»   » ನಾಲ್ಕು ಹುಡುಗಿಯರ ಜೊತೆ 'ಮುಗುಳು ನಗೆ' ಬೀರಿದ ಗಣಪ

ನಾಲ್ಕು ಹುಡುಗಿಯರ ಜೊತೆ 'ಮುಗುಳು ನಗೆ' ಬೀರಿದ ಗಣಪ

Posted By: Naveen
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಈಗ 'ಮುಗುಳು ನಗೆ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಇದು ಯೋಗರಾಜ್ ಭಟ್ ಮತ್ತು ಗಣಿ ಕಾಂಬಿನೇಷನ್ ನ ಹ್ಯಾಟ್ರಿಕ್ ಸಿನಿಮಾ. ಹೀಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ತುಸು ಹೆಚ್ಚು. ಇಲ್ಲಿಯವರೆಗೂ ಸೈಲೆಂಟ್ ಆಗಿ ಸಿನಿಮಾದ ಶೂಟಿಂಗ್ ಮಾಡಿದ್ದ, ಭಟ್ರು ಈಗ ಸಿನಿಮಾದ ಪೋಸ್ಟರ್ ಗಳನ್ನ ರಿಲೀಸ್ ಮಾಡಿದ್ದಾರೆ.[ಮತ್ತೆ ಹಾರಲಿದೆ 'ಗಾಳಿಪಟ': ಭಟ್ಟರ ಅಡ್ಡಾಗೆ ಬಂದ ಮತ್ತೊಬ್ಬ ಸ್ಟಾರ್ ನಟ!]

ಗಣೇಶ್ ಈ ಸಿನಿಮಾದಲ್ಲಿ ಶ್ರೀ ಕೃಷ್ಣ ಆಗಿಬಿಟ್ಟಿದ್ದಾರೆ. ಯಾಕಂದ್ರೆ, ಇಲ್ಲಿ ಗಣೇಶ್ ಗೆ ಒಂದಲ್ಲ, ಎರಡಲ್ಲ... ಬರೋಬ್ಬರಿ ನಾಲ್ಕು ನಟಿಯರಿದ್ದಾರೆ. ಆ ನಾಲ್ಕು ಹುಡುಗಿಯರ ಜೊತೆ ಗಣಿ 'ಮುಗುಳು ನಗೆ' ಬೀರಿದ್ದಾರೆ. ಸದ್ಯ ಸಿನಿಮಾದ ಕೆಲ ಕೂಲ್ ಪೋಸ್ಟರ್ ಗಳು ರಿಲೀಸ್ ಆಗಿದ್ದು, ನಾಲ್ಕು ನಾಯಕಿರ ಲುಕ್ ರಿವೀಲ್ ಆಗಿದೆ. [ಗಣೇಶ್ 'ಪಟಾಕಿ' ಬಿಡುಗಡೆಗೆ ರೆಡಿ: ತೆರೆಮೇಲೆ ಯಾವಾಗ?]

'ಮುಗುಳು ನಗೆ'ಯ ಹೊಸ ಹೊಸ ಪೋಸ್ಟರ್ ಗಳ ಜೊತೆಗೆ ಹೀರೋಯಿನ್ ಗಳ ಕುರಿತು ಡೀಟೇಲ್ಸ್ ಇಲ್ಲಿದೆ ಓದಿ...

ಕ್ರೇಜಿ‍ ಹುಡುಗಿ 'ಆಶಿಕಾ'

'ಆಶಿಕಾ' ಎನ್ನುವ ಸಿಂಪಲ್ ಸುಂದರಿ 'ಮುಗುಳು ನಗೆ' ಸಿನಿಮಾದ ನಾಯಕಿಯರಲ್ಲಿ ಒಬ್ಬರು. ಈ ಹಿಂದೆ 'ಕ್ರೇಜಿ ಬಾಯ್' ಎನ್ನುವ ಸಿನಿಮಾ ಮಾಡಿದ್ದ ಆಶಿಕಾಗೆ ಇದು ಎರಡನೇ ಸಿನಿಮಾ. ಸದ್ಯ ಪೋಸ್ಟರ್ ನಲ್ಲಿ ಆಶಿಕಾ ಲುಕ್ ಹೊರಬಿದ್ದಿದೆ. ಗಣೇಶ್ ಆಶಿಕಾ ಜೋಡಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದೆ.

ನಿಕಿತಾ ನಾರಾಯಣ್

'ಮಡಮಕ್ಕಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಿಕಿತಾ ನಾರಾಯಣ್, ಗಣೇಶ್ ಜೊತೆ ಕಾಣಿಸಿಕೊಳ್ತಿರುವ ಮತ್ತೊಬ್ಬ ನಾಯಕಿ. ನಿಕಿತಾ ಲುಕ್ ಸಿನಿಮಾದಲ್ಲಿ ಹೇಗಿರುತ್ತೆ ಎನ್ನುವ ಝಲಕ್ ಬಿಡುಗಡೆ ಆಗಿದೆ. ಗಣೇಶ್-ನಿಕಿತಾ ಜೋಡಿ ತುಂಬ ಫ್ರೆಶ್ ಆಗಿದೆ.

ಹಾರಿಬಂದ 'ಅಪೂರ್ವ'

'ಸಿದ್ಧಾರ್ಥ' ಸಿನಿಮಾದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ಅಪೂರ್ವ ಅರೋರಾ ಈಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ತನ್ನ ಸಹಜ ಸೌಂದರ್ಯದ ಮೂಲಕ ಕಣ್ಣು ಕುಕ್ಕುವ ಈ ಕುವರಿ ಇಲ್ಲಿಯೂ ಮೋಡಿ ಮಾಡುವುದರಲ್ಲಿ ಡೌಟೇ ಇಲ್ಲ ಬಿಡಿ.

'ಗೋಲ್ಡನ್' ಪೇರ್..

'ಅಮೂಲ್ಯ' ಸದ್ಯ ತಮ್ಮ ಮದುವೆ ಕೆಲಸಗಳಲ್ಲಿ ಬಿಜಿ ಇರುವುದರಿಂದ, 'ಮುಗುಳು ನಗೆ' ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಮಾತಿತ್ತು. ಅದ್ರೇ ಸಿನಿಮಾದ ಒಂದು ಚಿಕ್ಕ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಡೇಟ್ಸ್ ಪ್ರಾಬ್ಲಂ ನಿಂದ ಅವರ ಪಾತ್ರವನ್ನ ಸ್ವಲ್ಪ ಬದಲಿಸಲಾಗಿದೆ.[ಅಜಯ್ ರಾವ್ ಗೆ 'ಅಮೂಲ್ಯ-ಜಗದೀಶ್' ಮದುವೆ ಕರೆಯೋಲೆ]

ಮತ್ತೆ ನಡೆಯುತ್ತಾ ಮ್ಯಾಜಿಕ್.?

'ಯೋಗರಾಜ್ ಭಟ್' ಮತ್ತು 'ಗಣೇಶ್' ಕಾಂಬಿನೇಷನ್ ಇದ್ರೆ ಸಿನಿಮಾ ಹಿಟ್ ಎಂಬ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. 'ಗಾಳಿಪಟ' ಸಿನಿಮಾದ ಬಳಿಕ ಮತ್ತೆ ಒಂದಾಗಿರುವ ಈ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆ. ಅಲ್ಲದೇ ಇಬ್ಬರಿಗೂ ಸಹ ಈ ಸಿನಿಮಾದ ಗೆಲುವು ಬಹಳ ಮುಖ್ಯವಾಗಿದೆ.

ರಿಲೀಸ್ ಯಾವಾಗ..?

'ಮುಗುಳು ನಗೆ' ಸಿನಿಮಾದ ಕೊನೆ ಹಂತದ ಚಿತ್ರೀಕರಣ ಸ್ವಲ್ಪ ಮಟ್ಟಿಗೆ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಎಲ್ಲ ಮುಗಿಸಿ ಬರೋದ್ರೊಳಗೆ ಜೂನ್ ತಿಂಗಳ ಕೊನೆಯಾಗಬಹುದು.[ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!]

English summary
Kannada Actress Amulya, Apoorva Arora, Ashika and Nikitha Narayan plays lead role with Ganesh in 'Mugulunage' movie. Take a look at the pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada