»   » ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?

ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?

Posted By:
Subscribe to Filmibeat Kannada

ಒಂದ್ಕಡೆ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ, ಇನ್ನೊಂದ್ಕಡೆ ಖ್ಯಾತ ನಟ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್. ಇಂದು ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಈ ಯುವ ಪ್ರತಿಭೆಗಳ ಮಧ್ಯೆ ಸಂಥಿಂಗ್ ಸಂಥಿಂಗ್ ನಡೀತಿದ್ಯಾ?

ಈ ಗುಸುಗುಸು ರೆಕ್ಕೆ ಪುಕ್ಕ ಕಟ್ಟಿಕೊಂಡು ಗಾಂಧಿನಗರದಲ್ಲಿ ಬಹಳ ದಿನಗಳಿಂದಲೂ ಹರಿದಾಡುತ್ತಲೇ ಇದೆ. ಆದರೂ 'ನಮ್ಮಿಬ್ಬರ ನಡುವೆ ಏನಿಲ್ಲ, ಏನೇನೂ ಇಲ್ಲ' ಅಂತಲೇ ಸಮರ್ಥಿಸಿಕೊಳ್ಳುತ್ತಿರುವ ಈ ಜೋಡಿ, ಎಲ್ಲೇ ಹೋದರೂ ಅಂಟಿಕೊಂಡೇ ಇರುವುದು ಸುಳ್ಳಲ್ಲ. [ಚಿರಂಜೀವಿ ಸರ್ಜಾ ಇನ್ ಲವ್, ಹುಡುಗಿ ಯಾರು?]

Chiranjeevi3

ಪಾರ್ಟಿಯಾಗಲಿ, ಡಿನ್ನರ್ ಆಗಲಿ, ಇನ್ಯಾರದೇ ಮದುವೆಯಾಗಲಿ, ಎಲ್ಲೇ ಹೋದರೂ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲ್ಲ. ಅದನ್ನ ಈ ಫೋಟೋಗಳೇ ಸಾರಿ ಸಾರಿ ಹೇಳುತ್ತಿವೆ.

ಅಸಲಿಗೆ ಈ ಎಲ್ಲಾ ಫೋಟೋಗಳನ್ನ ಟ್ವೀಟ್ ಮಾಡಿರುವುದು ಖುದ್ದು ಮೇಘನಾ ರಾಜ್. ನಾಗಾಭರಣ ಪುತ್ರನ ಮದುವೆಗೆ ಟ್ವೀಟ್ ಮೂಲಕ ವಿಶ್ ಮಾಡುತ್ತಾ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಮೇಘನಾ ಚಿರು ಜೊತೆಯೇ ಇದ್ದಾರೆ.

ಇನ್ನೂ, 'ಭವಿಷ್ಯ ಇಲ್ಲಿದೆ' ಅಂತ ಚಿರಂಜೀವಿ ಸರ್ಜಾ, ಯಶ್ ಜೊತೆ ಮೇಘನಾ ತೆಗೆಸಿಕೊಂಡಿರುವ ಫೋಟೋವನ್ನು ಕೂಡ ಅವರೇ ಟ್ವೀಟ್ ಮಾಡಿದ್ದಾರೆ. ಇಬ್ಬರ ಫ್ರೆಂಡ್ ಶಿಪ್ ಇನ್ನಷ್ಟು ಸ್ಪೆಷಲ್ ಆಗುವುದಕ್ಕೆ 'ಆಟಗಾರ' ತಂಡ ಕೂಡ ವೇದಿಕೆ ಕಲ್ಪಿಸಿ ಕೊಟ್ಟಿದೆ. ಚಿತ್ರದಲ್ಲಿ ತೆರೆಮೇಲೆ ಒಂದಾಗಿ ನಟಿಸುತ್ತಿರುವ ಈ ಜೋಡಿ, ತೆರೆ ಹಿಂದೆಯೂ ಒಟ್ಟಾಗಿ ಓಡಾಡುತ್ತಿದ್ದಾರೆ. [ಮೇಘನಾ, ಚಿರಂಜೀವಿ ಸರ್ಜಾ ಮದುವೆ ನಿಜವೇ?]

ಅಷ್ಟೇ ಅಲ್ಲ, ಇಬ್ಬರ ಟ್ವಿಟ್ಟರ್ ಪ್ರೇಮ ಎಷ್ಟಿದೆ ಅಂದ್ರೆ, ಚಿರು ಟ್ವೀಟ್ ಗಳನ್ನ ಮೇಘನಾ ರೀಟ್ವೀಟ್ ಮಾಡಿದ್ರೆ, ಮೇಘನಾ ಟ್ವೀಟ್ ಗಳಿಗೆ ಚಿರು ಮಾಡುವುದು ಅದೇ ಕೆಲಸ. ಇನ್ನೂ ಮೇಘನಾ ಅವರ ಟ್ವಿಟ್ಟರ್ ಅಕೌಂಟ್ ನಲ್ಲೇ ಚಿರು ಅಭಿನಯಿಸುತ್ತಿರುವ 'ರುದ್ರತಾಂಡವ' ಪ್ರೊಮೋಷನ್ ಕೂಡ ಮಾಡ್ತಿದ್ದಾರೆ.

ಇಷ್ಟೆಲ್ಲಾ ನೋಡುತ್ತಿರುವ ಅವರ ಟ್ವಿಟ್ಟರ್ ಅಭಿಮಾನಿಗಳು ಇಬ್ಬರ ನಡುವೆ ಏನಿದೆ, ಏನಿಲ್ಲ..? ಅಂತ ತಲೆಕೆರೆದುಕೊಳ್ಳಿದ್ದಾರೆ. ಏನಿದ್ಯೂ, ಇಲ್ಲವೋ ಗೊತ್ತಿಲ್ಲ, ಆದರೆ ಗಾಂಧಿನಗರದಲ್ಲಿ ಬರೀ ಮಾತನಾಡುವವರಿಗೆ ಬಿಸಿ ಬಿಸಿ ವಿಷಯ ಸಿಕ್ಕಿದೆ ಅಷ್ಟೆ.

English summary
There has been buzz from quite long time that something is cooking between Chiranjeevi Sarja and Meghana Raj. The alleged couple are seen together in many parties and functions. Chiru's and Meghana's twitter account shows all of that.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada