ಸಿನಿಮಾರಂಗದಲ್ಲಿ ಚಿತ್ರ ಅನೌನ್ಸ್ ಆಗುವುದು, ಅರ್ಧಕ್ಕೆ ನಿಂತುಹೋಗುವುದು, ಯಾರೋ ನಾಯಕನಾಗಿ ನಟಿಸಬೇಕಿದ್ದ ಸಿನಿಮಾದಲ್ಲಿ ಮತ್ಯಾರೋ ಅಭಿನಯಿಸುವುದು ಹೊಸದೇನು ಅಲ್ಲ. ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್‌ಗೂ ಕೂಡ ಇದೇ ರೀತಿ ಸಾಕಷ್ಟು ಸಿನಿಮಾಗಳು ಕೈತಪ್ಪಿದ್ದವು. ಅಪ್ಪು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲವಾದರೂ ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಲ್ಲಿ ಪುನೀತ್ ಮಾಡದೇ ಬಿಟ್ಟ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ. ಈ ಪೈಕಿ ಕೆಲವು ಅನೌನ್ಸ್ ಆಗಿದ್ದವಾಗಿದ್ದರೆ, ಮತ್ತೆ ಕೆಲವು ಮಾತುಕತೆ ಹಂತದಲ್ಲೇ ನಿಂತು ಹೋಗಿದ್ದವು.