For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲೇ ಇದು ಬಿಗ್ ನ್ಯೂಸ್

  By Bk
  |

  ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಅಂದ್ರೆ, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಅಂತಹ ನಟರು ಮೊದಲ ಸಾಲಿನಲ್ಲಿ ಬರ್ತಾರೆ.

  ಆದ್ರೆ, ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುತ್ತಿರುವ ನಟ ಯಾರು ಎಂದು ನೋಡಿದ್ರೆ ನೀವೆಲ್ಲಾ ಶಾಕ್ ಆಗ್ತೀರಾ. ಹೌದು, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಿಗಿಂತ ಈ ನಟ ಅತಿ ಹೆಚ್ಚು ಸೇವಾ ತೆರಿಗೆ ಕಟ್ಟುತ್ತಿದ್ದಾರಂತೆ.

  ಒಂದಲ್ಲ, ಎರಡಲ್ಲ, ಸುಮಾರು ನಾಲ್ಕು ವರ್ಷದಿಂದಲೂ ಈ ಒಬ್ಬ ನಟ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ, ಯಾರದು ಮುಂದೆ ಓದಿ.....

  ಶ್ರೀಮಂತ ನಟ ಗಣೇಶ್

  ಶ್ರೀಮಂತ ನಟ ಗಣೇಶ್

  ಮೂಲಗಳ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ನಟ ಎಂದು ಹೇಳಲಾಗ್ತಿದೆ. ಕಳೆದ ನಾಲ್ಕು ವರ್ಷದಿಂದಲೂ ಗಣೇಶ್ ಅವರು ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

  'ಪಟಾಕಿ' ಸಕ್ಸಸ್

  'ಪಟಾಕಿ' ಸಕ್ಸಸ್

  ಸದ್ಯ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಸಾಯಿಕುಮಾರ್, ರನ್ಯಾ ಗಣೇಶ್ ಗೆ ಸಾಥ್ ನೀಡಿದ್ದರು.[ವಿಮರ್ಶೆ: ಗಣೇಶ 'ಪಟಾಕಿ'ಯಲ್ಲಿ ನಗುವಿನ ಸದ್ದೇ ಹೆಚ್ಚು]

  ಭಟ್ಟರ 'ಮುಗುಳುನಗೆ'

  ಭಟ್ಟರ 'ಮುಗುಳುನಗೆ'

  ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮುಗುಳುನಗೆ' ಚಿತ್ರದಲ್ಲಿ ಗಣೇಶ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸಯ್ಯದ್ ಸಲಾಂ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಿಖಿತಾ ನಾರಯಣ್, ಆಶಿಕಾ, ಅಪೂರ್ವ, ಅಮೂಲ್ಯ, ನಾಯಕಿಯರಾಗಿದ್ದಾರೆ.[ನಾಲ್ಕು ಹುಡುಗಿಯರ ಜೊತೆ 'ಮುಗುಳು ನಗೆ' ಬೀರಿದ ಗಣಪ]

  'ಚಮಕ್' ಗಣಿ

  'ಚಮಕ್' ಗಣಿ

  ಮತ್ತೊಂದೆಡೆ ಸಿಂಪಲ್ ಸುನಿ ಸಾರಥ್ಯದಲ್ಲಿ ತಯಾರಾಗುತ್ತಿರುವ 'ಚಮಕ್' ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ ಗಣೇಶ್ ಗೆ ನಾಯಕಿಯಾಗಿದ್ದಾರೆ.[ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್]

  ನಿರ್ಮಾಪಕ ಗಣೇಶ್

  ನಿರ್ಮಾಪಕ ಗಣೇಶ್

  ಗಣೇಶ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. 'ಗೋಲ್ಡನ್ ಮೂವೀಸ್' ಎಂಬ ನಿರ್ಮಾಣ ಸಂಸ್ಥೆಯನ್ನ ಕೂಡ ಸ್ಥಾಪಿಸಿಕೊಂಡಿದ್ದಾರೆ.

  ಸೂಪರ್ ಮಿನಿಟ್

  ಸೂಪರ್ ಮಿನಿಟ್

  ಕೇವಲ ಸಿನಿಮಾ ಮಾತ್ರವಲ್ಲ, ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಮಿನಿಟ್' ಕಾರ್ಯಕ್ರಮವನ್ನ ಕೂಡ ಕಳೆದ ಮೂರು ಸೀಸನ್ ಗಳಿಂದ ಯಶಸ್ವಿಯಾಗಿ ನಿರೂಪಣೆ ಮಾಡುತ್ತಿದ್ದಾರೆ.['ಸೂಪರ್ ಮಿನಿಟ್'ನಲ್ಲಿ ವೀಕ್ಷಕರಿಗೆ ಸರ್ಪ್ರೈಸ್ ನೀಡಿದ ಗಣೇಶ್: ಏನದು?]

  English summary
  According to Auditing and tax sources say that Actor Ganesh is the highest tax paying Kannada actor for the last 4-5 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X