»   » 'ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ

'ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾದ ಬಗ್ಗೆ ನಿರ್ದೇಶಕ ನಾಗಣ್ಣ ಇದುವರೆಗೂ ಮಾತನಾಡಿರಲಿಲ್ಲ. ಚಿತ್ರದ ಬಹುಪಾಲು ಎಲ್ಲ ವಿಷಯಗಳನ್ನು ರಹಸ್ಯವಾಗಿ ಇಟ್ಟಿದ್ದ ನಾಗಣ್ಣ ಈಗ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. 'ಕುರುಕ್ಷೇತ್ರ'ದ ಬಗ್ಗೆ ಇರುವ ಅನೇಕ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ.

'ಕುರುಕ್ಷೇತ್ರ' ಸ್ಯಾಂಡಲ್ ವುಡ್ ನ ಮಹಾತ್ವಕಾಂಕ್ಷಿಯ ಸಿನಿಮಾ. ಈಗಾಗಲೇ ಈ ಚಿತ್ರ ಹಲವು ವಿಷಯಗಳಿಗೆ ದೊಡ್ಡ ಮಟ್ಟದ ಸದ್ದು ಮಾಡಿದೆ. ಇಷ್ಟು ದಿನ ಆ ನಟರು ಬರ್ತಾರೆ, ಈ ನಟರು ಬರ್ತಾರೆ ಎನ್ನಲಾಗುತ್ತಿತ್ತು. ಆದ್ರೆ, ಯಾವೆಲ್ಲ ನಟರು 'ಕುರುಕ್ಷೇತ್ರ'ಕ್ಕೆ ಈಗಾಗಲೇ ಬಂದಿದ್ದಾರೆ ಎಂಬುದನ್ನ ನಿರ್ದೇಶಕ ನಾಗಣ್ಣ ರಿವಿಲ್ ಮಾಡಿದ್ದಾರೆ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

ಅಷ್ಟೇ ಅಲ್ಲ, ಕುರುಕ್ಷೇತ್ರದ ಮೇಕಿಂಗ್ ಬಗ್ಗೆ ಕೂಡ ಹಲವು ವಿಚಾರಗಳನ್ನು ನಾಗಣ್ಣ ಬಯಲು ಮಾಡಿದ್ದಾರೆ. ಮುಂದೆ ಓದಿ....

ನಾಲ್ಕು ನಟರು ಫೈನಲ್

'ಕುರುಕ್ಷೇತ್ರ' ಸಿನಿಮಾದಲ್ಲಿ ನಟ ದರ್ಶನ್, ಅಂಬರೀಷ್, ರವಿಚಂದ್ರನ್ ಮತ್ತು ಸಾಯಿ ಕುಮಾರ್ ನಟಿಸುವುದು ಪಕ್ಕಾ ಆಗಿದೆ. ಹಿರಿಯ ನಟ ಶ್ರೀನಿವಾಸ ಮೂರ್ತಿ ಸಹ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.[ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಯಾರು ಯಾವ ಪಾತ್ರ

ಸಿನಿಮಾದಲ್ಲಿ ದರ್ಶನ್ ದುರ್ಯೋಧನ ನಾಗಿ, ಅಂಬರೀಶ್ ಭೀಷ್ಮರಾಗಿ, ರವಿಚಂದ್ರನ್ ಶ್ರೀ ಕೃಷ್ಣನಾಗಿ ನಟಿಸಲಿದ್ದು, ಇವರ ಪಾತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಂತೆ.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

ಉಳಿದ ನಟರ ಜೊತೆ ಮಾತುಕತೆ

ಈ ನಾಲ್ಕು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಫೈನಲ್ ಆಗಿದೆ. ಇನ್ನುಳಿದ ಪಾತ್ರಗಳಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಬೇಕಾಗಿದ್ದು, ಆ ನಟರ ಜೊತೆ ಮಾತುಕತೆ ಸದ್ಯ ನಡೆಯುತ್ತಿದೆ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!]

ಹರಿಕೃಷ್ಣ ಸಂಗೀತ

'ಕುರುಕ್ಷೇತ್ರ' ಸಿನಿಮಾಗೆ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಈಗಾಗಲೇ ರಿ-ರೆಕಾರ್ಡಿಂಗ್ ಕೆಲಸ ಶುರುವಾಗಿದೆ. ಅಂದಹಾಗೆ, ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆಯಂತೆ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!]

ಕಥೆ, ಚಿತ್ರಕಥೆ, ಸಂಭಾಷಣೆ

ಜಿ.ಕೆ ಭಾರವಿ 'ಕುರುಕ್ಷೇತ್ರ' ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. 'ಶ್ರೀ ಮಂಜುನಾಥ' ಸೇರಿದಂತೆ ತೆಲುಗಿನ ಅನೇಕ ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದರು.

ಹೈದರಾಬಾದ್ ನಲ್ಲಿ ಚಿತ್ರೀಕರಣ

ಹೈದರಾಬಾದ್ ನಲ್ಲಿ ದೊಡ್ಡ ಸೆಟ್ ಹಾಕಿ 'ಕುರುಕ್ಷೇತ್ರ' ಸಿನಿಮಾವನ್ನು ಚಿತ್ರೀಕರಿಸುವುದಕ್ಕೆ ಪ್ಲಾನ್ ಮಾಡಿದ್ದಾರೆ ನಿರ್ದೇಶಕರು.

ಕ್ಯಾಮರಾ

ಶ್ಯಾಮ್ ಕೆ. ನಾಯ್ಡು ಅವರ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಈ ಹಿಂದೆ ಮಹೇಶ್ ಬಾಬು ಅವರ ಅನೇಕ ಸಿನಿಮಾಗಳಿಗೆ ಇವರು ಸಿನಿಮಾಟೋಗ್ರಾಫರ್ ಆಗಿದ್ದರು.

ಗ್ರಾಫಿಕ್ಸ್

ಐತಿಹಾಸಿಕ ಸಿನಿಮಾ ಆಗಿರುವ 'ಕುರುಕ್ಷೇತ್ರ' ಚಿತ್ರದ ಮೇಕಿಂಗ್ ನಲ್ಲಿ ಹೆಚ್ಚಿನ ಗ್ರಾಫಿಕ್ಸ್ ಬಳಕೆ ಮಾಡಲು ನಿರ್ದೇಶಕ ನಾಗಣ್ಣ ನಿರ್ಧರಿಸಿದ್ದಾರೆ.

ಜುಲೈ 27ಕ್ಕೆ ಶೂಟಿಂಗ್

'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಜುಲೈ 27 ರಿಂದ ಮಾಡಲು ನಿರ್ಮಾಪಕ ಮುನಿರತ್ನ ಪ್ಲಾನ್ ಮಾಡಿದ್ದಾರೆ. ಅಂದುಕೊಂಡಂತೆ ಎಲ್ಲ ಆದರೆ ಅಂದಿನಿಂದ ಸ್ಯಾಂಡಲ್ ವುಡ್ ನ ಮಹಾ ಸಿನಿಮಾ 'ಕುರುಕ್ಷೇತ್ರ' ಶುರು ಆಗಲಿದೆ.

English summary
Director Naganna speaks about 'kurukshetra' kannada Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada