twitter
    X
    Home ಚಲನಚಿತ್ರಗಳ ಒಳನೋಟ

    ಚಂದನ್ ಶೆಟ್ಟಿ ಅವರ ಟಾಪ್ 8 ಆಲ್ಬಮ್ ಹಾಡುಗಳು

    Author Sowmya Bairappa | Published: Saturday, September 17, 2022, 12:46 PM [IST]

    ಕನ್ನಡದಲ್ಲಿ ರ‌್ಯಾಪ್ ಗೀತೆಗಳನ್ನು ಜನಪ್ರಿಯಗೊಳಿಸಿದವರು ಚಂದನ್ ಶೆಟ್ಟಿ. ಚಂದನ್ ಶೆಟ್ಟಿ ಸಿನಿಮಾ ಹಾಡುಗಳ ಸಂಗೀತ ಮತ್ತು ಆಲ್ಬಂ ಹಾಡುಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನ. ಅವರ 3 ಪೆಗ್, ಟಕೀಲಾ, ಪಾರ್ಟಿ ಫ್ರೀಕ್, ಲಕ ಲಕ ಲ್ಯಾಂಬೋರ್ಗಿನಿ ಹಾಡುಗಳು ರಿಲೀಸ್ ಆಗಿ ವೈರಲ್ ಲಿಸ್ಟ್ ಸೇರಿವೆ ಕೂಡ. ಚಂದನ್ ಶೆಟ್ಟಿ ಅವರ ಟಾಪ್ 8 ಆಲ್ಬಮ್ ಹಾಡುಗಳ ಮಾಹಿತಿ ಇಲ್ಲಿದೆ.

    cover image

    ಮೂರೇ ಮೂರು ಪೆಗ್ಗಿಗೆ - ಮೂರೇ ಮೂರು ಪೆಗ್ಗಿಗೆ

    ಚಂದನ ಶೆಟ್ಟಿಯ ರ್ಯಾಪ್ ಸಂಗೀತದ ಮೊದಲ ದೊಡ್ಡ ಮಟ್ಟದ ಯಶಸ್ಸು ಈ ಗೀತೆ ಎನ್ನಬಹುದು. ಚಂದನ ಶೆಟ್ಟಿ ಸಾಹಿತ್ಯ ಬರೆದು, ನಿರ್ದೇಶಸಿ, ನಟಿಸಿದ್ದ ಈ ಗೀತೆಯಲ್ಲಿ ಐಂದ್ರಿತಾ ರೇ ಹೆಜ್ಜೆ ಹಾಕಿದ್ದರು.

    ಟಕಿಲಾ - ಟಕಿಲಾ

    ಚಂದನ್ ಶೆಟ್ಟಿ ನಿರ್ದೇಶಿಸಿದ್ದ ಟಕಿಲಾ ಗೀತೆಯಲ್ಲಿ ಚಂದನ್ ಜೊತೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದರು. ಈ ಗೀತೆ ಕೂಡ ಯೂಟ್ಯೂಬ್ ನಲ್ಲಿ ದಾಖಲೆ ವೀಕ್ಷಣೆ ಕಂಡಿದೆ.

    ಪಾರ್ಟಿ ಫ್ರೀಕ್ - ಪಾರ್ಟಿ ಫ್ರೀಕ್

    ಪಾರ್ಟಿ ಫ್ರೀಕ್ ಗೀತೆಯನ್ನು ಚಂದನ್ ಶೆಟ್ಟಿ ಯುನೈಟೆಡ್ ಆಡಿಯೋಸ್ ಸಹಯೋಗದಲ್ಲಿ ನಿರ್ಮಿಸಿದ್ದರು. ಈ ಗೀತೆಯಲ್ಲಿ ನಿಶ್ವಿಕಾ ನಾಯ್ಡು, ಚಂದನ್ ಶೆಟ್ಟಿ ಜೊತೆ ಮುಖ್ಯ ಕಲಾವಿದೆಯಾಗಿ ಹೆಜ್ಜೆ ಹಾಕಿದ್ದರೆ, ನಿವೇದಿತಾ ಗೌಡ ಕೂಡ ಕಾಣಿಸಿಕೊಂಡಿದ್ದರು.

    ಚಾಕ್ಲೆಟ್ ಗರ್ಲ್ - ಚಾಕ್ಲೆಟ್ ಗರ್ಲ್

    ಚಂದನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ `ಚಾಕ್ಲೆಟ್ ಗರ್ಲ್' ಗೀತೆಯಲ್ಲಿ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದರು.

    ಲಕ ಲಕ ಲ್ಯಾಂಬೋರ್ಗಿನಿ - ಲಕ ಲಕ ಲ್ಯಾಂಬೋರ್ಗಿನಿ

    ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಅಲ್ಬಮ್ ಗೀತೆಯಲ್ಲಿ ಚಂದನ್ ಶೆಟ್ಟಿ ಜೊತೆ ರಚಿತಾ ರಾಮ್ ಹೆಜ್ಜೆ ಹಾಕಿದ್ದರು. ಸಾಹಿತ್ಯ, ಸಂಗೀತ, ಹಿನ್ನಲೆ ಗಾಯನ ಮತ್ತು ಪರಿಕಲ್ಪನೆ ಚಂದನ್ ಶೆಟ್ಟಿಯದಾಗಿತ್ತು.

    ಕೋಲುಮಂಡೆ ಜಂಗಮ ದೇವರು - ಕೋಲುಮಂಡೆ ಜಂಗಮ ದೇವರು

    ಚಂದನ್ ಶೆಟ್ಟಿ ಅವರ 'ಕೋಲುಮಂಡೆ ಜಂಗಮ ದೇವರು' ಹಾಡು ಬಿಡುಗಡೆಯಾದ ಮೂರು ದಿನದಲ್ಲಿ 30 ಲಕ್ಷ ವೀಕ್ಷಣೆ ಪಡೆದು, ದಾಖಲೆ ಮಾಡಿತ್ತು. ಆದರೆ, 'ಕೋಲುಮಂಡೆ ಜಂಗಮದೇವ ಎಂಬ ಜಾನಪದ ಹಾಡನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿರುವ ಚಂದನ್ ಶೆಟ್ಟಿ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಿದ್ದಾರೆ. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮರನ್ನು ಅವಮಾನಿಸಲಾಗಿದೆ ಎಂದು ಕೆಲವರು ಟೀಕಿಸಿ, ಖಂಡಿಸಿದ್ದರು. ಇದರ ಪರಿಣಾಮ ಯೂಟ್ಯೂಬ್‌ನಲ್ಲಿ ಹಾಡು ಡಿಲೀಟ್ ಮಾಡಿ, ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದರು. ನಂತರ ಎಡಿಟ್ ಮಾಡಿ ಮತ್ತೆ ಆನಂದ್  ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. 

    ಈ ಆಲ್ಬಂ ಹಾಡಿನಲ್ಲಿ ಚಂದನ್​ ಜೊತೆಗೆ ಶಿವು ಮತ್ತು ನಂದಿನಿ ಎಂಬವರು ಹೆಜ್ಜೆ ಹಾಕಿದ್ದಾರೆ. ಮಯೂರಿ ಉಪಾಧ್ಯ ಕಾನ್ಸೆಪ್ಟ್​ ಈ ಹಾಡಿಗಿದ್ದು, ಚಿನ್ನಿ ಮಾಸ್ಟರ್​​ ನೃತ್ಯ ಸಂಯೋಜನೆ ಮಾಡಿದ್ದಾರೆ. 

    ಟಾಪ್ ಟು ಬಾಟಮ್ ಗಾಂಚ - ಟಾಪ್ ಟು ಬಾಟಮ್ ಗಾಂಚ

    ಈ ಹಾಡನ್ನ ಚಂದನ್ ಶೆಟ್ಟಿ ಮತ್ತು ಸ್ನೇಹಾ ಹೆಗಡೆ ಹಾಡಿದ್ದು, ಚಂದನ್ ಹಾಗೂ ಸುದರ್ಶನ್ ಸಾಹಿತ್ಯ ರಚಿಸಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈ ಹಾಡು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 

    ಸುಕ್ಕ ಪಾರ್ಟಿ - ಸುಕ್ಕ ಪಾರ್ಟಿ

    ಚಂದನ್ ಶೆಟ್ಟಿ ಅವರೇ ಕಾಂಪೋಸ್ ಮಾಡಿ ಬರೆದು ಹಾಡಿರುವ ಮತ್ತು ನಿರ್ಮಾಣ ಮಾಡಿರುವ 'ಸುಕ್ಕ ಪಾರ್ಟಿ' ಹಾಡು ಸಖತ್ ವೈರಲ್ ಆಗಿತ್ತು. ರೆಟ್ರೋ ಸಾಂಗ್ ರೀತಿಯೇ ಮೂಡಿಬಂದಿದೆ. ಇದರಲಿ ಎಲ್ಲರೂ ಕೂಡ ಬೆಲ್ ಬಾಟಮ್ ಪ್ಯಾಂಟ್ ಧರಿಸಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X