X
ಕನ್ನಡ » ಚಲಚಿತ್ರಗಳು » ಆದಿಲಕ್ಷ್ಮಿ ಪುರಾಣ
ಆದಿಲಕ್ಷ್ಮಿ ಪುರಾಣ

ಆದಿಲಕ್ಷ್ಮಿ ಪುರಾಣ

Romance | 19 Jul 2019 | U/A |
Kannada

2.5 /5 Users

3 /5 Filmibeat

ಆದಿಲಕ್ಷ್ಮಿ ಪುರಾಣ ಕಥೆ

ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಕಾಂಬಿನೇಶನ್ ನಲ್ಲಿ ತೆರೆಗೆ ಬರಲಿರುವ ರೋಮಾಂಟಿಕ್ ಕಾಮಿಡಿ ಚಿತ್ರ ಆದಿ ಲಕ್ಷ್ಮಿ ಪುರಾಣ ಚಿತ್ರವನ್ನು ರಾಕಲೈನ್ ವೆಂಕಟೆಶ್ ನಿರ್ಮಿಸಿದ್ದಾರೆ. ವಿ. ಪ್ರಿಯಾ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಸಂಗೀತ ನೀಡಿದ್ದಾರೆ. ಚಿತ್ರ 2019 ಜುಲೈ 19 ರಂದು ತೆರೆಕಾಣಲಿದೆ. ಆದಿ ಒಬ್ಬ ಅಂಡರ್ ಕವರ್ ಪೊಲೀಸ್... ಲಕ್ಷ್ಮಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ.. ಇವರಿಬ್ಬರ ಲವ್ ಸ್ಟೋರಿಯೇ 'ಆದಿ ಲಕ್ಷ್ಮಿ ಪುರಾಣ'. ಬಾಯಿ ಬಿಟ್ಟರೆ ಸುಳ್ಳು ಹೇಳುವ ಲಕ್ಷ್ಮಿ ಹಾಗೂ ಸುಳ್ಳಿನ ವಾಸನೆ ಕಂಡರೂ ಆಗದೆ ಇರುವ ಆದಿ, ಇವರಿಬ್ಬರು ಸೇರಿದರೆ ಏನೆಲ್ಲ ಆಗುತ್ತದೆ ಎನ್ನುವುದನ್ನು ಹಾಸ್ಯದ ಜೊತೆಗೆ ಹೇಳುವ ಸಿನಿಮಾ ಇದಾಗಿದೆ. ರೌಡಿಯನ್ನು ಹಿಡಿಯುವ ಭರದಲ್ಲಿ ಲಕ್ಷ್ಮಿಗೆ (ರಾಧಿಕಾ ಪಂಡಿತ್) ಆದಿ (ನಿರೂಪ್ ಭಂಡಾರಿ) ಡ್ಯಾಶ್ ಹೊಡೆಯುತ್ತಾನೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಆತನಿಗೆ ಅಲ್ಲೇ ಲವ್ ಶುರು ಆಗುತ್ತದೆ. ಮುಂದಿನ ಭೇಟಿಯಲ್ಲಿ ಆಕೆಗೆ ಮದುವೆ ಆಗಿರುವ ಸುಳ್ಳು ಸುದ್ದಿ ಆದಿಗೆ ತಲುಪುತ್ತದೆ. ಸುಳ್ಳನೇ ಸತ್ಯ ಎಂದು ನಂಬಿಕೊಂಡ ಆದಿ ಹೇಗೆ ಪ್ರೀತಿಯಲ್ಲಿ ಗೆಲ್ಲುತ್ತಾನೆ ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶ.
Read More

ಆದಿಲಕ್ಷ್ಮಿ ಪುರಾಣ ಕಲಾವಿದರು ಮತ್ತು ಸಿಬ್ಬಂದಿ

ಆದಿಲಕ್ಷ್ಮಿ ಪುರಾಣ ಕ್ರೂ ಮಾಹಿತಿ

ನಿರ್ದೇಶಕ ವಿ.ಪ್ರಿಯಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಭಂಡಾರಿ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆದಿಲಕ್ಷ್ಮಿ ಪುರಾಣ ವಿಮರ್ಶಕರ ವಿಮರ್ಶೆ

kannada.filmibeat.com
ನಟನೆಯ ವಿಚಾರಕ್ಕೆ ಬಂದರೆ, ರಾಧಿಕಾ ಪಂಡಿತ್ ಮತ್ತೆ ತಮ್ಮ ಸಾಮರ್ಥ್ಯ ತೋರಿದ್ದಾರೆ. ಕೊಂಚ ಗ್ಯಾಪ್ ಆಗಿದ್ದರೂ, ತೆರೆ ಮೇಲೆ ಅವರ ಚಾರ್ಮ್ ಮರೆಯಾಗಿಲ್ಲ. ನಟ ಅನೂಪ್ ಭಂಡಾರಿ ಅಭಿನಯ ಕೂಡ ಚೆನ್ನಾಗಿದೆ. ಗೆಳೆಯನ ಪಾತ್ರದಲ್ಲಿ ಯಶವಂತ್ ಶೆಟ್ಟಿ ನಗಿಸುತ್ತಾರೆ. ತಾರ, ಸುಚೇಂದ್ರ ಪ್ರಸಾದ್ ಇಷ್ಟ ಆಗುತ್ತಾರೆ. ಸಿನಿಮಾದ ಪ್ರಾರಂಭದಲ್ಲಿ ಲವ್ ಸ್ಟೋರಿ ಶುರು ಆಗುತ್ತದೆ.ಹೋಗುತ್ತಾ ಹೋಗುತ್ತಾ ಅದು ಬೋರ್ ಆಗುತ್ತದೆ. ಯಾವುದೇ ದೊಡ್ಡ ತಿರುವು ಇಲ್ಲದೆ ಮುಂದಿನ ದೃಶ್ಯವನ್ನು ಪ್ರೇಕ್ಷಕ ಆರಾಮಾಗಿ ಲೆಕ್ಕ ಹಾಕಬಹುದು. ಸೆಕೆಂಡ್ ಹಾಫ್ ನಲ್ಲಿ ಏನೋ ಇರಬೇಕು ಎಂದುಕೊಂಡರೆ ಅಲ್ಲಿಯೂ ಆದಿ - ಲಕ್ಷ್ಮಿ ಪುರಾಣವೇ ಮುಂದುವರೆಯುತ್ತದೆ.ಮಣಿರತ್ನಂ ಶಿಷ್ಯ ಪ್ರಿಯಾ ನಿರ್ದೇಶನ ಅಂತಲೋ.. ರಾಧಿಕಾ ಪಂಡಿತ್ ಸಿನಿಮಾ ಅಂತಲೋ.. ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡರೆ ನಿರಾಸೆ ಆಗುವುದು ಖಂಡಿತ. ಹೀರೋ ಹೀರೋಯಿನ್, ಫೈಟ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಇರುವ ಒಂದು ಸರಳ ಸಿನಿಮಾ ಇದು. ಸಿನಿಮಾದ ಕಥೆ,..ಸಂಗೀತ.. ದೃಶ್ಯಗಳು.. ನಿರ್ದೇಶನ ಎಲ್ಲವೂ ಓಕೆ ಓಕೆ ಅಷ್ಟೇ.

ಆದಿಲಕ್ಷ್ಮಿ ಪುರಾಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆದಿಲಕ್ಷ್ಮಿ ಪುರಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+