twitter

    ಆದಿಲಕ್ಷ್ಮಿ ಪುರಾಣ ಕಥೆ

    ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಕಾಂಬಿನೇಶನ್ ನಲ್ಲಿ ತೆರೆಗೆ ಬರಲಿರುವ ರೋಮಾಂಟಿಕ್ ಕಾಮಿಡಿ ಚಿತ್ರ ಆದಿ ಲಕ್ಷ್ಮಿ ಪುರಾಣ ಚಿತ್ರವನ್ನು ರಾಕಲೈನ್ ವೆಂಕಟೆಶ್ ನಿರ್ಮಿಸಿದ್ದಾರೆ. ವಿ. ಪ್ರಿಯಾ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಸಂಗೀತ ನೀಡಿದ್ದಾರೆ. ಚಿತ್ರ 2019 ಜುಲೈ 19 ರಂದು ತೆರೆಕಾಣಲಿದೆ.

    ಆದಿ ಒಬ್ಬ ಅಂಡರ್ ಕವರ್ ಪೊಲೀಸ್... ಲಕ್ಷ್ಮಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ.. ಇವರಿಬ್ಬರ ಲವ್ ಸ್ಟೋರಿಯೇ 'ಆದಿ ಲಕ್ಷ್ಮಿ ಪುರಾಣ'. ಬಾಯಿ ಬಿಟ್ಟರೆ ಸುಳ್ಳು ಹೇಳುವ ಲಕ್ಷ್ಮಿ ಹಾಗೂ ಸುಳ್ಳಿನ ವಾಸನೆ ಕಂಡರೂ ಆಗದೆ ಇರುವ ಆದಿ, ಇವರಿಬ್ಬರು ಸೇರಿದರೆ ಏನೆಲ್ಲ ಆಗುತ್ತದೆ ಎನ್ನುವುದನ್ನು ಹಾಸ್ಯದ ಜೊತೆಗೆ ಹೇಳುವ ಸಿನಿಮಾ ಇದಾಗಿದೆ.

    ರೌಡಿಯನ್ನು ಹಿಡಿಯುವ ಭರದಲ್ಲಿ ಲಕ್ಷ್ಮಿಗೆ (ರಾಧಿಕಾ ಪಂಡಿತ್) ಆದಿ (ನಿರೂಪ್ ಭಂಡಾರಿ) ಡ್ಯಾಶ್ ಹೊಡೆಯುತ್ತಾನೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಆತನಿಗೆ ಅಲ್ಲೇ ಲವ್ ಶುರು ಆಗುತ್ತದೆ. ಮುಂದಿನ ಭೇಟಿಯಲ್ಲಿ ಆಕೆಗೆ ಮದುವೆ ಆಗಿರುವ ಸುಳ್ಳು ಸುದ್ದಿ ಆದಿಗೆ ತಲುಪುತ್ತದೆ. ಸುಳ್ಳನೇ ಸತ್ಯ ಎಂದು ನಂಬಿಕೊಂಡ ಆದಿ ಹೇಗೆ ಪ್ರೀತಿಯಲ್ಲಿ ಗೆಲ್ಲುತ್ತಾನೆ ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶ.

    **Note:Hey! Would you like to share the story of the movie ಆದಿಲಕ್ಷ್ಮಿ ಪುರಾಣ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X