X
ಶೃತಿ ಪ್ರಕಾಶ್
Actress

ಶೃತಿ ಪ್ರಕಾಶ್ ಜೀವನ ಚರಿತ್ರೆ

ಶೃತಿ ಪ್ರಕಾಶ್ ಕನ್ನಡ ಮತ್ತು ಹಿಂದಿ ಕಿರುತೆರೆಯ ಜನಪ್ರಿಯ ನಟಿ ಹಾಗೂ ಗಾಯಕಿ. ಇವರು 1993 ಮೇ 4ರಂದು ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿದರು.  ಜೈನ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಇವರು, ಮುಂಬೈನ `ಎಜು' ಮೀಡಿಯಾ ಸಂಸ್ಥೆಯಲ್ಲಿ ಕೆಲಕಾಲ ಸಂಪಾದಕರಾಗಿ ಕೆಲಸ ಮಾಡಿದರು. 


ನಂತರ ಹಿಂದಿಯ `ಕ್ಲೋಸ್-ಅಪ್' ವೆಬ್‌ಸಿಂಗರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್‌ವರೆಗೂ ಹೋಗಿದ್ದರು. ವಿ ಚಾನೆಲ್‌ನ `ದಿಲ್ ದೋಸ್ತಿ ಡ್ಯಾನ್ಸ್',`ಇಷ್ಕ್ ಅನಪ್ಲಗಡ್' ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶೃತಿ, 2017ರಲ್ಲಿ ಸ್ಟಾರ್‌ಪ್ಲಸ್‌ನ `ಸಾಥ್ ನಿಭಾನಾ ಸಾಥಿಯಾ' ಟೆಲಿ ಸೀರಿಯಲ್‌ನಲ್ಲಿ ಅಭಿನಯಿಸಿದರು. ಇದು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. 


ಬಿಗ್‌ಬಾಸ್‌: 2017ರಲ್ಲಿ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ ಇವರು ಟಾಪ್ 5 ಸ್ಥಾನ ಪಡೆದಿದ್ದರು.


ಸಿನಿಮಾಗಳು 

ಲಂಡನ್‌ನಲ್ಲಿ ಲಂಬೋದರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಶೃತಿ ಪ್ರಕಾಶ್, ನಂತರ ರಂಗಮಂದಿರ, ಫಿದಾ, ಶ್ರೀ ಭರತ ಬಾಹುಬಲಿ, ಕಸ್ತೂರಿ ಮಹಲ್, ಕಡಲ ತೀರದ ಭಾರ್ಗವ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+