ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಚಲನಚಿತ್ರಗಳು

  ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಮಾತ್ರವಲ್ಲದೆ ತಮ್ಮ ನಿರ್ದೇಶನದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಕಾಶಿನಾಥ್ ರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಳೆದ ಉಪ್ಪಿ 1992 ರಲ್ಲಿ ತೆರೆಕಂಡ `ತರ್ಲೆ ನನ್ಮಗ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ನಂತರ ಒಂದರ ನಂತರ ವಿವಿಧ ಶೈಲಿಯ ಚಿತ್ರಗಳನ್ನು ನೀಡಿದ ಉಪೇಂದ್ರ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಒಟ್ಟು ಒಂಬತ್ತು ಕನ್ನಡ ಮತ್ತು ಒಂದು ತೆಲಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಳಗೆ ಉಪೇಂದ್ರ ನಿರ್ದೇಶನದ ಕನ್ನಡ ಚಿತ್ರಗಳನ್ನು ಪಟ್ಟಿ ಮಾಡಲಾಗಿದೆ. 2019 ಅಗಸ್ಟ್ ನಲ್ಲಿ IMDB ಪ್ರಕಟಿಸಿದ ಜಗತ್ತಿನ 50 ಪ್ರಮುಖ ನಿರ್ದೇಶಕರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ.ಈ ಲಿಸ್ಟಿನಲ್ಲಿರುವ ಭಾರತದ ಮೂವರು ನಿರ್ದೇಶಕರಲ್ಲಿ ಉಪೇಂದ್ರ ಕೂಡ ಒಬ್ಬರು ಎನ್ನವುದು ಹೆಮ್ಮಯ ವಿಚಾರ. ಹಿಂದಿ ನಿರ್ದೇಶಕ ರಾಜಕುಮಾರ್ ಹಿರಾನಿ ಮತ್ತು ಬಂಗಾಲಿ ನಿರ್ದೇಶಕ ಸತ್ಯಜಿತ್ ರೇ ಈ ಲಿಸ್ಟಿನಿಲ್ಲಿ ಸ್ಥಾನ ಪಡೆದ ಇನ್ನಿಬ್ಬರು ನಿರ್ದೇಶಕರು.

  1. ತರ್ಲೆ ನನ್ನ ಮಗ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Comedy

  ಬಿಡುಗಡೆ ದಿನಾಂಕ

  1992

  ಇದು ಉಪೇಂದ್ರ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದ ಮೂಲಕ ಕಾಶೀನಾಥ್ ರ ಸಹಾಯಕ ನಿರ್ದೇಶಕರಾಗಿದ್ದ ಉಪೇಂದ್ರ ಸ್ವತಂತ್ರ ನಿರ್ದೇಶಕರಾದರು. ಈ ಚಿತ್ರ ನಾಯಕನಾಗಿ ಜಗ್ಗೇಶ್ ಗೆ ಯಶಸ್ಸು ತಂದು ಕೊಟ್ಟಿತು.

  2. ಶ್ !!

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Horror

  ಬಿಡುಗಡೆ ದಿನಾಂಕ

  13 Nov 1993

  ಶ್! ಕನ್ನಡದ ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ತಮ್ಮ ಗುರು ಕಾಶೀನಾಥ್ ರಿಗೆ ನಿರ್ದೇಶನ ಮಾಡಿದ್ದರು  ಉಪ್ಪಿ. ಈ ಚಿತ್ರದ ಮೂಲಕ ನಟನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಸಾಧು ಕೋಕಿಲಾ ಕನ್ನಡ ಚಿತ್ರರಂಗ ಪ್ರವೇಶಿಸಿದರು.

  3. ಓಂ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Crime

  ಬಿಡುಗಡೆ ದಿನಾಂಕ

  19 May 1995

  ಓಂ ಕನ್ನಡದ ಚಿತ್ರರಂಗದ ಮೈಲಿಗಲ್ಲು. ಈ ಚಿತ್ರದ ಕೆಲ ಪಾತ್ರಗಳಲ್ಲಿ ನಿಜವಾದ ರೌಡಿಗಳು ನಟಿಸಿದ್ದರು. ಈ ಚಿತ್ರ ದಾಖಲೆಷ್ಟು ಬಾರಿ ರೀ ರೀಲಿಸ್ ಆಗಿದೆ. ಬೆಂಗಳೂರು ಭೂಗತ ಲೋಕದ ಮೇಲೆ ಮೊದಲ ಬಾರಿಗೆ ವಿಸ್ತೃತವಾದ ಬೆಳಕು ಚೆಲ್ಲಿದ ಚಿತ್ರ ಓಂ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X