»   » ದ್ವಾರಕೀಶ್ ಹೊಸ ಚಿತ್ರಕ್ಕೆ ಚಿರು ಜತೆ ಮೇಘನಾ ರಾಜ್

ದ್ವಾರಕೀಶ್ ಹೊಸ ಚಿತ್ರಕ್ಕೆ ಚಿರು ಜತೆ ಮೇಘನಾ ರಾಜ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿರುವ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಚಿತ್ರ ಸದ್ದಿಲ್ಲದಂತೆ ಶುರುವಾಗಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಸದ್ಯಕ್ಕೆ ಪ್ರೊಡಕ್ಷನ್ ನಂಬರ್ 49 ಎಂದಿದ್ದಾರೆ ದ್ವಾರಕೀಶ್.

ಇನ್ನು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಆ ದಿನಗಳು' ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ. ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರ ಇದು. [ಪ್ರಚಂಡ ಕುಳ್ಳ ದ್ವಾರಕೀಶ್ ಮೋಸಂಬಿ ಮಾರಿದ ಕಥೆ]

Chiru, Meghana in Dwarakish movie

ನವೆಂಬರ್ 5 ರಿಂದ ಚಿತ್ರೀಕರಣ ಶುರುವಾಗಲಿದೆ. ಪ್ಯಾರ್ ಗೆ ಆಗ್ಬಿಟ್ಟೈತೆ ಬೆಡಗಿ ಪರುಲ್ ಯಾದವ್, ನಟ ರವಿಶಂಕರ್ ಸಹ ಚಿತ್ರದ ತಾರಾಬಳಗದಲ್ಲಿರುತ್ತಾರೆ. ಅನೂಪ್ ಸೀಳಿನ್ ಅವರ ಸಂಗೀತ, ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು ಬಹುತೇಕ ಶೂಟಿಂಗ್ ಶ್ರೀಲಂಕಾದಲ್ಲಿ ನಡೆಯಲಿದೆ ಎನ್ನುತ್ತವೆ ಮೂಲಗಳು. ಚಿತ್ರದಲ್ಲಿ ಮೇಘನಾ ಅವರು ಸೂಪರ್ ಮಾಡೆಲ್ ಆಗಿ ಕಾಣಿಸಲಿದ್ದಾರೆ. ಹಠಮಾರಿ ಸ್ವಭಾವದ ಹುಡುಗಿ, ಎಲ್ಲವನ್ನೂ ಗೆಲ್ಲಬೇಕೆಂಬ ಛಲವಿರುವ ಪಾತ್ರ ಅವರದು.

'ಚಾರುಲತಾ' (2012) ಚಿತ್ರದ ನಿರ್ಮಾಣದ ಬಳಿಕ ದ್ವಾರಕೀಶ್ ಅವರು ಬರೋಬ್ಬರಿ ಎರಡು ವರ್ಷ ಗ್ಯಾಪ್ ತೆಗೆದುಕೊಂಡು ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದೆ. ದ್ವಾರಕೀಶ್ ನಿರ್ಮಾಣದ ಚಿತ್ರ ಎಂದ ಮೇಲೆ ಸ್ಯಾಂಡಲ್ ವುಡ್ ಚಿತ್ರರಸಿಕರ ಕುತೂಹಲದ ನಿರೀಕ್ಷೆ ಇದ್ದೇ ಇರುತ್ತದೆ. (ಫಿಲ್ಮಿಬೀಟ್ ಕನ್ನಡ)

English summary
An actor, director and producer Dwarakish new film, yet to be titled, starts at his residence recently. The film being directed by K M Chaitanya of 'Aa Dingalu'. The film stars Chiranjeevi Sarja along with Meghana Raj, Parul Yadav and Ravishankar in prominent roles in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada