ಕನ್ನಡದ 'ಕುರುಕ್ಷೇತ್ರ'ದ ಬಗ್ಗೆ ಬಾಲಿವುಡ್ ನಿಂದ ಬಂದ ಹೊಸ ಸುದ್ದಿ!
ಶಾಸಕ ಮುನಿರತ್ನ 'ಕುರುಕ್ಷೇತ್ರ' ಎಂಬ ಹೆಸರಿನಲ್ಲಿ ಸಿನಿಮಾ ಮಾಡ್ತೀನಿ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರು ಅಭಿನಯಿಸ್ತಾರೆ ಅಂತ ಯಾವಾಗ ಹೇಳಿದ್ರೋ, ಆಗಿಂದನೂ ಈ ಚಿತ್ರದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
'ಕುರುಕ್ಷೇತ್ರ'ದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಾನೆ ಇದೆ. ಬರಿ ಕನ್ನಡದ ನಟರು ಮಾತ್ರ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದಿದ್ದ ಚಿತ್ರತಂಡ, ಈಗ ಪರಭಾಷಾ ನಟರಿಗೆ ಗಾಳ ಹಾಕ್ತಿದೆ ಎಂಬ ವಿಚಾರಗಳು ಕೂಡ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.[ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]
ಹೀಗಿರುವಾಗ, ಬಾಲಿವುಡ್ ನಿಂದ 'ಕುರುಕ್ಷೇತ್ರ'ದ ಬಗ್ಗೆ ಒಂದು ತಾಜಾ ಸುದ್ದಿ ಬಂದಿದೆ. ಮುಂದೆ ಓದಿ...

'ಕುರುಕ್ಷೇತ್ರ'ದಲ್ಲಿ ವಿವೇಕ್ ಒಬೆರಾಯ್!
ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರಲಿರುವ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.['ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್]

ಯಾವ ಪಾತ್ರಕ್ಕೆ!
ಈಗಾಗಲೇ ಚಿತ್ರತಂಡ ವಿವೇಕ್ ಒಬೆರಾಯ್ ಅವರನ್ನ ಸಂಪರ್ಕ ಮಾಡಲಾಗಿದ್ದು, ಕೃಷ್ಣನ ಪಾತ್ರಕ್ಕಾಗಿ ಅಪ್ರೋಚ್ ಮಾಡಲಾಗಿದೆಯಂತೆ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

ರವಿಚಂದ್ರನ್ ಅಂತಿಮ!
ಮತ್ತೊಂದೆಡೆ ಚಿತ್ರದ ನಿರ್ದೇಶಕ ನಾಗಣ್ಣ ಅವರ ಹೇಳಿರುವ ಪ್ರಕಾರ ಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂತಿಮವಾಗಿದ್ದರಂತೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

ದರ್ಶನ್ ದುರ್ಯೋಧನ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ದುರ್ಯೋಧನ' ಪಾತ್ರವನ್ನ ಮಾಡುತ್ತಿದ್ದಾರೆ ಎನ್ನುವುದು ಬಿಟ್ಟರೇ, ಮತ್ಯಾವ ಪಾತ್ರಗಳು ಅಧಿಕೃತವಾಗಿಲ್ಲ. ಆದ್ರೆ, ಮೂಲಗಳ ಪ್ರಕಾರ, ಉಳಿದ ಪಾತ್ರಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಪರಭಾಷೆ ನಟರನ್ನ ಕೂಡ ಸಂಪರ್ಕ ಮಾಡುತ್ತಿದೆಯಂತೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣ!
'ಸಂಗೊಳ್ಳಿ ರಾಯಣ್ಣ' ಖ್ಯಾತಿಯ ನಾಗಣ್ಣ 'ಕುರುಕ್ಷೇತ್ರ'ವನ್ನ ನಿರ್ದೇಶನ ಮಾಡಲಿದ್ದಾರಂತೆ. ಶಾಸಕ ಮುನಿರತ್ನ ಅವರು ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಜುಲೈ 23 ರಂದು ಸೆಟ್ಟೇರಲಿದೆಯಂತೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]


Click it and Unblock the Notifications











