»   » 'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್

'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್

Posted By:
Subscribe to Filmibeat Kannada

ಶಾಸಕ ಹಾಗೂ ನಿರ್ಮಾಪಕ ಮುನಿರತ್ನ 'ಕುರುಕ್ಷೇತ್ರ' ಚಿತ್ರವನ್ನ ಘೋಷಣೆ ಮಾಡಿದ್ದೇ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಂದು ಹಾಟ್ ನ್ಯೂಸ್ ಹರಿದಾಡುತ್ತಲೇ ಇದೆ.

ಧರ್ಮರಾಯ ಪಾತ್ರವನ್ನ ಇವರು ಮಾಡ್ತಿದ್ದಾರಂತೆ? ಕೃಷ್ಣ ಪಾತ್ರದಲ್ಲಿ ಈ ನಟ ಕಾಣಿಸಿಕೊಳ್ಳುತ್ತಿದ್ದಾರಂತೆ? ದ್ರೌಪದಿ ಪಾತ್ರಕ್ಕೆ ಆ ನಟಿ ಬರ್ತಾರಂತೆ? ಹಾಗೆ, ಹೀಗೆ ಎಂಬ ಸುದ್ದಿಗಳು ಚಿತ್ರಪ್ರೇಮಿಗಳ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

ಅದೇ ರೀತಿ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಅವರ ಬಗ್ಗೆ ಕೂಡ ಒಂದು ಸುದ್ದಿ ಹರಿದಾಡುತ್ತಿತ್ತು. 'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ ಕೂಡ ಇದ್ದಾರೆ. ಅವರು ಪ್ರಮುಖ ಪಾತ್ರವನ್ನ ಮಾಡ್ತಿದ್ದಾರೆ ಅಂತ.....ಇದೀಗ, ಈ ಸುದ್ದಿಗೆ ಸ್ವತಃ ಜಗ್ಗೇಶ್ ಅವರೇ ಸ್ವಷ್ಟನೆ ನೀಡಿದ್ದಾರೆ.

'ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ'!

ಮೂಲಗಳ ಪ್ರಕಾರ ನವರಸ ನಾಯಕ ಜಗ್ಗೇಶ್ ಅವರು 'ಕುರುಕ್ಷೇತ್ರ'ದಲ್ಲಿ 'ಶಕುನಿ' ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಅನುಮಾನವನ್ನ ಜಗ್ಗೇಶ್ ಅವರೇ ಬಗೆಹರಿಸಿದ್ದಾರೆ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ ]

'ಶಕುನಿ' ಪಾತ್ರ ನನಗೆ ಇಷ್ಟವಿಲ್ಲ!

ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!ಈ ವದಂತಿಗೆ ತೆರೆ ಎಳೆದ ಜಗ್ಗೇಶ್, ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಶಕುನಿ ಪಾತ್ರವನ್ನ ಮಾಡುವಷ್ಟು ಅದ್ಭುತ ಕಲಾವಿದ ನಾನಲ್ಲ, ಮತ್ತು ಶಕುನಿ ಪಾತ್ರ ಮಾಡಲು ನನಗೆ ಇಷ್ಟವೂ ಇಲ್ಲ ಎಂದು ನೇರವಾಗಿ ರಿಜೆಕ್ಟ್ ಮಾಡಿದ್ದಾರೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

ಇದು ಪಬ್ಲಿಸಿಟಿ ಪ್ಲಾನ್ ಅಷ್ಟೇ!

ಇಂತಹ ಚಿತ್ರಗಳು ಸುಮ್ಮನೆ ದೊಡ್ಡ ನಟರ ಹೆಸರುಗಳನ್ನ ಬಳಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತೆ. ಹಾಗಾಗಿ ನನ್ನ ಹೆಸರು ತೇಲಿ ಬಂದಿರಬಹುದು ಅಷ್ಟೇ. ಅನೇಕ ಹಿರಿಯ ಕಲಾವಿದರು ಇದ್ದಾರೆ. ಅವರನ್ನ ಬಳಸಿಕೊಳ್ಳಿ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.[ಕುರುಕ್ಷೇತ್ರಕ್ಕೆ 'ದ್ರೌಪದಿ' ಫಿಕ್ಸ್! ಕನ್ನಡದ ನಟಿಯೇ 'ಪಾಂಚಾಲಿ'?]

'ಕುರುಕ್ಷೇತ್ರ'ದಲ್ಲಿ ಇರಲ್ಲ ಜಗ್ಗೇಶ್

ಈ ಮೂಲಕ 'ಕುರುಕ್ಷೇತ್ರ' ಚಿತ್ರದ ಪಟ್ಟಿಯಲ್ಲಿರುವ ನಾಯಕ ನಟರ ಪೈಕಿ, ಜಗ್ಗೇಶ್ ಅವರಿಲ್ಲ ಎಂದು ಸ್ವತಃ ಜಗ್ಗೇಶ್ ಅವರೇ ಬಹಿರಂಗ ಪಡಿಸಿದ್ದಾರೆ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.! ]

ದರ್ಶನ್ 'ದುರ್ಯೋಧನ'

ಮುನಿರತ್ನ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಟ ದರ್ಶನ್ ದುರ್ಯೊಧನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಉಳಿದಂತೆ ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಅಂಬರೀಶ್, ಉಪೇಂದ್ರ, ಯಶ್, ರವಿಚಂದ್ರನ್ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

English summary
Kannada Actor Jaggesh Gives Clarity About Upcoming Movie 'Kurukshetra'. Source Said Jaggesh Will Playing Shakuni Role in Darshan Kurukshetra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada