Celebs » Sumalatha » Biography
ಜೀವನಚರಿತ್ರೆ

ಭಾರತೀಯ ಖ್ಯಾತ ನಟಿ ಸುಮಲತಾ ಅಂಬರೀಶ್ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಚಿತ್ರಗಳಲ್ಲಿ ನಟಿಸಿರುವ ಇವರು ಜನಿಸಿದ್ದು 27 ಅಗಸ್ಟ್ 1963 ಚನ್ನೈನಲ್ಲಿ. ಇವರು 1979 ರಲ್ಲಿ ಆಂದ್ರಪ್ರದೇಶದಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಸ್ಪರ್ದಿಸಿ ಫ್ರಥಮ ಬಹುಮಾನವನ್ನು ಪಡೆದುಕೊಂಡಿದ್ದರು. ಅಲ್ಲಿಂದ ಇವರು ತಮಿಳು, ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 150 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಹಿಸಿ ತಮ್ಮದೆ ಛಾಪು ಮೂಡಿಸಿದ್ದಾರೆ.

1991 ರಲ್ಲಿ ಕನ್ನಡ ಹೆಸರಾಂತ ನಟ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ವಿವಾಹವಾದ ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸುಮಾಲತಾ ಅಂಬರೀಶ್ ಕನ್ನಡದ ದಿಗ್ಗಜ ನಟರಾದ ದಿವಂಗತ ನಟ ಡಾ. ರಾಜಕುಮಾರ್, ವಿಷ್ಣುವರ್ದನ್ ಸೇರಿದಂತೆ ಹಲವು ಹಿರಿಯ ಮತ್ತು ಕಿರಿಯ ನಟರೊಡನೆ ವಿವಿಧ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

 ಸುಮಲತಾ ಅಂಬರೀಶ್ ಅವರಿಗೆ ಲಭಿಸಿದ ಪ್ರಶಸ್ತಿಗಳು:

* ನಂದಿ ಪ್ರಶಸ್ತಿ - ಅತ್ಯುತ್ತಮ ನಟಿ - ತೆಲುಗು- 1987.

* ಫಿಲ್ಮ್ ಫ್ಯಾನ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ -ತೆಲುಗು- 1987.

* ಕೇರಳ ಫಿಲ್ಮ್ ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ನಟಿ - ಮಲಯಾಳಂ-1987.

* ಲಕ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ -ಮಲಯಾಳಂ- 1987.

* ಫಿಲ್ಮ್ ಫ್ಯಾನ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ- ಹಿಂದಿ- 1987

* ಕೇರಳ ಫಿಲ್ಮ್ ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ನಟಿ- ಮಲಯಾಳಂ-1988