For Quick Alerts
  ALLOW NOTIFICATIONS  
  For Daily Alerts

  ಎಷ್ಟು ಮದುವೆ ಪ್ರಪೋಸಲ್ ಗಳನ್ನ ಪ್ರಭಾಸ್ ರಿಜೆಕ್ಟ್ ಮಾಡಿರಬಹುದು ಹೇಳಿ ನೋಡೋಣ..

  By Harshitha
  |

  ಹೆಚ್ಚು ಅಂದ್ರೆ ಒಬ್ಬರು ಎಷ್ಟು ಮದುವೆ ಪ್ರಸ್ತಾಪಗಳನ್ನ ರಿಜೆಕ್ಟ್ ಮಾಡಬಹುದು.? ಅಬ್ಬಬ್ಬಾ ಅಂದ್ರೆ.... 10.? 20.? ಹೆಚ್ಚು ಅಂದ್ರೆ 100.? ಇದಕ್ಕೂ ಮೇಲೆ ಅದರೆ ಸಂಬಂಧ ಕುದುರುವುದೇ ಡೌಟು ಬಿಡಿ ಅಂತ ನಾವೆಲ್ಲ ಅಂದುಕೊಳ್ಳಬಹುದು.

  ಆದ್ರೆ, ಟಾಲಿವುಡ್ ನ 'ಸೂಪರ್ ಹೀರೋ' ಪ್ರಭಾಸ್ ರಿಜೆಕ್ಟ್ ಮಾಡಿರುವ ಮದುವೆ ಪ್ರಸ್ತಾಪ ಎಷ್ಟು ಅಂತ ಕೇಳಿದ್ರೆ, ನೀವು ಖಂಡಿತ ಕಣ್ಣರಳಿಸದೇ ಇರುವುದಿಲ್ಲ.!

  ಪ್ರಭಾಸ್ ರಿಜೆಕ್ಟ್ ಲಿಸ್ಟ್

  ಪ್ರಭಾಸ್ ರಿಜೆಕ್ಟ್ ಲಿಸ್ಟ್

  ವರದಿಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ತೆಲುಗು ನಟ ಪ್ರಭಾಸ್ ಬರೋಬ್ಬರಿ 6000 ಮದುವೆ ಪ್ರಸ್ತಾಪಗಳನ್ನ ರಿಜೆಕ್ಟ್ ಮಾಡಿದ್ದಾರಂತೆ.! ['ರಾಜಮೌಳಿ'ಯಿಂದ ಪ್ರಭಾಸ್ ಗೆ ಸಿಕ್ತು ಊಹಿಸಲಾಗದ ಉಡುಗೊರೆ!]

  ಎಲ್ಲದಕ್ಕೂ ಕಾರಣ 'ಬಾಹುಬಲಿ'

  ಎಲ್ಲದಕ್ಕೂ ಕಾರಣ 'ಬಾಹುಬಲಿ'

  ಅಷ್ಟಕ್ಕೂ, ಇಷ್ಟೊಂದು ಸಂಬಂಧಗಳು ಹುಡುಕಿಕೊಂಡು ಬಂದರೂ... ಯಾವುದಕ್ಕೂ ಪ್ರಭಾಸ್ 'ಓಕೆ' ಎನ್ನದಿರಲು ಕಾರಣ 'ಬಾಹುಬಲಿ' ಸಿನಿಮಾ. [ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ]

  'ಬಾಹುಬಲಿ'ಯಾಗಿ ತಲ್ಲೀನ

  'ಬಾಹುಬಲಿ'ಯಾಗಿ ತಲ್ಲೀನ

  'ಬಾಹುಬಲಿ' ಪಾತ್ರಕ್ಕೋಸ್ಕರ ನಾಲ್ಕು ವರ್ಷಗಳ ಕಾಲ ನಟ ಪ್ರಭಾಸ್ ಹಗಲಿರುಳು ಜಿಮ್ ನಲ್ಲಿ ಬೆವರಿಳಿಸಿದ್ದಾರೆ. 'ಅಜಾನುಬಾಹು' ಪಾತ್ರ ನಿರ್ವಹಿಸಲು ನಾಲ್ಕು ವರ್ಷಗಳಲ್ಲಿ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಳ್ಳದೇ ತಮ್ಮ ಬದ್ಧತೆಯನ್ನ ಪ್ರದರ್ಶಿಸಿದ್ದಾರೆ ನಟ ಪ್ರಭಾಸ್. ['ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!]

  ಮದುವೆ ಕೂಡ ರಿಜೆಕ್ಟ್

  ಮದುವೆ ಕೂಡ ರಿಜೆಕ್ಟ್

  'ಬಾಹುಬಲಿ'ಯಾಗಿ ಮುಳುಗಿ ಹೋಗಿದ್ದ ಪ್ರಭಾಸ್, ಸಾಲು ಸಾಲಾಗಿ ಬಂದ 6000 ಮದುವೆ ಪ್ರಸ್ತಾಪಗಳನ್ನೂ ತಿರಸ್ಕರಿಸಿದ್ದಾರಂತೆ. ಅಲ್ಲದೇ, ಮದುವೆ ಆಗುವ ಯೋಜನೆಯನ್ನೇ ಮುಂದೂಡಿದ್ದಾರಂತೆ ಪ್ರಭಾಸ್.

  ಪ್ರಭಾಸ್ ಗೆ ಫಿದಾ

  ಪ್ರಭಾಸ್ ಗೆ ಫಿದಾ

  'ಬಾಹುಬಲಿ - ದಿ ಬಿಗಿನ್ನಿಂಗ್' ಹಾಗೂ 'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರಗಳಲ್ಲಿ ಪ್ರಭಾಸ್ ನಟನೆಗೆ ಕ್ಲೀನ್ ಬೌಲ್ಡ್ ಆಗಿರುವ ಹರೆಯದ ಹುಡುಗಿಯರ ಸಂಖ್ಯೆ ಲೆಕ್ಕವೇ ಇಲ್ಲ. ಅಂದ್ಮೇಲೆ 6000 ಸಂಖ್ಯೆ ಯಾವ ಮಹಾ ದೊಡ್ಡದು.!?

  English summary
  According to the Grapevine, 'Baahubali' Actor Prabhas has rejected 6000 marriage proposals.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X