twitter
    X
    Home ಚಲನಚಿತ್ರಗಳ ಒಳನೋಟ

    ದೇಶಭಕ್ತಿ ಚಿಮ್ಮಿಸುವ ಕನ್ನಡದ ಚಿತ್ರ ಗೀತೆಗಳು

    Author Administrator | Updated: Wednesday, January 25, 2023, 05:55 PM [IST]

    ಬ್ರಿಟಿಷ್ ರ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಭಾರತದಲ್ಲಿ ಸ್ವಾತಂತ್ರ ಜ್ಯೋತಿ ಮೂಡಿದಾಗ, ಆ ಸ್ವಾತಂತ್ರ್ಯದ ಅಭಿವ್ಯಕ್ತಿ ಹಲವು ಕಲೆಗಳು ಮತ್ತು ಚಿತ್ರಗಳು ಮೂಲಕ ಮೂಡಿ ಬಂದಿತು. ಇಲ್ಲಿ ಹಾಡುಗಳ ಮೂಲಕ ದೇಶ ಪ್ರೇಮವನ್ನು ಬಡಿದೆಬ್ಬಿಸಿದ ಕನ್ನಡ ಗೀತೆಗಳನ್ನು ನೀಡಿದೆ.

    cover image

    ಹಿಂದುಸ್ಥಾನವೂ ಎಂದು ಮರೆಯದ

    1984 ರಲ್ಲಿ ತೆರೆಕಂಡಿದ್ದ ಅಮೃತ ಘಳಿಗೆ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಈ ಚಿತ್ರದ `ಹಿಂದುಸ್ಥಾನವೂ ಎಂದು ಮರೆಯದ ಭಾರತ ರತ್ನವೂ ನೀನಾಗು' ಗೀತೆಗೆ ವಿಜಯ್ ಭಾಸ್ಕರ್ ಅದ್ಬುತ ಸಂಗೀತ ನೀಡಿದರು..ತಾಯಿ ಗರ್ಭದಲ್ಲಿರುವಾಗಲೇ ದೇಶ ಭಕ್ತಿಯ ಶುಭ ಹಾರೈಕೆಯನ್ನು ಈ ಗೀತೆಯ ಸಂದೇಶವಾಗಿತ್ತು.

    ಸೈನಿಕ - ಜೈ ಹಿಂದ್ ಜೈ ಹಿಂದ್

    ಸಿಪಿ ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ್ ನಟನೆಯ ಸೈನಿಕ ಚಿತ್ರದ `ಜೈ ಹಿಂದ್' ಗೀತೆ ಉತ್ತಮ ಗೀತೆಯೊಂದಿಗೆ ದೇಶ ಪ್ರೇಮ ಬಡಿದೇಳಿಸುವ ದೃಶ್ಯ ಕಾವ್ಯವನ್ನು ಹೊಂದಿತ್ತು. ಎಸ್.ಪಿ ಬಾಲಸುಬ್ರಹ್ಮಣ್ಯಂ ರವರ ಕಂಠದಲ್ಲಿ ಈ ಗೀತೆ ಚೆನ್ನಾಗಿ ಮೂಡಿ ಬಂದಿತ್ತು.

    ಹಗಲುವೇಷ - ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ

    ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬಂದಿದ್ದ `ಹಗಲು ವೇಷ' ಚಿತ್ರದಲ್ಲಿನ `ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ' ಗೀತೆ ಸ್ವಾತಂತ್ರ್ಯ ಪೂರ್ವದ ಕಥಾನಕವನ್ನು ಬಿಂಬಿಸಿತು. ಡಾ. ರಾಜಕುಮಾರ್ ಧ್ವನಿಯಲ್ಲಿ ಮೂಡಿ ಬಂದಿದ್ದ ಈ ಗೀತೆ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು.

    ವಂದೇ ಮಾತರಂ - ಹಿಂದೂಸ್ಥಾನ ಗೊತ್ತೇನೋ

    ಓಂ ಪ್ರಕಾಶ್ ರಾವ ನಿರ್ದೇಶನದಲ್ಲಿ ಮೂಡಿಬಂದಿದ್ದ ವಂದೇ ಮಾತರಂ ಚಿತ್ರದಲ್ಲಿ ಅಂಬರೀಶ್ ಮತ್ತು ವಿಜಯಶಾಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಯುವ ಮನಸ್ಸುಗಳ ಹೇಗೆ ಆತಂಕವಾದದ ಕಡೆಗೆ ಸೆಳೆಯುತ್ತವೆ ಎಂಬ ಬಗ್ಗೆ ಈ ಚಿತ್ರ ಹೇಳಿತು. ಈ ಚಿತ್ರದ `ಹಿಂದೂಸ್ಥಾನ ಗೊತ್ತೇನೋ' ಎಂಬ ಗೀತೆ ದೇಶ ಭಕ್ತಿಯನ್ನು ಬಡಿದೆಬ್ಬಿಸಿತು.

    ವೀರಪ್ಪ ನಾಯಕ - ಭಾರತಾಂಬೆ ನಿನ್ನ ಜನ್ಮ ದಿನ

    ಉತ್ತರ ಕರ್ನಾಟಕ ಬೆಳಗಾವಿಯ ಹಳ್ಳಿಯಲ್ಲಿ ದೇಶ ಪ್ರೇಮಿಯ ಕಥೆಯನ್ನು ವೀರಪ್ಪ ನಾಯ್ಕ ಚಿತ್ರ ತೋರಿಸಿತು. ಗಾಂಧಿ ತತ್ವದಡಿ ಪಾಲಿಸುತ್ತಿರುವ ವೀರಪ್ಪ ನಾಯ್ಕನ ಕಥೆಯನ್ನು ಎಸ್ ನಾರಾಯಣ್ ತೆರೆ ಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಕಂಠದಲ್ಲಿ ಮೂಡಿಬಂದಿದ್ದ ಈ ಚಿತ್ರದ `ಭಾರತಾಂಬೆ ನಿನ್ನ ಜನ್ಮ ದಿನ' ಗೀತೆ ಸ್ವಾತಂತ್ರೋತ್ಸವದ ಸುಪ್ತ ಪ್ರತೀಕವಾಗಿತ್ತು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X