Kannada»Movies»99»Story

  99 ಕಥೆ

  99 ಚಿತ್ರವೂ 2018 ರಲ್ಲಿ ತೆರೆಕಂಡ ರೋಮಾಂಟಿಕ್ ತಮಿಳು ಚಿತ್ರ 96ದ ರಿಮೇಕ್ ಚಿತ್ರವಾಗಿದ್ದೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಂ ಗುಬ್ಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರೆ, ರಾಮು ಬಂಡವಾಳ ಹೂಡಿದ್ದಾರೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈಗಾಗಲೇ ಸೂಕ್ಷಪ್ರೇಮಿಯಾಗಿ ಹಲವು ಚಿತ್ರಗಳಲ್ಲಿ ಪ್ರೇಕ್ಷಕರ ಮನಗೆದ್ದಿರುವ ಗಣೇಶ್ ಈ ಚಿತ್ರದಲ್ಲೂ ತಮ್ಮ ಚಾರ್ಮ್ ಮುಂದುವರೆಸಲಿದ್ದಾರೆ. ಗಣೇಶ್ ಮತ್ತು ಭಾವನಾರ ಬಾಲ್ಯದ ಪಾತ್ರಗಳಲ್ಲಿ ಯುವಪ್ರತಿಭೆಗಳಾದ ಹೇಮಂತ್ ಮತ್ತು ಸಮೀಕ್ಷಾ ನಟಿಸಲಿದ್ದಾರೆ.
  ಚಿತ್ರಕಥೆ
  99 ಚಿತ್ರ ಒಬ್ಬ ಛಾಯಾಗ್ರಾಹಕನ ಜೀವನದ ಪಯಣವನ್ನು ವಿವರಿಸುತ್ತದೆ.ಹಲವು ವರ್ಷಗಳ ನಂತರ ಅವನು ತನ್ನ ಹುಟ್ಟೂರಿಗೆ ಮರಳಿದಾಗ ಅವನಲ್ಲಿ ಏಳುವ ಭಾವಗಳನ್ನು ಚಿತ್ರ ವಿವರಿಸುತ್ತದೆ. ತಾನು ಬಾಲ್ಯದಲ್ಲಿ ಕಲಿತ ಶಾಲೆ, ಶಾಲೆಯಲ್ಲಿ ಕಳೆದ ಹಲವು ನೆನಪುಗಳ ಬುತ್ತಿಯಲ್ಲಿ ನಾಯಕ ತೇಲುತ್ತಾನೆ.
  ಹಲವು ಘಟನಗಳ ನಂತರ ಎಲ್ಲರೂ ಒಂದು ಪುನರ್ಮಿಲನದ ಸಭೆ ಸೇರಲು ನಿರ್ಧರಿಸುತ್ತಾರೆ. ಈ ಪಾರ್ಟಿಯಲ್ಲಿ ನಾಯಕನ ಶಾಲಾದಿನಗಳ ಮೊದಲ ಪ್ರೇಮಪಾತ್ರಳಾದ ನಾಯಕಿಯೂ ಸೇರುತ್ತಾಳೆ. 20 ವರ್ಷಗಳ ನಂತರ ಮತ್ತೇ ಪುನಃ ಭೇಟಿಯಾಗುವ ಸಂದರ್ಭ ಮತ್ತು ಆ ಭೇಟಿಯ ರೋಮಾಂಚನವನ್ನು ಚಿತ್ರ ವಿವರಿಸುತ್ತದೆ.
   
  99 ಚಿತ್ರದ ಮೊದಲ ಹಾಡು `ಹೀಗೆ ದೂರ' ಮಾರ್ಚ್ 5,2019ರಂದು ಬಿಡುಗಡೆಯಾಯಿತು. ಈ ಹಾಡಿಗೆ ಕವಿರಾಜ್ ಸಾಹಿತ್ಯ ಒದಗಿಸಿದ್ದರೆ, ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ.
  **Note:Hey! Would you like to share the story of the movie 99 with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X