X
ಚಿಕ್ಕಣ್ಣ

ಚಿಕ್ಕಣ್ಣ

Actor/Singer
ಜೀವನ ಚರಿತ್ರೆ :  ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಹಾಸ್ಯ ಕಲಾವಿದ,ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರ. ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ. ಚಿಕ್ಕಣ್ಣ 1986,ಜೂನ್ 22 ರಂದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ ಜನಿಸಿದರು.ಮೈಸೂರಿನ ದೃಶ್ಯ ಕಲಾವಿದೆ ತಂಡದಲ್ಲಿ ಕಾಮಿಡಿ ಶೋಗಳನ್ನು ಮಾಡುತ್ತಾ ತಮ್ಮ ಕಲಾಜೀವನ ಆರಂಭಿಸಿದರು. ಈ ತಂಡದ ಮೂಲಕ ಹಲವು ಹಬ್ಬ-ಹರಿದಿನಗಳು ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದ ಚಿಕ್ಕಣ್ಣ ನಂತರ ಉದಯ ಟಿವಿಯಲ್ಲಿ ಒಂದು ಕಾಮಿಡಿ ಶೋನಲ್ಲಿ ಕಾರ್ಯನಿರ್ವಹಿಸಿದರು. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಯಶ್ ಕಣ್ಣಿಗೆ ಬಿದ್ದರು. ನಂತರ ಯಶ್‌ರ `ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹಾಸ್ಯನಟನಾಗಿ ಕಾಲಿಟ್ಟರು. ತದನಂತರ ತೆರೆಕಂಡ `ರಾಜಾ ಹುಲಿ',`ಅಧ್ಯಕ್ಷ' ಚಿತ್ರಗಳು ಇವರಿಗೆ ಬಿಗ್ ಬ್ರೇಕ್ ನೀಡಿದವು. ಅಲ್ಲಿಂದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡ ಅಭಿನಯಿಸಿದ್ದಾರೆ.ಇವರಿಗೆ ಖಳನಾಯಕನಾಗಿ ನಟಿಸಬೇಕೆನ್ನುವ ಬಯಕೆ ಇದೆ.   `ಮಾಸ್ಟರ್ ಪೀಸ್ ',`ನನ್ನ ನಿನ್ನ ಪ್ರೇಮ ಕಥೆ' ಮುಂತಾದ ಚಿತ್ರಗಳ ಮೂಲಕ ಹಿನ್ನಲೆ ಗಾಯಕನಾಗಿ ಕೂಡ ಪಯಣ ಆರಂಭಿಸಿರುವ ಇವರು `ಶಾರ್ಪ್ ಶೂಟರ್ ಚಿತ್ರಕ್ಕೆ ಗೀತೆರಚನೆ ಮಾಡುವ ಮೂಲಕ ಗೀತಸಾಹಿತಿಯಾದರು. ಶರಣ್‌ರ ರ‍್ಯಾಂಬೋ 2' ಚಿತ್ರದ ನಿರ್ಮಾಪಕರಲ್ಲಿ ಶರಣ್ ಕೂಡ ಒಬ್ಬರು.
ಮುಂದೆ ಓದಿ

ಚಿಕ್ಕಣ್ಣ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನವನೀತ್ 10 Jan 2025
ವಚನ್ 08 Aug 2025
ಚಂದ್ರ ಮೋಹನ್ 24 Jan 2025
ದೀಪಕ್ ಮಧುವನಹಳ್ಳಿ 14 Feb 2025

ಚಿಕ್ಕಣ್ಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಚಿಕ್ಕಣ್ಣ

ಹೆಸರು ಚಿಕ್ಕಣ್ಣ
ಹುಟ್ಟಿದ ದಿನ 22 Jun 1986
ವಯಸ್ಸು 40
ಹುಟ್ಟಿದ ಸ್ಥಳ mandya
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಚಿಕ್ಕಣ್ಣ ಆಸ್ತಿ

ಆಸ್ತಿ

ಚಿಕ್ಕಣ್ಣ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+