twitter
    Celebs»Sumalatha»Biography

    ಸುಮಲತಾ ಅಂಬರೀಶ್ ಜೀವನಚರಿತ್ರೆ

    ಸುಮಲತಾ ಅಂಬರೀಶ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಪಂಚಭಾಷಾ ನಟಿ. ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್‌ರವರ ಧರ್ಮಪತ್ನಿ ಹಾಗೂ ರಾಜಕಾರಣಿ ಕೂಡ ಹೌದು.  ಸುಮಲತಾ 1963ರ ಆಗಸ್ಟ್ ೨೭ರಂದು ಚೆನ್ನೈನಲ್ಲಿ ಜನಿಸಿದರು. ಆದರೆ, ಅವರು ಬೆಳೆದಿದ್ದೆಲ್ಲಾ ಮುಂಬೈ ಮತ್ತು ಆಂಧ್ರಪ್ರದೇಶದಲ್ಲಿ. ತಮ್ಮ 15ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾದರು. ಕನ್ನಡದಲ್ಲಿ ಡಾ.ರಾಜ್‌ಕುಮಾರ್ ಅಭಿನಯದ `ರವಿಚಂದ್ರ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಆಹುತಿ, ಅವತಾರ ಪುರುಷ, ತಾಯಿ ಕನಸು, ಕರ್ಣ, ಕಥಾನಾಯಕ ಮುಂತಾದ ಚಿತ್ರಗಳಲ್ಲಿ ನಟಿಸಿದರು.

     

    ತಮ್ಮ ನಟನೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಸುಮಲತಾ ಅವರಿಗೆ ಆಹುತಿ ಚಿತ್ರದ ಸಮಯದಲ್ಲಿ ಅಂಬರೀಶ್ ಪರಿಚಯವಾಯಿತು. ನಂತರ ಆ ಸ್ನೇಹ ಪ್ರೀತಿಯಾಗಿ 1991ರ ಡಿಸೆಂಬರ್ ೮ರಂದು ಅಂಬರೀಶ್ ಹಾಗೂ ಸುಮಲತಾ ವಿವಾಹವಾದರು. ಇವರ ಪುತ್ರ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ನಟನಾಗಿ ಸಕ್ರಿಯವಾಗಿದ್ದಾರೆ. ಸುಮಲತಾ ಸುಮಾರು ಆರು ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಬಲ್ಲರು.

     

    ಇವರ ಪತಿ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ 2018ರ ನವೆಂಬರ್ 24ರಂದು ಬೆಂಗಳೂರಿನಲ್ಲಿ ನಿಧನರಾದರು. ನಂತರ ಅಂಬಿ ಅಭಿಮಾನಿಗಳ ಪ್ರೀತಿಯ ಒತ್ತಾಯದ ಮೇರೆಗೆ ಸುಮಲತಾ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಎಂಪಿಯಾದರು. 

     

     

     

    ರೆಬೆಲ್ ಸ್ಟಾರ್ ಅಂಬರೀಶ್     


    ಅಭಿಷೇಕ್ ಅಂಬರೀಶ್


    ಸುಮಲತಾ ಅವರಿಗೆ ಲಭಿಸಿದ ಪ್ರಶಸ್ತಿಗಳು

     

    ನಂದಿ ಪ್ರಶಸ್ತಿ - ಅತ್ಯುತ್ತಮ ನಟಿ - ತೆಲುಗು- 1987.

     

    ಫಿಲ್ಮ್ ಫ್ಯಾನ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ -ತೆಲುಗು- 1987

     

    ಕೇರಳ ಫಿಲ್ಮ್ ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ನಟಿ -

    ಮಲಯಾಳಂ-1987

     

    ಲಕ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ -ಮಲಯಾಳಂ- 1987

     

    ಫಿಲ್ಮ್ ಫ್ಯಾನ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ- ಹಿಂದಿ- 1987

     

    ಕೇರಳ ಫಿಲ್ಮ್ ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ನಟಿ- ಮಲಯಾಳಂ-1988

     

    ದೇವರ್ಸ್ ಅತ್ಯುತ್ತಮ ನಟಿ 1973

     

    ಅತಿ ಸುಂದರಿ ನಟಿ  1980

     

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X