twitter
    X
    Home ಚಲನಚಿತ್ರಗಳ ಒಳನೋಟ

    ಕೃಷಿ ತೊಡಗಿರುವ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು..!

    Author Sowmya Bairappa | Published: Monday, November 21, 2022, 07:03 PM [IST]

    ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ ರಾಯಲ್ ಲೈಫ್ ಲೀಡ್ ಮಾಡುತ್ತಿರುತ್ತಾರೆ. ಬಿಡುವಿನ ಸಮಯದಲ್ಲಿ ಪಾರ್ಟಿ, ಪಬ್ ಅಂತ ಬ್ಯುಸಿಯಾಗಿರುತ್ತಾರೆ. ಹೀಗೆ ಸಾಮಾನ್ಯ ಜನರಿಗೆ ಸೆಲೆಬ್ರಿಟಿಗಳ ಬಗ್ಗೆ ನಾನಾ ಅಭಿಪ್ರಾಯಗಳಿರುತ್ತವೆ. ಆದರೆ, ಕೆಲ ಸಿನಿಮಾ ನಟ-ನಟಿಯರು ತುಂಬಾ ಸರಳ ಜೀವನ ನಡೆಸುತ್ತಿರುತ್ತಾರೆ. ಇನ್ನೂ ಕೆಲ ಸೆಲೆಬ್ರಿಟಿಗಳು ಈಗ ಕೃಷಿಯತ್ತ ಮುಖ ಮಾಡಿದ್ದಾರೆ. ಅದೇ ರೀತಿ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್, ಕಿಶೋರ್, ಉಪೇಂದ್ರ ಜನಪ್ರಿಯ ನಟರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆ ನಟರ ಬಗ್ಗೆ ಮಾಹಿತಿ ಇಲ್ಲಿದೆ.

    cover image
    ಕಿಶೋರ್

    ಕಿಶೋರ್

    1

    ತಮ್ಮ ನಟನೆಯಿಂದ ದೇಶದ ಗಮನ ಸೆಳೆದಿರುವ ಕನ್ನಡದ ನಟ ಕಿಶೋರ್‌. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೆಬ್‌ ಸಿರೀಸ್‌ ಮೂಲಕ ಜನಪ್ರಿಯರಾಗಿದ್ದಾರೆ. ನಟ ಕಿಶೋರ್ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಬಹುತೇಕ ಸಮಯ ಕೃಷಿಯಲ್ಲೇ ತೊಡಗಿಕೊಳ್ಳುತ್ತಾರೆ. ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಬದುಕಿನಿಂದ ಬಂದವರು. ಭೂಮಿಯ ಬೆಲೆಯೇನು ಅನ್ನೋದು ನಮಗೆಲ್ಲ ಗೊತ್ತಿದೆ. ಭವಿಷ್ಯಕ್ಕೆ ನಾವೇನಾದ್ರೂ ಇಲ್ಲಿ ಬಿಟ್ಟು ಹೋಗಲು ಸಾಧ್ಯವಿದ್ದರೆ ಅದು ಕೃಷಿ ಮೂಲಕ ಎನ್ನುವುದು ನನ್ನ ನಂಬಿಕೆ. ಹಾಗಾಗಿ ನನಗೆ ಮಣ್ಣು ಮತ್ತು ಬಣ್ಣದ ನಡುವೆ ಮಣ್ಣು ಮುಖ್ಯ ಎನಿಸಿತು. ಹಾಗಾಗಿ ಆದು ನನ್ನ ಆದ್ಯತೆ ಆಗಿದೆ ಎಂದು ನಟ ಕಿಶೋರ್‌ ಹೇಳುತ್ತಾರೆ. ಕಿಶೋರ್ ಎಷ್ಟೇ ದೊಡ್ಡ ನಟರಾದರೂ ಸಾಮಾನ್ಯರ ಹಾಗೆ ಬದುಕುತ್ತಾರೆ. ಅವರು ಈವರೆಗೆ ಸಾಕಷ್ಟು ಕಾಡನ್ನು ಬೆಳೆಸಿದ್ದಾರೆ. ಅವರ ತೋಟಕ್ಕೆ ಕರಿಕಾಡು ಎಂದು ಹೆಸರಿಟ್ಟಿದ್ದಾರೆ. 

    ದರ್ಶನ್

    ದರ್ಶನ್

    2

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟರಾಗುವ ಮೊದಲೇ ಹಸುಗಳನ್ನು ಸಾಕಿ, ಹಾಲು ಮಾರಾಟ ಮಾಡುತ್ತಿದ್ದರು. ಫಾರಂ ಹೊಂದಿರುವ ದರ್ಶನ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಪಶುಸಂಗೋಪನೆ ಹಾಗೂ ಪ್ರಾಣಿಗಳ ಆರೈಕೆಯನ್ನು ಮಾಡುತ್ತಾರೆ. ದರ್ಶನ್ ಅವರು ಕೃಷಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ನಟನೆ ಜೊತೆಗೆ ಕೃಷಿಯಲ್ಲೂ ತೊಡಗಿಕೊಳ್ಳುತ್ತಾರೆ. ಮೈಸೂರಿನಿಂದ ಟಿ.ನರಸೀಪುರಕ್ಕೆ ಹೋಗುವ ದಾರಿಯಲ್ಲಿರುವ 'ತೂಗುದೀಪ'  ಫಾರ್ಮ್​​ಹೌಸ್ನಲ್ಲಿ ​ ಸಾಕಷ್ಟು ಕೃಷಿ ಮಾಡಿದ್ದಾರೆ. ಕೃಷಿಯ ಜೊತೆಗೆ ಅವರು ಹಸು, ಕುರಿ, ಕೋಳಿ, ಕುದುರೆಗಳನ್ನು ಸಾಕಿದ್ದಾರೆ. ಜೊತೆಗೆ ರಾಜ್ಯ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. 

    ಪ್ರೇಮ್

    ಪ್ರೇಮ್

    3

    ನಟ, ನಿರ್ದೇಶಕ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಅವರಿಗೆ ಕೂಡ ಕೃಷಿಯಲ್ಲಿ ಆಸಕ್ತಿ ಇದೆ.  ಇವರು ಮಂಡ್ಯ ಮದ್ದೂರಿನಲ್ಲಿ ತೋಟ ಮಾಡಿದ್ದು, ಆ ತೋಟಕ್ಕೆ 'ಅಮ್ಮನ ತೋಟ' ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ಹಸು, ಕುರಿ ಹಾಗೂ ಕೋಳಿ ಸಾಗಾಣಿಕೆ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಮಾಡುತ್ತಾರೆ. ತಮಗೆ ಬಿಡುವು ಸಿಕ್ಕಾಗೆಲ್ಲಾ ಇಲ್ಲಿ ಬಂದು ಕೃಷಿ ಚಟುವಟಿಕೆ ಮಾಡುತ್ತಾರೆ.  

    ಚಿಕ್ಕಣ್ಣ

    ಚಿಕ್ಕಣ್ಣ

    4

    ಸ್ಯಾಂಡಲ್‌ವುಡ್‌ನ ಸ್ಟಾರ್ ಕಾಮಿಡಿಯನ್ ಆಗಿರುವ ನಟ ಚಿಕ್ಕಣ್ಣ ಅವರಿಗೆ ಮೊದಲಿನಿಂದಲೂ ಕಾಡು, ಕೃಷಿಯಲ್ಲಿ ಒಲವು. ಕೃಷಿ ಕುಟುಂಬದಿಂದ ಬಂದ ಚಿಕ್ಕಣ್ಣ ಇಂದು ಸ್ಟಾರ್ ಕಾಮಿಡಿಯನ್ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಣ್ಣ ತಮ್ಮ ದುಡಿಮೆಯಿಂದ ಬಂದ ಹಣದಿಂದ ಜಾಗವನ್ನು ಖರೀದಿಸಿ, ಕೃಷಿ ಮಾಡುತ್ತಿದ್ದಾರೆ. ಚಿಕ್ಕಣ್ಣ ಅವರಿಗೆ ಮೊದಲಿನಿಂದಲೂ ಇಷ್ಟವಾದ ಕೆಲಸವೆಂದರೆ ಕೃಷಿ ಮಾಡುವುದು. ಅವರು ತಮ್ಮ ಜಾಗದಲ್ಲಿ ಕುರಿ, ಮೇಕೆ, ನಾಟಿ ಕೋಳಿ ಮತ್ತು ಹಸುಗಳನ್ನು ಸಾಕಿದ್ದಾರೆ. ಚಾಮುಂಡೇಶ್ವರಿ ದೇವಿಯ ಭಕ್ತರಾಗಿರುವ ಚಿಕ್ಕಣ್ಣ, ತಮ್ಮ  ಫಾರ್ಮ್​​ಹೌಸ್​ಗೆ ಶ್ರೀ ಚಾಮುಂಡೇಶ್ವರಿ ಫಾರ್ಮ್ ಹೌಸ್ ಎಂದು ಹೆಸರಿಟ್ಟಿದ್ದು, ಶೂಟಿಂಗ್ ಇಲ್ಲದಾಗ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.  ಇವರ ಫಾರ್ಮ್ ಹೌಸ್ ಮೈಸೂರಿನ ಆರ್.ಟಿ.ನಗರದಲ್ಲಿದೆ.  

     

    ಉಪೇಂದ್ರ

    ಉಪೇಂದ್ರ

    5

    ನಟ ಉಪೇಂದ್ರ ಕೂಡ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು ರಸ್ತೆಯ ರಾಮುಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ತರಕಾರಿ ಸೇರಿದಂತೆ ಹೂವುಗಳನ್ನು ಬೆಳೆದಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ, ಯಶಸ್ಸು ಗಳಿಸಿದ್ದರು. ಈ ತರಕಾರಿಗೆ ಯಾವುದೇ ಕ್ರಿಮಿನಾಶಕವನ್ನು ಬಳಸಿಲ್ಲ, ಬರೀ ದನದ ಗೊಬ್ಬರ ಮತ್ತು ನೀರಿನಿಂದ ಇದನ್ನು ಬೆಳೆದಿದ್ದೇವೆ. ಆರೋಗ್ಯಕ್ಕೂ ಒಳ್ಳೆಯದು. ಇದೇ ರೀತಿಯ ಕೃಷಿ ತಂತ್ರಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಸಹ ಅವರು ಹೇಳಿದ್ದರು. 

    ಶಶಿಕುಮಾರ್

    ಶಶಿಕುಮಾರ್

    6

    ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ಪ್ರಗತಿಪರ ರೈತ ಎಂದೇ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಸಿನಿಮಾಗಳಲ್ಲೂ ನಟಿಸಿರುವ ಶಶಿಕುಮಾರ್, ಕೃಷಿಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.  ಹೊಸ ಹೊಸ ಬೆಳೆಯನ್ನು ಬೆಳೆದಾಗ ಆ ಕುರಿತು ಅವರು ರೈತರಿಗೆ ಮಾಹಿತಿ ನೀಡುವ ಸಲುವಾಗಿ, ಅದರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆ ವಿಡಿಯೋಗಳಲ್ಲಿ ಕೃಷಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಇರುತ್ತದೆ.

    ಪ್ರಥಮ್

    ಪ್ರಥಮ್

    7

    ಬಿಗ್ ಬಾಸ್ ಸೀಸನ್ 5ರ ವಿನ್ನರ್ ಪ್ರಥಮ್ ಕೂಡ ಲಾಕ್‌ಡೌನ್‌ ಸಮಯದಲ್ಲಿ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಪುಟ್ಟ ಗ್ರಾಮವೊಂದರ ಪ್ರಥಮ್‌, ಲಾಕ್‌ಡೌನ್‌ ವೇಳೆ ಅಲ್ಲಿಯೇ ವ್ಯವಸಾಯ ಮಾಡಿಕೊಂಡಿದ್ದರು. ಹಾಲು ಕರೆಯುವುದು, ಕುರಿ ಮೇಯಿಸುತ್ತಿದ್ದರು. ಈಗಲೂ ಅದನ್ನು ಅವರು ಮುಂದುವರಿಸಿದ್ದಾರೆ. 

     

    ಭೂಮಿಕಾ ಶೆಟ್ಟಿ

    ಭೂಮಿಕಾ ಶೆಟ್ಟಿ

    8

    ನಟಿ ಭೂಮಿ ಶೆಟ್ಟಿ ಕೂಡ ಕೃಷಿಯತ್ತ ಒಲವು ತೋರಿದ್ದಾರೆ.  ಮೂಲತಃ ಕರಾವಳಿ ಕಡೆಯವರಾದ ಭೂಮಿ, ಹುಟ್ಟೂರಿಗೆ ಹೋದಾಗೆಲ್ಲ ಕೃಷಿ ಕೆಲಸಗಳನ್ನು ಮಾಡುತ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ಊರಿನಲ್ಲೇ ಇದ್ದ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ಕೃಷಿ ಕೆಲಸದ ಬಗ್ಗೆ ತಮಗಿರುವ ಆಸಕ್ತಿಯ ಬಗ್ಗೆ ಅವರು ಹೇಳಿಕೊಂಡಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X