»   » 'ಸೂಪರ್ ಮಿನಿಟ್'ನಲ್ಲಿ ವೀಕ್ಷಕರಿಗೆ ಸರ್ಪ್ರೈಸ್ ನೀಡಿದ ಗಣೇಶ್: ಏನದು?

'ಸೂಪರ್ ಮಿನಿಟ್'ನಲ್ಲಿ ವೀಕ್ಷಕರಿಗೆ ಸರ್ಪ್ರೈಸ್ ನೀಡಿದ ಗಣೇಶ್: ಏನದು?

Posted By:
Subscribe to Filmibeat Kannada

ಸದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ 'ಚಮಕ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಮಿನಿಟ್' ಗೇಮ್ ಶೋ ನಡೆಸಿಕೊಡುತ್ತಿದ್ದಾರೆ.['ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ನಡೆಯುತ್ತಿರುವುದು ಈ ಪುಟಾಣಿಗಾಗಿ.!]

ಕಳೆದ ಎರಡು ದಿನಗಳಿಂದ ನಟಿ ಅಮೂಲ್ಯ ಮತ್ತು ಜಗದೀಶ್ ಮದುವೆ ಬಿಜಿಯಲ್ಲಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಮಿನಿಟ್' ಶೋ ಮೂಲಕ ವೀಕ್ಷಕರಿಗೆ ಒಂದು ಸರ್ಪ್ರೈಸ್ ನೀಡಿದ್ದಾರೆ. ಏನದು?...

'ಸೂಪರ್ ಮಿನಿಟ್'ನಲ್ಲಿ 'ಪಟಾಕಿ' ಆಡಿಯೋ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿನಯದ ಕಾಮಿಡಿ ಎಂಟರ್ ಟೈನರ್ 'ಪಟಾಕಿ' ಚಿತ್ರದ ಆಡಿಯೋವನ್ನು 'ಸೂಪರ್ ಮಿನಿಟ್' ಸ್ಕಾಲರ್ ಶಿಪ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ.[ಟ್ರೈಲರ್: ಖಾಕಿ ಖದರ್ ನಲ್ಲಿ ಗಣೇಶ್ ಹೊಡೆದ 'ಪಟಾಕಿ']

ಆಡಿಯೋ ರಿಲೀಸ್ ಮಾಡಿದ ಅತಿಥಿಗಳು ಯಾರು?

ಡಿಫರೆಂಟ್ ಆಗಿ ವಿಶೇಷ ಅತಿಥಿಗಳು 'ಸೂಪರ್ ಮಿನಿಟ್' ಸ್ಕಾಲರ್ ಶಿಪ್ ಗೇಮ್ ಶೋ ಸ್ಪರ್ಧಿಗಳಾದ ಮಕ್ಕಳಿಂದ 'ಪಟಾಕಿ' ಚಿತ್ರದ ಆಡಿಯೋ ಬಿಡುಗಡೆ ಮಾಡಿಸಲಾಗಿದೆ.

ನಿರ್ದೇಶಕ, ನಿರ್ಮಾಪಕರು ಭಾಗಿ

ಕಲರ್ಸ್ ಕನ್ನಡ ವಾಹಿನಿಯ 'ಸೂಪರ್ ಮಿನಿಟ್' ಕಾರ್ಯಕ್ರಮದಲ್ಲಿ 'ಪಟಾಕಿ' ಚಿತ್ರದ ಆಡಿಯೋ ಬಿಡುಗಡೆಗಾಗಿ ಚಿತ್ರದ ನಿರ್ಮಾಪಕರಾದ ಎಸ್.ವಿ ಬಾಬು, ನಿರ್ದೇಶಕ ಮಂಜು ಸ್ವರಾಜ್ ಮತ್ತು ಝೇಂಕಾರ್ ಆಡಿಯೋ ಕಂಪನಿ ಮಾಲೀಕರಾದ ಭರತ್ ಜೈನ್ ರವರು ಆಗಮಿಸಿದ್ದರು.

ವಿಡಿಯೋ ಹಾಡನ್ನು ನೋಡಿ

'ಪಟಾಕಿ' ಚಿತ್ರದ ಆಡಿಯೋ ಬಿಡುಗಡೆ ಆಗಿರುವ 'ಸೂಪರ್ ಮಿನಿಟ್' ಸ್ಕಾಲರ್ ಶಿಪ್ ಕಾರ್ಯಕ್ರಮದ ಎಪಿಸೋಡ್ ಇಂದು(ಮೇ 13) ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೊತೆಗೆ 'ಐ ಆಮ್ ದಿ ಮ್ಯಾನ್ ಗೋಲ್ಡನ್ ಸ್ಟಾರ್ ಫ್ಯಾನ್' ವಿಡಿಯೋ ಹಾಡನ್ನು ಪ್ಲೇ ಮಾಡಲಾಗುತ್ತದೆ. ಮಿಸ್ ಮಾಡದೇ ನೋಡಿ.

ಚಿತ್ರ ಬಿಡುಗಡೆ ಯಾವಾಗ?

ಗೋಲ್ಡನ್ ಸ್ಟಾರ್ ಗಣೇಶ್ ಗೆ ರನ್ಯ ರಾವ್ ಜೊತೆಯಾಗಿರುವ 'ಪಟಾಕಿ' ಚಿತ್ರ ಮೇ 26 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

English summary
Golden Star Ganesh Starrer Kannada Movie 'Pataki' Audio Released in Super Minute 3. 'Pataki' movie directed by Manju Swaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada