ಒಂಬತ್ತನೇ ವಾರ ಬಿಗ್‌ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಒಂದು ತಂಡದವರು ಗಂಧರ್ವರಾಗಿದ್ದರೆ, ಇನ್ನೊಂದು ತಂಡ ರಾಕ್ಷಸರಾಗಿದ್ದಾರೆ. ಈ ಕಾಲ್ಪನಿಕ ಬಿಗ್‌ಬಾಸ್ ಲೋಕಕ್ಕೆ ಸ್ನೇಹಿತ್ ಒಡೆಯ. ಆದರೆ, ಬಿಗ್‌ಬಾಸ್ ಕೊಟ್ಟ ಚಟುವಟಿಕೆ ವೇಳೆ ವಿನಯ್-ಕಾರ್ತಿಕ್ ಹಾಗೂ ನಮ್ರತಾ-ಸಂಗೀತಾ ನಡುವೆ ಪರಸ್ಪರ ಕಿತ್ತಾಟ ನಡೆದಿದ್ದು, ಇದನ್ನು ನೋಡ್ಕೊಂಡು ಕ್ಯಾಪ್ಟನ್ ಸ್ನೇಹಿತ್ ಸುಮ್ಮನಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.