X
ಹೋಮ್ » ಸೆಲಬ್ರಿಟಿಗಳು » ರವಿಶಂಕರ್ ಪಿ
ರವಿಶಂಕರ್ ಪಿ

ರವಿಶಂಕರ್ ಪಿ

Actor/Singer/Director
ಜೀವನ ಚರಿತ್ರೆ :  ರವಿಶಂಕರ್ ಪಿ ದಕ್ಷಿಣ ಭಾರತದ ಜನಪ್ರಿಯ ಖಳನಟ ಹಾಗೂ ಡಬ್ಬಿಂಗ್ ಆರ್ಟಿಸ್ಟ್. 1966ರಲ್ಲಿ ನವೆಂಬರ್ 28ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಇವರು, ಬೆಳೆದಿದ್ದೆಲ್ಲಾ ಚೈನೈನಲ್ಲಿ.    ವೃತ್ತಿಜೀವನ  1986ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ರವಿಶಂಕರ್, ಕನ್ನಡ, ತೆಲುಗು, ತಮಿಳು ಭಾಷೆಯ ವಿವಿಧ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ, ಡಬ್ಬಿಂಗ್  ಆರ್ಟಿಸ್ಟ್ ಆಗಿದ್ದಾರೆ. 2009ರಲ್ಲಿ ಇವರು ಮೊದಲ ಬಾರಿ ಡಬ್ಬಿಂಗ್ ಮಾಡಿದ ಸಿನಿಮಾ ಆರುಂಧತಿ.    ಕನ್ನಡ ಸಿನಿಮಾರಂಗ ಹಳ್ಳಿ ಕೃಷ್ಣ ಡೆಲ್ಲಿ ರಾಧೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ನಂತರ ಮನಮೆಚ್ಚಿದ ಸೊಸೆ, ಕೋಟೆ ಚಿತ್ರಗಳಲ್ಲಿ ನಟಿಸಿದರು. 2011ರಲ್ಲಿ ಕಿಚ್ಚ ಸುದೀಪ್ ಅಭಿನಯದ  'ಕೆಂಪೇಗೌಡ' ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ 'ಆರ್ಮುಗಂ' ಎಂಬ ವಿಲನ್ ಪಾತ್ರದಲ್ಲಿ ನಟಿಸಿದ್ದು, ರವಿಶಂಕರ್ ಅವರ ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಗೆ ಕನ್ನಡ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗವುದರ ಜೊತೆಗೆ ರವಿಶಂಕರ್ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾದವು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಪುನೀತ್ ರಾಜ್​​ಕುಮಾರ್, ಯಶ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್ ಟೈಮ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಸದ್ಯ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲೂ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.    ರವಿಶಂಕರ್ ನಟಿಸಿದ ಕನ್ನಡ ಸಿನಿಮಾಗಳು ಕೆಂಪೇಗೌಡ, ದಂಡಂ ದಶಗುಣಂ, ಶಕ್ತಿ, ದಂಡುಪಾಳ್ಯ, ಎದೆಗಾರಿಕೆ, ಯಾರೇ ಕೂಗಾಡಲಿ, ವರದನಾಯಕ, ಮೈನಾ, ಟೋಪಿವಾಲ, ಬಚ್ಚನ್, ವಿಕ್ಟೋರಿ, ಘರ್ಷಣೆ, ಮಾಣಿಕ್ಯ, ಅಧ್ಯಕ್ಷ, ಶಿವಂ, ಅಭಿನೇತ್ರಿ, ರಾಜ ರಾಜೆಂದ್ರ, ರುದ್ರತಾಂಡವ, ಆಟಗಾರ, ಆರ್ ಎಕ್ಸ್ ಸೂರಿ, ಲವ್ ಯು ಆಲಿಯ, ಪ್ಲಸ್ ರಥಾವರ, ಮಾಸ್ಟರ್ ಪೀಸ್, ಕಥೆ ಚಿತ್ರ ಕಥೆ ನಿರ್ದೇಶನ, ಪುಟ್ಟಣ್ಣ, ವಿರಾಟ್, ಅಪೂರ್ವ, ದೊಡ್ಮನೆ ಹುಡುಗ, ಮುಂಗಾರು ಮಳೆ-2, ಜಿಗರ್ ಥಂಡ      
ಮುಂದೆ ಓದಿ

ರವಿಶಂಕರ್ ಪಿ ಚಲಚಿತ್ರಗಳು

ರವಿಶಂಕರ್ ಪಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರವಿಶಂಕರ್ ಪಿ

ಹೆಸರು ರವಿಶಂಕರ್ ಪಿ
ಹುಟ್ಟಿದ ದಿನ 28 Nov 1966
ವಯಸ್ಸು 60
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರವಿಶಂಕರ್ ಪಿ ಆಸ್ತಿ

ಆಸ್ತಿ

ರವಿಶಂಕರ್ ಪಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+