twitter
    Celebs»Gurulinga Swamy»Biography

    ಗುರುಲಿಂಗ ಸ್ವಾಮಿ ಜೀವನಚರಿತ್ರೆ

    ಗುರುಲಿಂಗ ಸ್ವಾಮೀಜಿಯವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಪೀಠಾಧಿಪತಿಗಳು. ಅಣ್ಣ ಬಸವಣ್ಣ ಮತ್ತು ಸಂತ ಶಿಶುನಾಳ ಶರೀಫರ ಅನುಯಾಯಿಗಳು. ಅಥಣಿಯ ಗಚ್ಚಿನಮಠ ಮತ್ತು ಅಗಡಿಯ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನ ಬಸವ ಸ್ವಾಮಿಗಳು ಇವರ ಗುರುಗಳು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು

    ಕೇವಲ ಏಳು ವರ್ಷದ ಬಾಲಕನಾಗಿದ್ದಾಗಲೇ ಗುರುಗಳ ಮಡಿಲಿಗೆ ಬಂದ ಇವರು ನಂತರ ಸುಮಾರು 15-20 ವರ್ಷಗಳ ಕಾಲ ಗುರುವಿನ ಸೇವೆಯಲ್ಲಿರುತ್ತಾರೆ. ನಂತರ ಅಕ್ಕಿ ಮಠದ ಅಧಿಪತ್ಯ ವಹಿಸುತ್ತಾರೆ.

     

    ಸಾಮಾಜಿಕ ಸೇವೆಗಳು-

    * ಅಗಡಿಯಲ್ಲಿನ ಸುಮಾರು 2300 ಮನೆಗಳಿಗೆ ಹೋಗಿ ದುಷ್ಚಟಗಳ ಭಿಕ್ಷೆಯನ್ನು ಬೇಡುತ್ತಾರೆ. ಅಲ್ಲಿ ಇವರಿಗೆ ತಮ್ಮ ದುಷ್ಟ ಚಟವನ್ನು ಇವರಿಗೆ ದಾನವಾಗಿ ನೀಡಿದರೆ, ಮುಂದೆಂದೂ ಅವರು ಆ ಚಟಗಳನ್ನು ಮಾಡುವ ಹಾಗೆ ಇಲ್ಲ. ಇದಕ್ಕೆ ಸಂಸ್ಕಾರ ಶ್ರಾವಣ ಎಂದು ಹೆಸರು. ಈ ಕಾರ್ಯಕ್ರಮದಿಂದ ಸುಮಾರು ಇನ್ನೂರು ಮುನ್ನೂರು ಜನರು ಮದ್ಯಪಾನ ತೊರೆದಿದ್ದುಂಟು.

    * ಶೌಚಾಲಯ ಇಲ್ಲದ ಮನೆಗಳಿಗೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಯವರ ಗಮನಕ್ಕೆ ತಂದು ಶೌಚಾಲಯ ನಿರ್ಮಿಸಲು ನೆರವಾಗುತ್ತಿದ್ದಾರೆ.

    * 2017 ,ಜುಲೈ 9 ರಂದು ಸಾಲು ಮರದ ತಿಮಕ್ಕನವರನ್ನು ಮುಂದಾಳತ್ವದಲ್ಲಿ ಅಕ್ಕಿ ಮಠದ ಕಾರ್ಯಕ್ರಮ ಆಯೋಜಿಸಿ ಎರಡು ನಿಮಿಷದಲ್ಲಿ 12000 ಗಿಡಗಳನ್ನು ನೆಟ್ಟಿದ್ದು ದಾಖಲೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X