»   » 'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!

'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!

Posted By:
Subscribe to Filmibeat Kannada

ಭಾರತ ಚಿತ್ರರಂಗದಲ್ಲಿ 'ಬಾಹುಬಲಿ' ಚಿತ್ರದ್ದೇ ಅಬ್ಬರ. ಆದ್ರೆ, ಸ್ಯಾಂಡಲ್ ವುಡ್ ನಲ್ಲಿ ಮಾತ್ರ 'ಕುರುಕ್ಷೇತ್ರ' ಚಿತ್ರದ್ದೇ ಬಿಸಿಬಿಸಿ ಚರ್ಚೆ. ಯಾಕಂದ್ರೆ, ಇದು ಕನ್ನಡದ ಮಟ್ಟಿಗೆ ಅತಿ ದೊಡ್ಡ ಚಿತ್ರವಾಗಲಿದೆ. ಮತ್ತು ಕನ್ನಡದ ದೊಡ್ಡ ಸ್ಟಾರ್ ನಟರೆಲ್ಲಾ ಒಟ್ಟಾಗಿ ಕಾಣಿಸಿಕೊಳ್ಳಲಿರುವ ಮಹಾಚಿತ್ರ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರದಲ್ಲಿ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ದುರ್ಯೋಧನ ಪಾತ್ರಕ್ಕಾಗಿ ದರ್ಶನ್ ಅವರ ಫೋಟೋಶೂಟ್ ಕೂಡ ಮುಗಿದಿದೆಯಂತೆ. ದರ್ಶನ್ ಬಿಟ್ಟರೇ ಮತ್ಯಾರು ಈ ಚಿತ್ರದಲ್ಲಿ ಅಂತಿಮವಾಗಿಲ್ಲ. ಹೀಗಿರುವಾಗ, ಕ್ರೇಜಿಸ್ಟಾರ್ ರವಿಚಂದ್ರನ್ ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಹಾಗಾದ್ರೆ, ರವಿಚಂದ್ರನ್ 'ಕುರುಕ್ಷೇತ್ರ'ಕ್ಕಾಗಿ ಸಿದ್ದವಾಗಿದ್ದಾರ! ಒಂದು ಪಕ್ಷ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದ್ರೂ ಕ್ರೇಜಿ ಸ್ಟಾರ್ ಪಾತ್ರವೇನು? ಮುಂದೆ ಓದಿ.....

'ಕುರುಕ್ಷೇತ್ರ'ದಲ್ಲಿ ರವಿಚಂದ್ರನ್!

'ಕುರುಕ್ಷೇತ್ರ' ಚಿತ್ರದಲ್ಲಿ ಕ್ರೇಜಿಸ್ಟಾರ್ ಅಭಿನಯಿಸುತ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಗಿರಗಿಟ್ಲೆ ಹೊಡಿತಿದೆ. ಹೀಗಾಗಿ, 'ಕುರುಕ್ಷೇತ್ರ'ದಲ್ಲಿ ರವಿಚಂದ್ರನ್ ಯಾವ ಪಾತ್ರಕ್ಕೆ ಆಯ್ಕೆ ಆಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

ಪಾಂಡವ ಅಥವಾ ಕೌರವ!

'ಕುರುಕ್ಷೇತ್ರ' ಅಂದ್ಮೇಲೆ ಅಲ್ಲಿ ಪಾಂಡವರು-ಕೌರವರು, ಶ್ರೀಕೃಷ್ಣ, ಕರ್ಣ, ಭೀಷ್ಮ, ದ್ರೋಣಚಾರ್ಯ ಸೇರಿದಂತೆ ಹಲವು ಪಾತ್ರಗಳು ಮೂಡಿ ಬರಲಿದೆ. ಅವುಗಳಲ್ಲಿ ರವಿಚಂದ್ರನ್ ಅವರಿಗೆ ಯಾವ ಪಾತ್ರ ಹೋಲುತ್ತೆ? ಎಂಬುದು ಅಭಿಮಾನಿಗಳಿಗೆ ಕುತೂಹಲ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ ]

ಧರ್ಮರಾಯ ಆಗ್ತಾರ ಕ್ರೇಜಿಸ್ಟಾರ್!

ಮೂಲಗಳ ಪ್ರಕಾರ ರವಿಚಂದ್ರನ್ ಅವರನ್ನ ಧರ್ಮರಾಯನ ಪಾತ್ರಕ್ಕಾಗಿ ಕರೆತರುವ ಚಿಂತನೆಯಲ್ಲಿದೆ ಚಿತ್ರತಂಡ. ಧರ್ಮ ಸ್ಥಾಪನೆಯಲ್ಲಿ ಧರ್ಮರಾಯನದು ಪ್ರಮುಖ ಪಾತ್ರ. ಅಷ್ಟೇ ಅಲ್ಲದೇ, ಅರ್ಜುನ, ಭೀಮ, ನಕುಲ, ಸಹದೇವರನ್ನ ನಿಯಂತ್ರಿಸುವ ಪಾತ್ರ ಕೂಡ ಅದು. ಹಾಗಾಗಿ, ಈ ಪಾತ್ರಕ್ಕೆ ದೊಡ್ಡ ಕಲಾವಿದ ಬೇಕು ಎನ್ನುವುದು ಚಿತ್ರತಂಡದ ಆಸೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಉಳಿದವರ ಕಥೆ ಏನು?

ಉಳಿದಂತೆ 'ಕುರುಕ್ಷೇತ್ರ' ಚಿತ್ರದಲ್ಲಿ ಅಂಬರೀಶ್, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಹಾಗೂ ಉಪೇಂದ್ರ ಸೇರಿದಂತೆ ಇನ್ನು ಹಲವು ಬಿಗ್ ಸ್ಟಾರ್ ನಟರು ಅಭಿನಯಿಸುವ ಸಾಧ್ಯತೆಯಿದೆಯಂತೆ. ಈ ನಟರೊಂದಿಗೆ ಇನ್ನು ಮಾತುಕತೆ ನಡೆಯುತ್ತಿದ್ದು, ಅಂತಿಮವಾಗಬೇಕಿದೆ.[ಕುರುಕ್ಷೇತ್ರಕ್ಕೆ 'ದ್ರೌಪದಿ' ಫಿಕ್ಸ್! ಕನ್ನಡದ ನಟಿಯೇ 'ಪಾಂಚಾಲಿ'?]

ಯಾವಾಗ ಕುರುಕ್ಷೇತ್ರ!

ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ 'ಕುರುಕ್ಷೇತ್ರ' ಜುಲೈ ತಿಂಗಳಲ್ಲಿ ಸೆಟ್ಟೇರಲಿದೆಯಂತೆ. ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರಕ್ಕೆ ಚಾಲನೆ ಸಿಗಲಿದ್ದು, ಮುಂದಿನ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆಯಂತೆ ಚಿತ್ರತಂಡ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!]

English summary
According to Source Crazy Star Ravichandran Will Play Prominent Role In Kannada Movie Kurukshethara. The Movie Directed By Naganna and Produced by Munirathna. Darshan Playing Duryodhana in The Movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada