twitter
    X
    Home ಚಲನಚಿತ್ರಗಳ ಒಳನೋಟ

    ಕನ್ನಡದ ಈ ಪೋಷಕ ನಟರ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಪಟ್ಟಿ.

    Author Sowmya Bairappa | Published: Friday, December 23, 2022, 01:04 PM [IST]

    ಸಿನಿಮಾದಲ್ಲಿ ನಾಯಕ, ನಾಯಕಿಯರಿಗಿರುವಷ್ಟೇ ಆದ್ಯತೆ ಪೋಷಕ ಪಾತ್ರಗಳಿಗೂ ಇರುತ್ತದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಮಿಂಚುವ ನಟರು ಸ್ಟಾರ್ ನಟ-ನಟಿಯರಿಗಿಂದ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಪೋಷಕ ಕಲಾವಿದರ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಕನ್ನಡ ಚಿತ್ರರಂಗದ ಪೋಷಕ ನಟರು ಒಂದು ದಿನಕ್ಕೆ ಲಕ್ಷಗಟ್ಟಲೇ ಸಂಭಾವನೆ ಪದಯೆಯುತ್ತಾರೆ ಎಂಬುದು ಅಚ್ಚರಿಯ ಸಂಗತಿ. ಹಾಗಾದ್ರೆ ಯಾವ್ಯಾವ ಕಲಾವಿದರು ಎಷ್ಟೆಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

    cover image
    ರವಿಶಂಕರ್ ಪಿ

    ರವಿಶಂಕರ್ ಪಿ

    1

    ಕೆಂಪೇಗೌಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರವಿಶಂಕರ್ ಅವರು ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ದರು. ಇದು ಆರ್ಮುಗಂ ಕೋಟೆ ಕಣೋ ಡೈಲಾಗ್ ಮೂಲಕ ಸಖತ್ ಫೇಮಸ್ ಆದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ರವಿಶಂಕರ್ ಸದ್ಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. ನಟ ರವಿಶಂಕರ್ ಅವರು ಒಂದು ದಿನಕ್ಕೆ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರು ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್ ಟೈಮ್ ವಿಲನ್ ಆಗಿ ಅಬ್ಬರಿಸಿದ್ದಾರೆ.

    ಸಾಧು ಕೋಕಿಲ

    ಸಾಧು ಕೋಕಿಲ

    2

    ಕನ್ನಡ ಚಿತ್ರರಂಗದ ಕಾಮಿಡಿ ಮಹಾರಾಜ ಅಂತ ಬ್ರಾಂಡ್ ಆಗಿರುವ ಹಾಸ್ಯ ನಟ ಸಾಧುಕೋಕಿಲ ಅವರು ಒಂದು ದಿನಕ್ಕೆ 1 ರಿಂದ 2 ಲಕ್ಷ ರೂ. ಸಂಭಾವನೆ ಪಡೆಯುತ್ತಾರಂತೆ. ಜೊತೆಗೆ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವ ಸಾಧುಕೋಕಿಲ, ಬೇರೆ-ಬೇರೆ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ, ನಟ ಸಾಧುಕೋಕಿಲ ವೃತ್ತಿ ಜೀವನದಲ್ಲಿ ಮೊದಲು ಸಂಗೀತ ನಿರ್ದೇಶಕ, ಕೀಬೋರ್ಡ್, ಡೈರೆಕ್ಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ನಂತರ ಹಾಸ್ಯ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ ಈಗ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

     

    ರಂಗಾಯಣ ರಘು

    ರಂಗಾಯಣ ರಘು

    3

    ಕನ್ನಡ ಚಿತ್ರರಂಗದ ಸಕಲಕಲಾವಲ್ಲಭ ಅಂತಾನೇ ಹೆಸರುವಾಸಿಯಾಗರುವ ನಟ ರಂಗಾಯಣ ರಘು ಕೂಡ ಒಂದು ದಿನಕ್ಕೆ ಸಖತ್ ಚಾರ್ಜ್ ಮಾಡುತ್ತಾರೆ. ಖಳನಟ, ಕಾಮಿಡಿ ಹಾಗೂ ತಂದೆ ಪಾತ್ರ ಹೀಗೆ ಯಾವುದೇ ಇರಲಿ ನಟ ರಂಗಾಯಣ ರಘು ಒಂದು ದಿನಕ್ಕೆ 1 ಲಕ್ಷದಿಂದ 50 ಸಾವಿರ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಾರೆ. ಇವರು ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆ.

     

    ಚಿಕ್ಕಣ್ಣ

    ಚಿಕ್ಕಣ್ಣ

    4

    ಕಾಮಿಡಿ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ಚಿಕ್ಕಣ್ಣ. ಇಂದು ಬಹುಬೇಡಿಕೆಯ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ.  ಕನ್ನಡ ಸಿನಿಮಾರಂಗದ ಎಲ್ಲಾ ನಟರ ಜೊತೆ ತೆರೆ ಹಂಚಿಕೊಂಡಿರುವ ನಟ ಚಿಕ್ಕಣ್ಣ, ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಚಿಕ್ಕಣ್ಣ ಒಂದು ದಿನಕ್ಕೆ ಒಂದರಿಂದ ಎರಡು ಲಕ್ಷ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ.

    ಅಚ್ಯುತ್ ಕುಮಾರ್

    ಅಚ್ಯುತ್ ಕುಮಾರ್

    5

    ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಅಚ್ಯುತ್ ಕುಮಾರ್ ಕೂಡ ಒಬ್ಬರು. ತಮ್ಮ ಕಲಾತ್ಮಕ ನಟನೆಯಿಂದ ಹತ್ತು ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರು ಕನ್ನಡ ಬಹುಬೇಡಿಕೆಯ ಕಲಾವಿದರು. ಇವರು ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಚಿತ್ರದ ಬಳಿಕ ತಮ್ಮ ಬೇಡಿಕೆಯನ್ನು ಹೆಚ್ಚು ಮಾಡಿಕೊಂಡರು. ಇವರು ಒಂದು ದಿನಕ್ಕೆ 1 ರಿಂದ 2 ಲಕ್ಷ ಸಂಭಾವನೆ ಪಡೆಯುತ್ತಾರೆ. ಎಹ್ತು ಡಿಮ್ಯಾಂಡ್ ಇದ್ದರೂ ಕೂಡ ಸಿಂಪಲ್ ಆಗಿರಲು ಇಷ್ಟಪಡುತ್ತಾರೆ.  

    ಅನಂತ್ ನಾಗ್

    ಅನಂತ್ ನಾಗ್

    6

    ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾ ಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸ ನಟರಿಂದ ಹಿಡಿದು ಸ್ಟಾರ್ ನಟರ ಸಿನಿಮಾಗಳಲ್ಲಿ ಅನಂತ್ ನಾಗ್ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಒಂದು ದಿನಕ್ಕೆ 2 ರಿಂದ 3 ಲಕ್ಷ ಸಂಭಾವನೆ ಪಡೆಯುತ್ತಾರೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X