»   » ತೆಲುಗು ನಿರ್ಮಾಪಕರ ಜೊತೆ ಅನುಷ್ಕಾ ಶೆಟ್ಟಿ ಮದುವೆ! ಹೌದೇ.?

ತೆಲುಗು ನಿರ್ಮಾಪಕರ ಜೊತೆ ಅನುಷ್ಕಾ ಶೆಟ್ಟಿ ಮದುವೆ! ಹೌದೇ.?

Posted By:
Subscribe to Filmibeat Kannada

'ಮಂಗಳೂರು ಮಲ್ಲಿಗೆ' ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಟಾಲಿವುಡ್ ಅಂಗಳದಿಂದ ಹೊಸ ಸುದ್ದಿ ಬಂದಿದೆ. ಇಲ್ಲಿಯವರೆಗೂ ಸಿಂಗಲ್ ಆಗಿದ್ದ ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಇದೀಗ ಮಿಂಗಲ್ ಆಗುವುದಕ್ಕೆ ಮನಸ್ಸು ಮಾಡಿದ್ದಾರಂತೆ.

ಇದನ್ನ ನಂಬ್ತೀರೋ, ಅಥವಾ ಜಸ್ಟ್ 'ಗಾಸಿಪ್' ಅಂತ ಮೂಗು ಮುರಿಯುತ್ತೀರೋ...ನಿಮಗೆ ಬಿಟ್ಟಿದ್ದು. ಆದ್ರೆ, ಟಾಲಿವುಡ್ ನಿರ್ಮಾಪಕರೊಬ್ಬರನ್ನ ಕೈಹಿಡಿಯಲು ನಟಿ ಅನುಷ್ಕಾ ಮುಂದಾಗಿರುವ ಬಗ್ಗೆ ಅನೇಕ ಪತ್ರಿಕೆ, ವೆಬ್ ತಾಣಗಳು ವರದಿ ಮಾಡಿರುವುದಂತೂ ದಿಟ.! ಮುಂದೆ ಓದಿ....

ಅನುಷ್ಕಾ ಮದುವೆ ಆಗುವ ಗಂಡು 'ತೆಲುಗು' ನಿರ್ಮಾಪಕ?

ತೆಲುಗು ಚಿತ್ರ ನಿರ್ಮಾಪಕರೊಬ್ಬರನ್ನ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ವಿವಾಹವಾಗುತ್ತಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ, ಈಗಾಗಲೇ ಆ ನಿರ್ಮಾಪಕ ನಿರ್ಮಾಣ ಮಾಡಿರುವ ಅನೇಕ ತೆಲುಗು ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ ಎಂಬ ಕ್ಲೂ ಕೂಡ ಸಿಕ್ಕಿದೆ. [ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ]

ಯಾರಪ್ಪಾ ಆ ನಿರ್ಮಾಪಕ?

ತೆಲುಗು ಚಿತ್ರರಂಗದ 'ದೊಡ್ಡ' ನಿರ್ಮಾಪಕ/ವಿತರಕರೊಬ್ಬರ ಜೊತೆ ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿದೆ. 'ಆ' ನಿರ್ಮಾಪಕ ಯಾರು ಎಂಬ ಪ್ರಶ್ನೆ ಹಲವರು ತಲೆಯಲ್ಲಿ ಕೊರೆಯುತ್ತಿದೆ.

'ಆ' ನಿರ್ಮಾಪಕನಿಗೆ ಈಗಾಗಲೇ ಮದುವೆ ಆಗಿದೆ.!

ಸುದ್ದಿ ಇಷ್ಟೇ ಆಗಿದ್ರೆ ಪರ್ವಾಗಿಲ್ಲ, ಅನುಷ್ಕಾ ಶೆಟ್ಟಿ ಮನಗೆದ್ದಿರುವ 'ಆ' ನಿರ್ಮಾಪಕರಿಗೆ ಈಗಾಗಲೇ ಮದುವೆ ಆಗಿದೆ ಎಂಬ ಶಾಕಿಂಗ್ ಅಂಶ ಕೂಡ ಬಯಲಾಗಿದೆ.

ಎರಡನೇ ಮದುವೆ ಆಗ್ತಾರಾ ಅನುಷ್ಕಾ?

ಬಣ್ಣದ ಲೋಕದಲ್ಲಿ ತಾರೆಯರ ಮದುವೆ, ವಿಚ್ಛೇದನ, ಎರಡನೇ ಮದುವೆ...ಇವೆಲ್ಲಾ ಕಾಮನ್. ಇದೇ ಹಾದಿಯಲ್ಲಿ ನಟಿ ಅನುಷ್ಕಾ ಶೆಟ್ಟಿ ಕೂಡ ಸಾಗುತ್ತಾರಾ ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

ಇದು 'ಗಾಸಿಪ್' ಆಗಿದ್ರೆ?

ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರವಾಗಿ ಹಬ್ಬಿರುವ ಸುದ್ದಿ ಇದೇ ಮೊದಲು ಅಲ್ಲ. ನಟ ನಾಗ್ ಚೈತನ್ಯ ಜೊತೆ ಅನುಷ್ಕಾ ಶೆಟ್ಟಿ ಮದುವೆ ಇನ್ನೇನು ನಡೆದೇಹೋಯ್ತು ಎಂಬ ಲೆವೆಲ್ ಗೆ ಈ ಹಿಂದೆ ಸುದ್ದಿ ಆಗಿತ್ತು. ಆದ್ರೆ, ವಾಸ್ತವ ನಿಮ್ಗೆ ಗೊತ್ತಿದೆ.

'ಕನ್ನಡ'ದ ಹುಡುಗ ಕೂಡ ಸೌಂಡ್ ಮಾಡಿದ್ದ

ಬೆಂಗಳೂರಿನಲ್ಲೇ ನೆಲಸಿರುವ ಪ್ರಖ್ಯಾತ 'ಕನ್ನಡ' ಉದ್ಯಮಿ ಜೊತೆಗೆ ಅನುಷ್ಕಾ ಶೆಟ್ಟಿ ಹೊಸ ಜೀವನ ಆರಂಭಿಸಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿತ್ತು. ಆದ್ರೆ ಅದು ಕೂಡ ನಿಜ ಆಗ್ಲಿಲ್ಲ. [ಕನ್ನಡದ ಕುವರನೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆ?]

ನಿಜ ಆಗಿದ್ರೆ...

ಈಗ ತೆಲುಗು ನಿರ್ಮಾಪಕರ ಜೊತೆ ಅನುಷ್ಕಾ ಹೆಸರು ಅಂಟಿಕೊಂಡಿದೆ. ಇದು ನಿಜವೋ, ಸುಳ್ಳೋ ಅಂತ ಸ್ವತಃ ಅನುಷ್ಕಾ ಬಾಯ್ಬಿಟ್ಟು ಹೇಳ್ಬೇಕು. ಒಂದ್ವೇಳೆ ನಿಜ ಆಗಿದ್ರೆ, ಶುಭಾಶಯ ತಿಳಿಸೋಣ.

English summary
According to the Grapevine, Tollywood Actress Anushka Shetty is all set to marry Tollywood Producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada