ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಅವಘಡ

ಬಿಗ್‌ ಬಾಸ್ ಮನೆಯೆಂದರೆ ಅದು ಜಗಳ, ದ್ವೇಷ, ಕಾಲೆಳೆತ ತುಂಬಿದ ಬಿಸಿ-ಬಿಸಿ ವಾತಾವರಣ ಹೊಂದಿದ ಮನೆ. ಆದರೆ ಇಗ ನಿಜಕ್ಕೂ ಬಿಗ್‌ಬಾಸ್ ಮನೆಗೆ ಬೆಂಕಿ ಬಿದ್ದಿದೆ.

ಹಿಂದಿ ಬಿಗ್‌ಬಾಸ್ ಮನೆಗೆ ನಿಜಕ್ಕೂ ಬೆಂಕಿ ಬಿದ್ದಿದ್ದು, ಬೆಂಕಿಯಲ್ಲಿ ಮನೆಯ ಬಹುತೇಕ ಭಾಗ ಸುಟ್ಟುಹೋಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ. ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳೂ ಆಗಿಲ್ಲ.

ಹಿಂದೂ ಭಾವನೆಗಳಗೆ ಧಕ್ಕೆ: ಮಾಜಿ ಬಿಗ್‌ಬಾಸ್ ಸ್ಪರ್ಧಿ ಬಂಧನ
ಕೆಲವು ದಿನಗಳ ಹಿಂದಷ್ಟೆ ಮುಗಿದ ಹಿಂದಿ ಬಿಗ್‌ಬಾಸ್ ಸೀಸನ್ 15 ರ ಮನೆಗೆ ಬೆಂಕಿ ಬಿದ್ದಿದೆ. ಮುಂಬೈನ ಫಿಲಂ ಸಿಟಿಯಲ್ಲಿ ಬಿಗ್‌ಬಾಸ್ ಮನೆಯ ಸೆಟ್‌ ಅನ್ನು ಹಾಕಲಾಗಿತ್ತು. ನಾಲ್ಕು ಅಗ್ನಿ ಶಾಮಕ ದಳ ವಾಹನಗಳು ಕೆಲಸ ಮಾಡಿ ಬೆಂಕಿಯನ್ನು ತಹಬದಿಗೆ ತರುವ ಕಾರ್ಯ ಮಾಡಿವೆ. ಇದೊಂದು ಲೆವೆಲ್ ಒನ್ ಮಾದರಿಯ ಅಗ್ನಿ ಅವಘಡವಾಗಿತ್ತು ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಹೇಳಿದ್ದಾರೆ.

Fire Accident In Hindi BiggBoss Season 15 House
ಹಿಂದಿ ಬಿಗ್‌ಬಾಸ್ 15 ಮನೆಯನ್ನು ಅರಣ್ಯದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಈ ಬಾರಿಯ ಹಿಂದಿ ಬಿಗ್‌ಬಾಸ್‌ನ ಥೀಮ್ ಸಹ ಅರಣ್ಯದ ಮಾದರಿಯಲ್ಲಿಯೇ ಇತ್ತು. ಮರ, ಬಳ್ಳಿಯ ಮಾದರಿಗಳನ್ನು ಈ ಬಾರಿ ಮನೆಯಲ್ಲಿ ಇರಿಸಲಾಗಿತ್ತು. ಬಿಗ್‌ಬಾಸ್ ಮನೆ ನಿರ್ಮಾಣದಲ್ಲಿ ಸಾಕಷ್ಟು ಮರದ ವಸ್ತುಗಳು, ಹತ್ತಿ, ಉಣ್ಣೆ, ರೆಗ್ಸಿನ್ ಮಾದರಿ ಬಟ್ಟೆಗಳ ಬಳಕೆ ಆಗಿತ್ತು ಹಾಗಾಗಿ ಬೆಂಕಿ ತೀವ್ರವಾಗಿ ವ್ಯಾಪಿಸಿತ್ತು ಎನ್ನಲಾಗುತ್ತಿದೆ.

ಬಿಗ್‌ಬಾಸ್ 15ರ ಫಿನಾಲೆ ಜನವರಿ 30 ರಂದು ನಡೆದಿತ್ತು. ಈ ಬಾರಿಯ ಬಿಗ್‌ಬಾಸ್ ವಿನ್ನರ್ ಆಗಿ ತೇಜಸ್ವಿ ಪ್ರಕಾಶ್ ಅವರನ್ನು ಸಲ್ಮಾನ್ ಖಾನ್ ಘೋಷಿಸಿದರು. ಫಿನಾಲೆಯಲ್ಲಿ ನಟಿ ಶಮಿತಾ ಶೆಟ್ಟಿ, ಕರಣ್ ಕುಂದ್ರಾ, ನಿಶಾಂತ್ ಭಟ್, ಪ್ರತೀಕ್ ಸೆಹಾಜ್‌ಪಾಲ್ ಹಾಗೂ ತೇಜಸ್ವಿ ಪ್ರಕಾಶ್ ಇದ್ದರು. ಫೈನಲಿಸ್ಟ್‌ಗಳಲ್ಲಿ ನಿಶಾಂತ್ ಭಟ್ 10 ಲಕ್ಷ ಹಣ ಪಡೆದು ಸ್ಪರ್ಧೆಯಿಂದ ಹೊರನಡೆದರು. ಶಮಿತಾ ಶೆಟ್ಟಿ ಕಡಿಮೆ ಓಟುಗಳಿಂದಾಗಿ ಹೊರನಡೆದರು, ಬಳಿಕ ಕರಣ್ ಕುಂದ್ರಾ ಸಹ ಕಡಿಮೆ ಮತಗಳಿಂದಾಗಿ ಶೋನಿಂದ ಹೊರನಡೆಯಬೇಕಾಯಿತು. ಅಂತಿಮ ಸುತ್ತಿಗೆ ತೇಜಸ್ವಿ ಪ್ರಕಾಶ್ ಹಾಗೂ ಪ್ರತೀಕ್ ಇಬ್ಬರೇ ಉಳಿದುಕೊಂಡರು. ಇವರಿಬ್ಬರಲ್ಲಿ ತೇಜಸ್ವಿ ಪ್ರಕಾಶ್ ಅನ್ನು ವಿನ್ನರ್ ಆಗಿ ಶೋನ ನಿರೂಪಕ ಸಲ್ಮಾನ್ ಖಾನ್ ಘೋಷಿಸಿದರು.

ನನ್ನನ್ನು ಮುಟ್ಟಿದ್ರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದ ರಾಖಿ ಸಾವಂತ್!
ಸ್ಪಷ್ಟ ನಿಲವು, ಇತರ ಸ್ಪರ್ಧಿಗಳೊಂದಿಗೆ ಹೊಂದಾಣಿಕೆ ಹೊಂದಿದ್ದ ತೇಜಸ್ವಿ ಪ್ರಕಾಶ್, ಟಾಸ್ಕ್‌ಗಳಲ್ಲಿ ಪೂರ್ಣ ಶ್ರಮ ಹಾಕುತ್ತಿದ್ದರು ಹಾಗಾಗಿ ತೇಜಸ್ವಿ ಆರಂಭದಿಂದಲೂ ಗಟ್ಟಿ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್ ಮನೆಯೊಳಗೆ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ನಡುವೆ ಪ್ರೇಮಾಂಕುರವಾಗಿದ್ದು, ಈ ಜೋಡಿ ವೀಕ್ಷಕರ ಮೆಚ್ಚಿನ ಜೋಡಿಯಾಯಿತು ಸಹ. ಇದೂ ಸಹ ತೇಜಸ್ವಿ ಗೆಲುವಿಗೆ ಪ್ರಮುಖ ಕಾರಣವಾಯ್ತು.

ಗೆಲುವಿನ ಬಳಿಕ ಟ್ರೋಫಿ ಹಿಡಿದು ತನ್ನ ತಂದೆ ತಾಯಿಯೊಟ್ಟಿಗೆ ತೆಗೆಸಿಕೊಂಡ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತೇಜಸ್ವಿ ಪ್ರಕಾಶ್, ''ಬಿಗ್‌ಬಾಸ್ ಗೆಲ್ಲಲು ಕಾರಣರಾದ 'ತೇಜಾ ಅಭಿಮಾನಿಗಳು' ಹಾಗೂ ಇತರ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ತಿಂಗಳ ಬಹಳ ಸವಾಲಿನ ಪಯಣದ ಬಳಿಕ ನನ್ನ ಕನಸು ಸಾಕಾರಗೊಂಡಿದೆ. ಬಿಗ್‌ಬಾಸ್ ಟ್ರೋಫಿ ಮನೆಗೆ ಬಂದಿದೆ'' ಎಂದಿದ್ದರು.

More from Filmibeat

English summary
Fire accident in Hindi Bigg Boss season 15 house. No casualties reported. No one is harmed. Fire fighters controled the situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X