X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ಗೆ 'R' ಲಕ್ಕಿ: 'ರ' ಅಕ್ಷರದಿಂದ ಶುರುವಾಗುವ ಹೆಸರಿರುವ ಎಲ್ಲರೂ ಟಾಪ್ ಹೀರೋಯಿನ್ಸ್!

Author Sowmya Bairappa | Updated: Monday, November 25, 2024, 09:43 AM [IST]

ಸಿನಿಮಾರಂಗದಲ್ಲಿ ಹೆಸರಿನಲ್ಲಿರುವ ಜ್ಯೋತಿಷ್ಯವನ್ನು ನಂಬಲಾಗುತ್ತದೆ. ಹೀಗಾಗಿ ಹಲವು ನಟ-ನಟಿಯರು ತಾವು ಹೆಸರು ಬದಲಿಸಿಕೊಂಡು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇನ್ನೂ ಕೆಲ ನಟಿಯರು ವಿವಿಧ ಕಾರಣಗಳಿಂದ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದರಂತೆ ಸ್ಯಾಂಡಲ್‌ವುಡ್‌ನಲ್ಲಿ 'ರ' ಅಕ್ಷರದಿಂದ ಆರಂಭವಾಗುವ ಹೆಸರಿರುವ ನಟಿಯರು ಸ್ಟಾರ್‌ಗಳಾಗುತ್ತಾರೆ ಎಂಬ ಪ್ರತೀತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಇಲ್ಲಿ ಅಂತಹ ನಟಿಮಣಿಯರ ಮಾಹಿತಿಯನ್ನು ನೀಡಲಾಗಿದೆ.


cover image
ramya

2003ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಸಿನಿಮಾ ಮೂಲಕ ನಟನೆಗೆ ಎಂಟ್ರಿಕೊಟ್ಟ ರಮ್ಯಾ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. ಇವರ ಮೊದಲ ಹೆಸರು ದಿವ್ಯ ಸ್ಪಂದನಾ. ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಅಭಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿ, ಈ ಚಿತ್ರದಲ್ಲಿ ಅವರ ಹೆಸರನ್ನು ರಮ್ಯಾ ಎಂದು ಬದಲಾಯಿಸಿದರು. ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ ರಮ್ಯಾ, ಸ್ಯಾಂಡಲ್‌ವುಡ್ ಕ್ವೀನ್ ಪಟ್ಟ ಪಡೆದರು. ಮಾತ್ರವಲ್ಲದೇ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದರು.

ರಕ್ಷಿತಾ

ಕ್ರೇಜಿ ಕ್ವೀನ್ ರಕ್ಷಿತಾ ಅವರ ಹೆಸರು ಮೊದಲು ಶ್ವೇತಾ ಎಂಬುದಾಗಿತ್ತು.  ಶ್ವೇತಾ ಆಗಿದ್ದವರು ರಕ್ಷಿತಾ ಆಗಿದ್ದು ಅಪ್ಪು ಸಿನಿಮಾ ಮೂಲಕ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದು ರಕ್ಷಿತಾ. 2002, ಏಪ್ರಿಲ್ 26ರಂದು ತೆರೆಗೆ ಬಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತು. ಅಲ್ಲಿಂದ ಮುಂದೆ ರಕ್ಷಿತಾ ಕನ್ನಡದ ಜನಪ್ರಿಯ ನಟಿಯಾದರು.

ರಚಿತಾ ರಾಮ್

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್. ಕನ್ನಡ ಕಿರುತೆರೆಯಲ್ಲಿ ಬಿಂದಿಯಾ ರಾಮ್ ಆಗಿ ಚಿರಪರಿಚಿತರಾಗಿದ್ದ ರಚಿತಾ, ಬುಲ್‌ಬುಲ್ ಸಿನಿಮಾ ಮೂಲಕ ಹೆಸರು ಬದಲಿಸಿಕೊಂಡು ಚಂದನವನ ಪ್ರವೇಶಿಸಿದರು. ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಈ ನಟಿ, ಇಂದು ಕನ್ನಡದ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.

ರಾಧಿಕಾ ಪಂಡಿತ್

ನಂದಗೋಕುಲ ಸೀರಿಯಲ್ ಮೂಲಕ ನಟನೆ ಆರಂಭಿಸಿದ ರಾಧಿಕಾ ಪಂಡಿತ್, ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಹೀರೋಯಿನ್‌ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಬಳಿಕ ಹಲವು ಹಿಟ್ ಸಿನಿಮಾಗಳನ್ನು ನೀಡಿದ ರಾಧಿಕಾ, ತಮ್ಮ ಪ್ರಬುದ್ಧ ನಟನೆಯ ಮೂಲಕ ಕರ್ನಾಟಕ ರಾಜ್ಯ ಪ್ರಶಸ್ತಿ, ಸೈಮಾ, ಐಫಾ, ಫಿಲ್ಮ್ ಫೇರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಇಪ್ಪತ್ತೊಂದು ಚಿತ್ರಗಳಲ್ಲಿ ನಟಿಸಿರುವ ರಾಧಿಕಾ, ತಮ್ಮ ಪತಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.


ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ನಟಿ. 2002ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟ ಈ ನಟಿ, ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ನಂತರ ಆಟೋಶಂಕರ್​, ಹಠವಾದಿ, ನಿನಗಾಗಿ, ತವರಿಗೆ ಬಾ ತಂಗಿ ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಗೆದ್ದರು. ನಂತರ ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ರಾಧಿಕಾ ಕುಮಾರಸ್ವಾಮಿ, ಸ್ವೀಟಿ ಸಿನಿಮಾದ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದರು.

ರಾಗಿಣಿ ದ್ವಿವೇದಿ

2009ರಲ್ಲಿ 'ವೀರ ಮದಕರಿ' ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿದ ನಟಿ ರಾಗಿಣಿ ದ್ವಿವೇದಿ, ಈವರೆಗೂ 25ಕ್ಕೂ ಹೆಚ್ಚುಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿರುವ ತುಪ್ಪದ ಹುಡುಗಿ, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶಿವ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿರುವ ಇವರು, ಕೆಲ ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲೂ ಬಣ್ಣಹಚ್ಚಿದ್ದಾರೆ.

ರುಕ್ಮಿಣಿ ವಸಂತ್

2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ರುಕ್ಮಿಣಿ ವಸಂತ್, ಸದ್ಯ ಕನ್ನಡ ಚಿತ್ರರಂಗ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದ ಈ ಚೆಲುವೆ, ಸದ್ಯ ತಮಿಳು & ತೆಲುಗು ಚಿತ್ರರಂಗಕ್ಕೂ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+