Celebs » Prakash Raj » Biography
ಜೀವನಚರಿತ್ರೆ

ಪ್ರಕಾಶ್ ರೈ( ಪ್ರಕಾಶ್ ರಾಜ್) ಜನಿಸಿದ್ದು 26 ಮಾರ್ಚ್ 1965 ಬೆಂಗಳೂರಿನಲ್ಲಿ. ತಂದೆ ಮಂಜುನಾಥ್ ರೈ ತಾಯಿ ಸ್ವರ್ಣಲತಾ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಸೇಂಟ್ ಜೋಸೆಫ್ ಶಾಲೆಯಲ್ಲಿ. ಉನ್ನತ ಶಿಕ್ಷಣವನ್ನು ಸೇಂಟ್ ಜೋಸೆಫ್ ಕಾಲೇಜ್ ನಲ್ಲಿ ಪೂರ್ಣಗೊಳಿಸಿದ್ದಾರೆ.

ಮೊದಲು ಇವರು ಕನ್ನಡದ ದೂರದರ್ಶನ ಚಾನೆಲ್ ನಲ್ಲಿ ಮೂಡಿಬರುತ್ತಿದ್ದ "ಬಿಸಿಲು ಕುದುರೆ" ಎಂಬ ಧಾರಾವಾಹಿಲ್ಲಿ ಕಾಣಿಸಿಕೊಂಡರು. ನಂತರ ಇವರು ಕನ್ನಡ ಸೇರಿದಂತೆ ತುಳು ಧಾರಾವಾಹಿಗಳಲ್ಲೂ ನಟಿ ಸೈ ಎನಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದ ನಿರ್ದೇಶಕ ಕೆ. ಬಾಲಚಂದ್ರ ಇವರನ್ನು ಗುರುತಿಸಿ ಚಿತ್ರರಂಗಕ್ಕೆ ಕರೆತಂದರು.  ನಿರ್ದೇಶಕ ಕೆ. ಬಾಲಚಂದ್ರ ಅವರು ಪ್ರಕಾಶ್ ರಾಜ್ ಇದ್ದ ಹೆಸರನ್ನು ಪ್ರಕಾಶ್ ರೈ ಎಂದು ಬದಲಾಹಿಸಿದರು. ಅಂದಿನಿಂದ ಇವರು ಪ್ರಕಾಶ್ ರೈ ಎಂದೇ ಚಿರಪರಿಚಿತರಾದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೆ ಅನೇಕ ಚಿತ್ರಗಳನ್ನೂ ನಿರ್ದೇಶಿಸಿ ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.  ಹೀಗೆ ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ ಅವರು ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.

ರವಿಚಂದ್ರನ್ ಅವರ ಅಭಿನಯದ ರಾಮಾಚಾರಿ, ರಣಧೀರ, ಲಾಕಪ್ ಡೆತ್, ಸೇರಿದಂತೆ ಇನ್ನು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಗಳಲ್ಲಿ ಇವರ ಡೈಲಾಗ್ ಗಳಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಇವರು ಸಹಾಯ, ನಾಯಕ ಪಾತ್ರಗಳಲ್ಲಿ ನಟಿಸಿ ಜನಮನ್ನಣೆಯನ್ನು ಗಳಿಸಿದ್ದಾರೆ. 

ಹೀಗೆ ಇವರು ಮೂಲತಃ ಕನ್ನಡಿಗರಾಗಿದ್ದರೂ, ಇವರು ತೆಲಗು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದುಕೊಂಡು. ತೆಲುಗುವಿನಲ್ಲಿ ಸ್ಟಾರ್ ಆಗಿ ಮೆರೆದು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada