»   » 'ಬಾಹುಬಲಿ' ಜೋಡಿಯ ರಿಯಲ್ ಪ್ರೇಮ್ ಕಹಾನಿಗೆ ಸಾಕ್ಷಿ ಸಿಕ್ಕಿದೆ.!

'ಬಾಹುಬಲಿ' ಜೋಡಿಯ ರಿಯಲ್ ಪ್ರೇಮ್ ಕಹಾನಿಗೆ ಸಾಕ್ಷಿ ಸಿಕ್ಕಿದೆ.!

Posted By: Naveen
Subscribe to Filmibeat Kannada

'ಬಾಹುಬಲಿ-2' ಸಿನಿಮಾ ನೋಡಿದವರಿಗೆ ತುಂಬ ಇಷ್ಟವಾದ ಅಂಶಗಳಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯ ಮೋಡಿ ಕೂಡ ಒಂದು. ಸಿನಿಮಾ ನೋಡಿದ ಅನೇಕ ಮಂದಿ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾದರೆ ಎಷ್ಟು ಚೆನ್ನ ಎಂದು ಭಾವಿಸಿರುವುದು ಸತ್ಯ.

ಪ್ರಭಾಸ್ ಮತ್ತು ಅನುಷ್ಕಾ.. ಇಬ್ಬರೂ 'ರೀಲ್' ಮೇಲೆ ಮಾತ್ರ ಅಲ್ಲ ರಿಯಲ್ಲಾಗೂ 'ಲವ್ವರ್ಸ್' ಎಂಬ ಗಾಸಿಪ್ ಸದ್ಯ ತೆಲುಗು ಸಿನಿ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ, ಅಂತಹ ಗಾಸಿಪ್ ನಿಜ ಇರಬಹುದು ಎನ್ನುವ ಹಾಗೆ ಮಾಡಿರುವುದು ಪ್ರಭಾಸ್ ಮತ್ತು ಅನುಷ್ಕಾ ನಡುವಿನ ಆತ್ಮೀಯತೆ.

'ಬಾಹುಬಲಿ-2' ಬಳಿಕ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಈಗ ಅನುಷ್ಕಾಗೆ ಪ್ರಭಾಸ್ ಮನಸೋತ್ತಿದ್ದಾರೆ ಎನ್ನುವ ಖಾಸ್ ಖಬರ್ ಟಾಲಿವುಡ್ ನಿಂದ ಬಂದಿದೆ. ಮುಂದೆ ಓದಿ...

ಏನಿದು ಪ್ರೇಮ್ ಕಹಾನಿ.?

'ಬಾಹುಬಲಿ' ಚಿತ್ರದ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಈಗ ರಿಯಲ್ ಆಗಿ ಲವ್ ಮಾಡುತ್ತಿದ್ದಾರಂತೆ. ಈ ರೀತಿಯ ಸುದ್ದಿ ಈಗ ಟಾಲಿವುಡ್ ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಸುದ್ದಿಗೋಷ್ಠಿಗಳಲ್ಲಿ ಕಳ್ಳ ನೋಟ

'ಬಾಹುಬಲಿ-2' ಚಿತ್ರದ ಅನೇಕ ಸುದ್ದಿಗೋಷ್ಠಿಗಳ ಸಮಯದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಒಬ್ಬರನ್ನೊಬ್ಬರು ಕಳ್ಳ ನೋಟದಲ್ಲಿ ನೋಡುವ ದೃಶ್ಯ ಎಷ್ಟೋ ಬಾರಿ ಫೋಟೋಗಳಲ್ಲಿ ಸೆರೆಯಾಗಿದೆ.

ಪ್ರೀತಿ ಇದ್ಯಾ?

ಪ್ರಭಾಸ್ ಅನುಷ್ಕಾರನ್ನ...ಅನುಷ್ಕಾ ಪ್ರಭಾಸ್ ರನ್ನ... ನೋಡುವ ಈ ಪೋಟೋಗಳು ಇಬ್ಬರ ಮಧ್ಯೆ ಪ್ರೀತಿ ಇದ್ದರೂ ಇರಬಹುದೇನೋ ಎನ್ನುವ ಅನುಮಾನವನ್ನ ಸೃಷ್ಟಿ ಮಾಡುತ್ತಿವೆ.

ಅನುಷ್ಕಾ ಬಿಚ್ಚು ನುಡಿ

ಒಮ್ಮೆ ರಾಣಾ ಮತ್ತು ಪ್ರಭಾಸ್ ರಲ್ಲಿ ಯಾರು ನಿಮಗೆ ಇಷ್ಟ ಎಂಬ ಪ್ರಶ್ನೆ ಅನುಷ್ಕಾಗೆ ಬಂದಿತ್ತು. ಆಗ ಅನುಷ್ಕಾ ಪ್ರಭಾಸ್ ನನಗೆ ಇಷ್ಟ ಅಂತ ಹೇಳಿದ್ದರು.

ಆತ್ಮೀಯತೆ ಹೆಚ್ಚು

ಪ್ರಭಾಸ್ ಮತ್ತು ಅನುಷ್ಕಾ ನಡುವೆ ಇರುವ ಆತ್ಮೀಯತೆ ಕಳೆದ ಕೆಲ ದಿನಗಳಿಂದ ಹೆಚ್ಚಾಗಿದೆಯಂತೆ. 'ಬಾಹುಬಲಿ' ಸಿನಿಮಾದ ಶೂಟಿಂಗ್ ವೇಳೆಯಲ್ಲಿ ವರ್ಷಗಳ ಕಾಲ ಇಬ್ಬರೂ ಜೊತೆಗೆ ಸಮಯ ಕಳೆದಿದ್ದು, ಇದಕ್ಕೆ ಒಂದು ಕಾರಣ ಇರಬಹುದು.

ತೆರೆ ಮೇಲೆ ಮ್ಯಾಜಿಕ್

ಪ್ರಭಾಸ್ ಮತ್ತು ಅನುಷ್ಕಾ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದು, ಆ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ.

'ಸಾಹೋ' ಚಿತ್ರದಲ್ಲಿ ಸ್ವೀಟಿ

ಪ್ರಭಾಸ್ ನಟನೆಯ ಮುಂದಿನ ಸಿನಿಮಾ 'ಸಾಹೋ' ದಲ್ಲಿ ಕೂಡ ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಅಭಿನಯಿಸಲಿದ್ದಾರಂತೆ.

ಸೂಪರ್ ಜೋಡಿ

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಸಿನಿಮಾದಲ್ಲೇ ಅಷ್ಟೊಂದು ಮುದ್ದಾಗಿ ಕಾಣುತ್ತಾರೆ. ಇನ್ನು ಇವರಿಬ್ಬರು ರಿಯಲ್ ಆಗಿ ಒಂದಾದರೆ ಸೂಪರ್ ಜೋಡಿಯಾಗುವುದರಲ್ಲಿ ಡೌಟೇ ಇಲ್ಲ ಎಂಬುದು ಅಭಿಮಾನಿಗಳ ಮಾತು.

English summary
Rumours About Anushka Shetty and Prabhas in Love.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada