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್  ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.  70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗಲಿದೆ.  ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ದಶಕಗಳ ಹಿಂದೆ ಬೆಂಗಳೂರಿನಲ್ಲಿ ಜಯರಾಜ್ ಮತ್ತವನ ಗ್ಯಾಂಗ್ ಹಾವಳಿ ಹೇಗಿತ್ತು ಎನ್ನುವುದರ ಸಣ್ಣ ಝಲಕ್‌ ಅನ್ನು ಟ್ರೈಲರ್‌ನಲ್ಲಿ ಕೊಟ್ಟಿಕೊಟ್ಟಿದ್ದಾರೆ. ಕೆಂಪೇಗೌಡರು ಕಟ್ಟಿದ ನಗರದಲ್ಲಿ ರೌಡಿಸಂ ಹುಟ್ಟಿಕೊಂಡಿದ್ದು, ಜಯರಾಜ್ ನಂಬರ್ ವನ್ ಡಾನ್ ಆಗಿ ಬೆಳೆದಿದ್ದು ಹೀಗೆ ಸಾಗುತ್ತೆ. ಗಂಗಾ ಅಂಡ್ ಟೀಂ ಅವನಿಗೆ ಸಾಥ್ ಕೊಡುತ್ತಾ ಹೋಗಿದ್ದು, ಕೆಲ ರಾಜಕಾರಣಿಗಳು ಅವನನ್ನು ಬೆಳೆಸಿದ್ದು ಹೀಗೆ ಎಲ್ಲದರ ಇಣುಕು ನೋಟ ಎರಡೂವರೆ ನಿಮಿಷದ ಟ್ರೈಲರ್‌ನಲ್ಲಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ಮೊದಲ ನೋಟದಲ್ಲೇ ಗಮನ ಸೆಳೆದಿದ್ದಾರೆ. ಕೊತ್ವಾಲನಾಗಿ ವಶಿಷ್ಠ ಸಿಂಹ ಝಲಕ್ ಕೂಡ ಇದೆ. ಕಥೆ:  ಜಯರಾಜ್, ಬಾಲ್ಯದಿಂದಲೂ ಒರಟು ಹುಡುಗ. ತನ್ನ ಏರಿಯಾದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿರುತ್ತಾನೆ. ಅವನನ್ನು ರಾಜಕಾರಣಿ ಎಂಡಿ ನಟರಾಜ್ (ತಿರುಚಿದ ಹೆಸರು) ಇಂದಿರಾ ಬ್ರಿಗೇಡ್ ಕಟ್ಟಲು ಬಳಸಿಕೊಳ್ಳುತ್ತಾನೆ. ಜಯರಾಜ್ ಸಹ ರಾಜಕಾರಣಿಯ ಬೆಂಬಲದೊಂದಿಗೆ ದೊಡ್ಡ ರೌಡಿಯಾಗುತ್ತಾನೆ. ಆದರೆ ಈ ನಡುವೆ ಕರಗದ ವಿಚಾರಕ್ಕೆ ಆಗುವ ಸಣ್ಣ ಮನಸ್ಥಾಪ ಆತನ ಆತ್ಮೀಯ ಗೆಳೆಯನೊಟ್ಟಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಆ ನಂತರ ಆ ಅವಕಾಶವನ್ನು ಜಯರಾಜ್ ವಿರುದ್ಧ ಹೊಂಚುಹಾಕುತ್ತಿದ್ದ ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕತೆ.
Read More

ಹೆಡ್ ಬುಷ್ ಕಲಾವಿದರು ಮತ್ತು ಸಿಬ್ಬಂದಿ

ಹೆಡ್ ಬುಷ್ ಕ್ರೂ ಮಾಹಿತಿ

ನಿರ್ದೇಶಕ ಶೂನ್ಯ
ಕಥೆ ಅಗ್ನಿ ಶ್ರೀಧರ್
ಸಂವಾದ ಅಗ್ನಿ ಶ್ರೀಧರ್
ಸಿನಿಮಾಟೋಗ್ರಫಿ ಕರ್ಮ ಚಾವ್ಲಾ
ಸಂಪಾದಕ NA
ಸಂಗೀತ ಚರಣ್ ರಾಜ್
ನಿರ್ಮಾಪಕ ಅಶು ಬೇದ್ರ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಹೆಡ್ ಬುಷ್ ವಿಮರ್ಶಕರ ವಿಮರ್ಶೆ

ಸಿನಿಮಾಕ್ಕೆ ಕಮರ್ಷಿಯಲ್ ಚೌಕಟ್ಟು ತೊಡಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣ ಕತೆಯನ್ನು ತಮ್ಮಿಷ್ಟದಂತೆ ಬಗ್�
ಸಿನಿಮಾಕ್ಕೆ ಕಮರ್ಷಿಯಲ್ ಚೌಕಟ್ಟು ತೊಡಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣ ಕತೆಯನ್ನು ತಮ್ಮಿಷ್ಟದಂತೆ ಬಗ್ಗಿಸಿಕೊಂಡಿದ್ದಾರೆ ನಿರ್ದೇಶಕರು. ಹೀಗಾಗಿ ಕತೆ ಗೌಣವಾಗಿ ಪಾತ್ರಗಳ, ಪಾತ್ರಗಳನ್ನು ನಿರ್ವಹಿಸಿರುವ ನಟರ ಇಮೇಜುಗಳೇ ತೆರೆಯ ಮೇಲೆ ಅಬ್ಬರಿಸಿವೆ.

ಹೆಡ್ ಬುಷ್ ಟ್ರೇಲರ್

Video Thumbnail

ಹೆಡ್ ಬುಷ್ ಪಾಟ್ಲುಗಳು

ಹೆಡ್ ಬುಷ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಹೆಡ್ ಬುಷ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+