For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!

  By Bharath Kumar
  |

  ಕನ್ನಡದ 'ಕುರುಕ್ಷೇತ್ರ'ದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50ನೇ ಚಿತ್ರ ಇದಾಗಿದ್ದು, ಈಗಾಗಲೇ ಇಂಡಸ್ಟ್ರಿಯಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ.

  ಸ್ಯಾಂಡಲ್ ವುಡ್ ನ ಸ್ಟಾರ್ ನಟರೆಲ್ಲಾ ಒಟ್ಟಾಗಿ ಅಭಿನಯಿಸಲಿದ್ದಾರೆ ಎಂಬ ಕಾರಣಕ್ಕೆ 'ಕುರುಕ್ಷೇತ್ರ' ಇನ್ನಿಲ್ಲದ ನಿರೀಕ್ಷೆ ಮೂಡಿಸಿದೆ. ಆದ್ರೆ, ದರ್ಶನ್ ಒಬ್ಬರನ್ನ ಬಿಟ್ಟರೇ, ಮತ್ಯಾವ ನಟರಿಂದಲೂ ಒಪ್ಪಿಗೆ ಸಿಕ್ಕಿಲ್ಲ ಎನ್ನುವುದು ಗಮನಿಸಬೇಕು. ಈ ಮಧ್ಯೆ, 'ಬಾಹುಬಲಿ' ಚಿತ್ರದಲ್ಲಿ ಅಭಿನಯಸಿದ್ದ ರಾಣಾ ದಗ್ಗುಬಾಟಿ ಭೀಮನ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಯೂ ಕೂಡ ಕೇಳಿ ಬಂದಿದೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

  ಈ ಎಲ್ಲ ಅಂತೆ-ಕಂತೆಗಳ ನಡುವೆ ಶ್ರೀಕೃಷ್ಣ ಪಾತ್ರ ಸೇಲ್ ಆಗಿದ್ದು, ಶ್ರೀ ಕೃಷ್ಣನ ಅವತಾರಕ್ಕೆ ಕನ್ನಡದ ಸ್ಟಾರ್ ನಟರೊಬ್ಬರು ಬುಕ್ ಆಗಿದ್ದಾರಂತೆ. ಯಾರದು? ಮುಂದೆ ಓದಿ....

  ಕ್ರೇಜಿಸ್ಟಾರ್ ಈಗ 'ಶ್ರೀಕೃಷ್ಣ'

  ಕ್ರೇಜಿಸ್ಟಾರ್ ಈಗ 'ಶ್ರೀಕೃಷ್ಣ'

  ದರ್ಶನ್ 'ಕುರುಕ್ಷೇತ್ರ'ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಯಾವ ಪಾತ್ರದಲ್ಲಿ ಎನ್ನುವುದು ಮಾತ್ರ ನಿಗೂಢವಾಗಿತ್ತು. ಆದ್ರೀಗ, ರವಿಚಂದ್ರನ್ ಅವರ ಪಾತ್ರ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಶ್ರೀಕೃಷ್ಣನ ಪಾತ್ರದಲ್ಲಿ ರವಿಚಂದ್ರನ್ ಬಣ್ಣ ಹಚ್ಚಲಿದ್ದಾರಂತೆ.

  ದರ್ಶನ್-ರವಿಮಾಮನ ಜುಗಲ್ ಬಂದಿ

  ದರ್ಶನ್-ರವಿಮಾಮನ ಜುಗಲ್ ಬಂದಿ

  ಒಂದು ಕಡೆ ದರ್ಶನ್ ದುರ್ಯೋಧನನಾದ್ರೆ, ಮತ್ತೊಂದೆಡೆ ರವಿಚಂದ್ರನ್ ಶ್ರೀಕೃಷ್ಣ. ಪಾಂಡವರ ಪರವಾಗಿ ನಿಲ್ಲುವ ಶ್ರೀ ಕೃಷ್ಣ, ದುರ್ಯೋಧನನ ವಿರೋಧಿ ಕೂಡ ಹೌದು. ಹೀಗಾಗಿ, ಇವರಿಬ್ಬರ ಜುಗಲ್ ಬಂದಿ ನೋಡಲು ಬಹಳ ಸುಂದರವಾಗಿರುವುದರಲ್ಲಿ ಯಾವುದೇ ಅನುಮಾನ ಬೇಡ.

  ಮೊದಲ ಬಾರಿಗೆ ಕ್ರೇಜಿಸ್ಟಾರ್-ಚಾಲೆಂಜಿಂಗ್ ಸ್ಟಾರ್

  ಮೊದಲ ಬಾರಿಗೆ ಕ್ರೇಜಿಸ್ಟಾರ್-ಚಾಲೆಂಜಿಂಗ್ ಸ್ಟಾರ್

  ಇದುವರೆಗೂ ರವಿಚಂದ್ರನ್ ಹಾಗೂ ದರ್ಶನ್ ಯಾವ ಚಿತ್ರದಲ್ಲು ಒಟ್ಟಿಗೆ ಅಭಿನಯಿಸಿಲ್ಲ. ದರ್ಶನ್ ಅಭಿನಯದ 'ಅಯ್ಯ' ಚಿತ್ರಕ್ಕೆ ಕ್ರೇಜಿಸ್ಟಾರ್ ಸಂಗೀತ ನೀಡಿದ್ದಾರೆ. ಇನ್ನು ದರ್ಶನ್ ಅವರ ಹಲವು ಪ್ರಾಜೆಕ್ಟ್ ಗಳಿಗೆ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ ಅಷ್ಟೇ. ಈಗ ಇಬ್ಬರು ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

  ರವಿಚಂದ್ರನ್ ಕಡೆಯಿಂದ ಗ್ರೀನ್ ಸಿಗ್ನಲ್!

  ರವಿಚಂದ್ರನ್ ಕಡೆಯಿಂದ ಗ್ರೀನ್ ಸಿಗ್ನಲ್!

  ಶ್ರೀ ಕೃಷ್ಣನ ಪಾತ್ರವನ್ನ ರವಿಚಂದ್ರನ್ ಕೂಡ ಒಪ್ಪಿಕೊಂಡಿದ್ದರಂತೆ. ಹಾಗೇ ಪಾತ್ರಕ್ಕಾಗಿ ಟ್ರಯಲ್ ಫೋಟೋಶೂಟ್ ಕೂಡ ಮಾಡಲಾಗಿದ್ದು, ಪಾತ್ರಕ್ಕಾಗಿ ಸಿದ್ದವಾಗಲು ಸಮಯ ಕೇಳಿದ್ದಾರಂತೆ.

  'ಕುರುಕ್ಷೇತ್ರ'ದ ಸೂತ್ರಧಾರ

  'ಕುರುಕ್ಷೇತ್ರ'ದ ಸೂತ್ರಧಾರ

  ಧರ್ಮ ಸಂಸ್ಥಾಪನೆಗಾಗಿ 'ಕುರುಕ್ಷೇತ್ರ' ಯುದ್ಧ ಮಾಡಿಸಿದ್ದೇ ಶ್ರೀ ಕೃಷ್ಣ ಎಂಬುದು ಇತಿಹಾಸ. ಇಂತಹ ಮುಖ್ಯವಾದ ಪಾತ್ರವನ್ನ ರವಿಚಂದ್ರನ್ ನಿರ್ವಹಿಸಲಿದ್ದಾರಂತೆ.

  ಉಳಿದವರ ಕಥೆ ಏನು?

  ಉಳಿದವರ ಕಥೆ ಏನು?

  ಇದೆಲ್ಲಾ ಓಕೆ, ಉಳಿದವರು ಕಥೆ ಏನು ಎಂಬುದು ಇನ್ನು ಗೊತ್ತಿಲ್ಲ. ನಿರ್ಮಾಪಕ ಮುನಿರತ್ನ ಅವರ ಆಸೆಯಂತೆ ಸುದೀಪ್, ಪುನೀತ್, ಉಪೇಂದ್ರ, ಯಶ್, ಶಿವರಾಜ್ ಕುಮಾರ್ ಎಲ್ಲರೂ ಈ ಚಿತ್ರದಲ್ಲಿ ಅಭಿನಯಿಸುತ್ತಾರ! ಕಾದು ನೋಡಬೇಕು.

  English summary
  According to Source Crezy Star Ravichandran will be Playing ‘Krishna’ in Kurukshetra, his first ever. Darshan plays Duryodhana and film produced by Munirathna and directed by Naganna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X