twitter
    X
    Home ಚಲನಚಿತ್ರಗಳ ಒಳನೋಟ

    ಮಾನಸ ಸರೋವರ ಟು ಮೈನಾ: ದುರಂತ ಅಂತ್ಯ ಹೊಂದಿರುವ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Published: Wednesday, December 7, 2022, 12:56 PM [IST]

    ಮೊದಲೆಲ್ಲಾ ಪ್ರತಿ ಚಿತ್ರದ ಕೊನೆಯಲ್ಲಿ ಶುಭಂ ಎಂಬ ಟೈಟಲ್ ಇರುತ್ತಿತ್ತು. ಅದರೆ, ಆನಂದದ ಕ್ಲೈಮಾಕ್ಸ್ ಇರುವ ಚಿತ್ರಗಳಿಗಿಂತ ದುಃಖದಾಯಕ ಕ್ಲೈಮ್ಯಾಕ್ಸ್ ಬಹುಕಾಲ ಕಾಡುತ್ತದೆ. ದುರಂತ ಅಂತ್ಯದ ಚಿತ್ರಗಳಿಗೆ ಮೊದಲು ಪ್ರಾಮುಖ್ಯತೆ ತಂದುಕೊಟ್ಟವರು ನಿರ್ದೆಶಕ ಪುಟ್ಟಣ್ಣ ಕಣಗಾಲ್. ಚಿತ್ರ ರಸಿಕರ ಮನಸ್ಸಿನಲ್ಲಿ ಬಹುಕಾಲ ಕಾಡುವ ಕ್ಲೈಮಾಕ್ಸ್ ಸನ್ನಿವೇಶಗಳನ್ನು ಸೃಷ್ಟಿಸಿದ್ದು ಕಣಗಾಲ್ ಅವರ ಹೆಗ್ಗಳಿಕೆ. ನಂತರ ಈ ಹಾದಿಯಲ್ಲಿ ಹಲವಾರು ನಿರ್ದೇಶಕರು ನಡೆದು ಕನ್ನಡಕ್ಕೆ ಕೆಲವೊಂದು ಅಭೂತಪೂರ್ವ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಾವು ದುರಂತ ಅಂತ್ಯವನ್ನು ನಾವು ನೋಡಿದ್ದೇವೆ. ಇಂತಹ ಸಿನಿಮಾಗಳು ಜನರನ್ನು ಬೇಗ ಆಕರ್ಷಿಸುತ್ತವೆ. ಮತ್ತೆ ಆ ದೃಶ್ಯಗಳು ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತವೆ. ದುರಂತ ಅಂತ್ಯ ಹೊಂದಿರುವ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಮಾನಸ ಸರೋವರ

    ಮಾನಸ ಸರೋವರ

    1

    ದುರಂತ ಅಂತ್ಯ ಹೊಂದಿರುವ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ 1992ರಲ್ಲಿ ತೆರೆಕಂಡ ಮಾನಸ ಸರೋವರವೂ ಒಂದು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾದಲ್ಲಿ  ಶ್ರೀನಾಥ್, ರಾಮಕೃಷ್ಣ, ಹಾಗೂ ನಟಿ ಪದ್ಮ ವಾಸಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮೂರು ಜನರ ಸುತ್ತ ಕಥೆ ಸುತ್ತುತ್ತದೆ. ಒಬ್ಬ ಮಧ್ಯ ವಯಸ್ಸಿನ ಮಾನಸಿಕ ವೈದ್ಯ (ಶ್ರೀನಾಥ್) ದಾರಿಯಲ್ಲಿನ ಒಬ್ಬ ಹುಚ್ಚು ಯುವತಿಯನ್ನು ಕರೆತಂದು ಅವಳಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಾನೆ. ಆಕೆ ನಿಧಾನವಾಗಿ ಗುಣಮುಖವಾಗುತ್ತಿದ್ದಂತೆ ಅವಳ ಮೇಲೆ ವೈದ್ಯನಿಗೆ ಪ್ರೀತಿ ಹುಟ್ಟುತ್ತದೆ. ಈ ಮದ್ಯೆ ವೈದ್ಯನ (ಶ್ರೀನಾಥ್) ಅವರ ಸೋದರಳಿಯ (ರಾಮಕೃಷ್ಣ) ಅವರನ್ನು ಭೇಟಿ ಮಾಡಲು ಬರುತ್ತಾನೆ. ಈ ವೇಳೆ ಆತ ಹಾಗೂ ಆ ಯುವತಿ ಪ್ರೀತಿಯಲ್ಲಿ ಬೀಳುತ್ತಾರೆ. ಇದನ್ನು ಸಹಿಸಿದ ವೈದ್ಯ ಮಾನಸಿಕವಾಗಿ ಕುಗ್ಗಿ ಕೊನಗೆ ಹುಚ್ಚನಾಗುತ್ತಾನೆ.

     

    ಬಂಧನ

    ಬಂಧನ

    2

    ಬಂಧನ ಸಿನಿಮಾವನ್ನು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದು, ವಿಷ್ಣುವರ್ಧನ್ ಹಾಗೂ ಸುಹಾಸಿನಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತನ್ನ ಹತ್ತಿರ ಕೆಲಸ ಮಾಡುವ ವೈದ್ಯಕೀಯ ವಿಧ್ಯಾರ್ಥಿಯೋರ್ವಳನ್ನು ಪ್ರೀತಿಸುವ ವೈದ್ಯ ಹರೀಶ್, ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹೊತ್ತಿಗೆ ಅವಳ ಮದುವೆ ನಿಶ್ಚಯವಾಗುತ್ತದೆ. ಅವಳ ಕೊರಗಿನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಹರೀಶ್, ಕೊನೆಗೆ ಅವಳ ಮಗುವನ್ನು ಈ ಭೂಮಿಗೆ ಬರಮಾಡಿ ಕೊನೆಯುಸಿರೆಳೆಯುತ್ತಾನೆ. ಕನ್ನಡದ ಹಾಗೂ ವಿಷ್ಣುವರ್ಧನ್ ಸಿನಿಜೀವನದ ಅತ್ತ್ಯುತ್ತಮ ಚಿತ್ರಗಳಲ್ಲಿ ಇದೊಂದು. 

     

    ರಕ್ತ ಕಣ್ಣೀರು

    ರಕ್ತ ಕಣ್ಣೀರು

    3

    ರಕ್ತ ಕಣ್ಣೀರು ಸಿನಿಮಾ 1954ರಲ್ಲಿ ಬಿಡುಗಡೆಯಾದ ತಮಿಳಿನ ರಕ್ತ ಕಣ್ಣೀರ್ ಸಿನಿಮಾದ ರಿಮೇಕ್ ಆಗಿದೆ. ತಮಿಳಿನ ರಕ್ತ ಕಣ್ಣೀರ್ ಸಿನಿಮಾ ಸಂಪೂರ್ಣ ದುರಂತ ಚಿತ್ರವಾಗಿದೆ. ಆದರೆ, ಸಾಧುಕೋಕಿಲ ನಿರ್ದೇಶನದ ರಕ್ತ ಕಣ್ಣೀರು ಸಿನಿಮಾ ಕಥೆಯಲ್ಲಿ ಸ್ವಲ್ಪ ಕಾಮಿಡಿ ಹೊಂದಿದೆ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ರಮ್ಯಾ ಕೃಷ್ಣ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮಂತ ವ್ಯಕ್ತಿಯಾಗಿರುವ ಉಪೇಂದ್ರ ಓರ್ವ ಸಾಮಾನ್ಯ ಹಳ್ಳಿ ಹುಡುಗಿಯನ್ನು ಮದ್ವೆಯಾಗುತ್ತಾನೆ. ಆದಾಗ್ಯೂ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ರಮ್ಯಾ ಕೃಷ್ಣ ಅವರನ್ನು ಪ್ರೀತಿಸುತ್ತಾನೆ. ಈ ವೇಳೆ ತನ್ನಲ್ಲಾ ಸಂಪತ್ತನ್ನು ಆಕೆಗೆ ತ್ಯಾಗ ಮಾಡುತ್ತಾನೆ. ಬಳಿಕ ಕುಷ್ಠರೋಗದಿಂದ ಬಳಲತೊಡಗುತ್ತಾನೆ. ಹೀಗಾಗಿ ರಮ್ಯಾ ಕ್ರಷ್ಣ ಆತನನ್ನು ಮನೆಯಿಂದ ದೂರ ಇಡುತ್ತಾರೆ. ಬಳಿಕ ಉಪೇಂದ್ರ ಆ ಮನೆಯನ್ನು ತೊರೆದು ತನ್ನ ಪತ್ನಿಯ ಮನೆ ತಲುಪುತ್ತಾನೆ. ಆದರೆ, ಈ ವೇಳೆ ಒಬ್ಬರನೊಬ್ಬರು ಗುರುತಿಸಲು ಸಾಧ್ಯವಾಗುವುದಿಲ್ಲ. ಉಪೇಂದ್ರಗೆ ಊಟ ನೀಡಿ ಸಹಾಯ ಮಾಡುತ್ತಾಳೆ. ಬಳಿಕ ತನ್ನ ಸ್ನೇಹಿತನಿಂದ ರಮ್ಯಾ ಕೃಷ್ಣ ಸಾವಿನ ಸುದ್ದಿ ಕೇಳಿ ಖುಷಿಪಡುತ್ತಾನೆ. ನಂತರದ ದಿನಗಳಲ್ಲಿ ಉಪೇಂದ್ರ ಹೆಂಡತಿ ಮತ್ತು ಆತನ ಸ್ನೇಹಿತ ಮದುವೆಯಾಗುತ್ತಾರೆ. ಉಪೇಂದ್ರ ಏಕಾಂಗಿಯಾಗಿಯೇ ಉಳಿಯುತ್ತಾರೆ.  

     

    ಹುಚ್ಚ

    ಹುಚ್ಚ

    4

    ಹುಚ್ಚ ಸಿನಿಮಾ ನಟ ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಓ ಸಿನಿಮಾವನ್ನು ಓಂ ಪ್ರಕಾಶ್ ನಿರ್ದೇಶಿಸಿದ್ದರು. ಈ ಸಿನಿಮಾ ಕಾಲೇಜಿನ ಪ್ರೇಮ ಕಥೆಯನ್ನು ಹೊಂದಿದೆ. ಕಾಲೇಜಿನ ಒಬ್ಬ ರಫ್ ಆಂಡ್ ಟಫ್ ಯುವಕ ಒಬ್ಬ ಸಿಂಪಲ್ ಹುಡುಗಿ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವಳು ತನ್ನ ಪ್ರೀತಿಯನ್ನು ಒಪ್ಪಿದ ಕೆಲ ಸಮಯದಲ್ಲಿ ಅವನು ತನ್ನ ಹಳೆಯ ನೆನಪನ್ನೇ ಕಳೆದುಕೊಳ್ಳುತ್ತಾನೆ. ಅವನಿಗೆ ಮರಳಿ ನೆನಪು ಬರುವಷ್ಟರಲ್ಲಿ ಅವನು ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.

    ದುನಿಯಾ

    ದುನಿಯಾ

    5

    ವಿಜಯ್ ಅವರ ಚೊಚ್ಚಲ ಚಿತ್ರ ದುನಿಯಾ. ದುನಿಯಾ ಕ್ವಾರಿಯಲ್ಲಿ ಕೆಲಸ ಮಾಡುವ ಮುಗ್ಧ ಹಳ್ಳಿಯ ಹುಡುಗನ ಕಥೆ. ಈ ಹುಡುಗನ (ವಿಜಯ್) ತಾಯಿ ಅನಾರೋಗ್ಯಕ್ಕೆ ತುತ್ತಾಗುತ್ತಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ನಗರಕ್ಕೆ ಕರೆತರುತ್ತಾನೆ. ಆದರೆ, ಅಷ್ಟರಲ್ಲಾಗಲೇ ಆತನ ತಾಯಿ ಸತ್ತು ಹೋಗುತ್ತಾಳೆ. ಬಳಿಕ ವಿಜಯ್ ತಮ್ಮ ತಾಯಿಯ ಅಂತ್ಯಕ್ರಿಯೆ ಮುಗಿಸಿ, ಆಕೆಯ ಘೋರಿ ನಿರ್ಮಿಸಲು ನಿರ್ಧರಿಸುತ್ತಾನೆ. ಅದಕ್ಕೆ ಹಣ ಹೊಂದಿಸಲು ಭೂಗತ ಜಗತ್ತನ್ನು ಆರಿಸಿಕೊಳ್ಳುತ್ತಾನೆ. ಈ ನಡುವೆ ಪೂರ್ಣಿಮಾ (ನಾಯಕಿ) ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಪ್ರೀತಿ ಮೂಡುತ್ತದೆ. ಆಕೆಯ ಕಾಲೇಜು ಶುಲ್ಕವನ್ನು ಕೂಡ ಇವನೇ ಭರಿಸುತ್ತಿರುತ್ತಾನೆ. ಚಿತ್ರದ ಕೊನೆಯಲ್ಲಿ ಪೊಲೀಸರು ವಿಜಯ್‌ಗೆ ಭೂಗತ ಜಗತ್ತನ್ನು ತೊರೆಯುವಂತೆ ಸಲಹೆ ನೀಡಲು ಪ್ರಯತ್ನಿಸುತ್ತಾರೆ. ಆದರೆ, ನಾಯಕಿ ಪೊಲೀಸರು ವಿಜಯ್ ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಿ, ತಾನೇ ವಿಜಯ್ ಗೆ ವಿಷಪೂರಿತ ಸಿಹಿತಿಂಡಿಗಳನ್ನು ನೀಡುತ್ತಾಳೆ ಮತ್ತು ತಾನು ತಿಂದು ಇಬ್ಬರೂ ಸಾಯುತ್ತಾರೆ.  

    ಮೈನಾ

    ಮೈನಾ

    6

    ಮೈನಾ ಚಿತ್ರದಲ್ಲಿ ಚೇತನ್ ನಾಯಕನಾಗಿ ಮತ್ತು ನಿತ್ಯ ಮೆನನ್ ನಾಯಕಿಯಾಗಿ ತೆರೆಯ ಮೇಲೆ ಅಭಿನಯಿಸಿದ್ದಾರೆ. ಇದೊಂದು ನಿಜ ಜೀವನ ಕಥೆ ಆಧಾರಿತ ಚಿತ್ರ. ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. ಚಿತ್ರದ ನಾಯಕ ಸತ್ಯ (ಚೇತನ್) ಮತ್ತು ಮೈನಾ (ನಿತ್ಯಾ ಮೆನನ್)ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಮೈನಾ ಅಂಗವಿಕಲೆ ಆಗಿರುತ್ತಾಳೆ. ಹೀಗಿದ್ದರೂ ಸತ್ಯ ಆಕೆಯನ್ನು ಮದುವೆಯಾಗುತ್ತಾನೆ. ಬಳಿಕ ಆಕೆಗೆ ಚಿಕಿತ್ಸೆ ಕೊಡಿಸಲು ವೈದ್ಯರ ಬಳಿ ಕರೆದೊಯ್ಯದಾಗ ವೈದ್ಯ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಇದನ್ನು ತಿಳಿದ ಸತ್ಯ ಆತನನ್ನ ಕೊಲ್ಲುತ್ತಾನೆ. ರಾಜಕಾರಣಿ ಸಹೋದರನನ್ನು ಹತ್ಯೆ ಮಾಡಿದ್ದಕ್ಕಾಗಿ ಸಿನಿಮಾದ ಕೊನೆಯಲ್ಲಿ ಸತ್ಯ ಹಾಗೂ ಮೈನಾ ಇಬ್ಬರು ಸಾವನ್ನಪ್ಪುತ್ತಾರೆ. 

    ಚೆಲುವಿನ ಚಿತ್ತಾರ

    ಚೆಲುವಿನ ಚಿತ್ತಾರ

    7

    ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಯಿಸಿದ್ದಾರೆ. ಕೋಮಲ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ. ಒಬ್ಬ ಶಾಲಾ ವಿಧ್ಯಾರ್ಥಿನಿ ಮತ್ತು ಮೆಕಾನಿಕ್ ಪ್ರೀತಿಸಿ ಓಡಿ ಹೋಗುತ್ತಾಳೆ. ನಂತರ ಅವರು ಅನುಭವಿಸುವ ಕಷ್ಟಗಳು ಮತ್ತು ಅದು ಕೊನೆಯಲ್ಲಿ ದುರಂತ ಅಂತ್ಯ ಕಾಣುವುದನ್ನು ಚಿತ್ರ ತೋರಿಸುತ್ತದೆ.

     

    ತಾಜ್ ಮಹಲ್

    ತಾಜ್ ಮಹಲ್

    8

    ಅಜಯ್ ರಾವ್ ಮತ್ತು ಪೂಜಾ ಗಾಂಧಿ ಅಭಿನಯದ ಈ ಸಿನಿಮಾವನ್ನು ಆರ್ ಚಂದ್ರು ಅವರ ನಿರ್ದೇಶನ ಮಾಡಿದ್ದಾರೆ. ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು, ಪದ್ಮಿನಿ ಪ್ರಕಾಶ್, ಸುರೇಶ್ ಮಂಗಳೂರು, ಆಶೋಕ್, ಸುನಿಲ್ ರಾವ್ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಹಳ್ಳಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ಬಂದ ಬಡ ಇಂಜಿನಿಯರಿಂಗ್ ವಿಧ್ಯಾರ್ಥಿಯೊಬ್ಬ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದು ಪ್ರೀತಿ ಮತ್ತು ಶಿಕ್ಷಣ ಎರಡರಲ್ಲೂ ವಿಫಲನಾಗಿ ತನ್ನ ಹಳ್ಳಿಗೆ ಮರಳುವಾಗ ಅಫಘಾತಕ್ಕೀಡಾಗಿ ನಿಧನವಾಗುತ್ತಾನೆ.

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X