For Quick Alerts
  ALLOW NOTIFICATIONS  
  For Daily Alerts

  'ಚಿರಂಜೀವಿ ಸರ್ಜಾ-ಮೇಘನಾ ರಾಜ್' ಲವ್ ಸ್ಟೋರಿ ನಿಜವೋ.? ಸುಳ್ಳೋ.?

  By Naveen
  |

  ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್.... ಇಬ್ಬರೂ ಕೇವಲ ಫ್ರೆಂಡ್ಸ್ ಅಲ್ಲ. ಇಬ್ಬರ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಶುರುವಾಗಿ ವರ್ಷಗಳೇ ಕಳೆದಿದೆ.

  ಸಿನಿ ಬದುಕಿನಲ್ಲಿ ಬಿಜಿಯಾಗಿರುವ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಾತ್ರ ಈ ಗಾಸಿಪ್ ಗಳಿಗೆ ಕಿವಿ ಕೊಟ್ಟಿಲ್ಲ. ಅದಕ್ಕೆ ಕ್ಲಾರಿಟಿ ಕೊಡುವ ಗೋಜಿಗೂ ಹೋಗಿಲ್ಲ.[ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?]

  ಮಾಧ್ಯಮಗಳ ಮುಂದೆ ಒಟ್ಟಾಗಿ ಕಾಣಿಸಿಕೊಳ್ಳದ ಈ ಜೋಡಿ ಈಗ ಮೊಟ್ಟ ಮೊದಲ ಬಾರಿಗೆ ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮನಬಿಚ್ಚಿ ಮಾತನಾಡಲಿದ್ದಾರೆ. ಮುಂದೆ ಓದಿರಿ....

  ಒಂದೇ ಕಾರ್ಯಕ್ರಮದಲ್ಲಿ ಚಿರು-ಮೇಘನಾ

  ಒಂದೇ ಕಾರ್ಯಕ್ರಮದಲ್ಲಿ ಚಿರು-ಮೇಘನಾ

  'ಕಲರ್ಸ್ ಸೂಪರ್' ವಾಹಿನಿಯ ಹೊಸ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

  'ಸೂಪರ್ ಟಾಕ್ ಟೈಮ್'

  'ಸೂಪರ್ ಟಾಕ್ ಟೈಮ್'

  ಕಲರ್ಸ್ ಸೂಪರ್ ವಾಹಿನಿಯ ಸೂಪರ್ ಟಾಕ್ ಟೈಮ್ ಎಂಬ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಚಿರು, ಮೇಘನಾ ಇಬ್ಬರು ಅತಿಥಿಯಾಗಿ ಭಾಗವಹಿಸಲಿದ್ದಾರೆ.[ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

  ಬಾಯಿ ಬಿಡುತ್ತಾರಾ.?

  ಬಾಯಿ ಬಿಡುತ್ತಾರಾ.?

  'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಒಂದು ಟಾಕ್ ಶೋ ಆಗಿದ್ದು, ಅಲ್ಲಿ ಸೆಲೆಬ್ರಿಟಿಗಳ ಗಾಸಿಪ್ ಬಗ್ಗೆ ಸಹ ಮಾತನಾಡಲಾಗುತ್ತದೆಯಂತೆ. ಹಾಗಾದರೆ, ಚಿರು ಮೇಘನಾ ಗಾಸಿಪ್ ಸಹ ಅಲ್ಲಿ ಪ್ರಸ್ತಾಪ ಆಗುತ್ತಾ.? ಅವರಿಬ್ಬರ ಲವ್ ಸ್ಟೋರಿ ನಿಜವೋ.? ಸುಳ್ಳೋ.? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂಬ ಕುತೂಹಲ ಕೆಲವರಲ್ಲಿ ಮೂಡಿದೆ.

  ಚಿರು ಸೂಚನೆ ಕೊಟ್ಟಿದ್ದರು

  ಚಿರು ಸೂಚನೆ ಕೊಟ್ಟಿದ್ದರು

  ಇನ್ನು ಕೆಲವೇ ದಿನಗಳಲ್ಲಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ ಅಂತ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಚಿರಂಜೀವಿ ಸರ್ಜಾ ಸೂಚನೆ ಕೊಟ್ಟಿದ್ದರು.[ದ್ವಾರಕೀಶ್ ಹೊಸ ಚಿತ್ರಕ್ಕೆ ಚಿರು ಜತೆ ಮೇಘನಾ ರಾಜ್]

  ಅಂತೆ - ಕಂತೆ

  ಅಂತೆ - ಕಂತೆ

  ಚಿತ್ರರಂಗದ ಕೆಲವರು ಹೇಳುವ ಪ್ರಕಾರ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಹೆಚ್ಚು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಒಟ್ಟಿಗೆ ಸಿನಿಮಾ ಮಾಡಿದ್ದರು

  ಒಟ್ಟಿಗೆ ಸಿನಿಮಾ ಮಾಡಿದ್ದರು

  ದ್ವಾರಕೀಶ್ ನಿರ್ಮಾಣದ 'ಆಟಗಾರ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು.

  ಹಾಗಾದರೆ ಇದು ನಿಜವೇ?

  ಹಾಗಾದರೆ ಇದು ನಿಜವೇ?

  ಚಿರು, ಮೇಘನಾ ಬಗೆ ಇರುವ ಗಾಸಿಪ್ ನಿಜವೇ? ಅಥವಾ ಅದು ಬರಿ ಗಾಸಿಪ್ ಅಷ್ಟೇನಾ? ಎಂಬ ಪ್ರಶ್ನೆಗಳಿಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಉತ್ತರ ಸಿಗಬಹುದು.

  ಜೂನ್ 1 ರಿಂದ ಶುರು

  ಜೂನ್ 1 ರಿಂದ ಶುರು

  ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಜೂನ್ 1 ರಿಂದ ಗುರುವಾರ ಮತ್ತು ಶುಕ್ರವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದ್ದು, ಪ್ರಜ್ವಲ್ ಮತ್ತು ರಾಧಿಕಾ ಚಂದ್ರನ್ ದಂಪತಿ ಕೂಡ ಈ ಶೋ ನಲ್ಲಿ ಭಾಗವಹಿಸಲಿದ್ದಾರೆ.

  English summary
  Rumoured Couple 'Chiranjeevi Sarja and Meghana Raj' will take part in Colors Super Channel's 'Super Talk Time' Show

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X