ದೇವಿಶ್ರೀ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ `ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದಲ್ಲಿ ಅನುಪಮಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಮತ್ತು ದೊಡ್ಡ ರಂಗೇಗೌಡ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳಿಗೆ ವಿ ಮನೋಹರ್ ಸಂಗೀತ ನೀಡಿದ್ದಾರೆ.
ಮಧ್ಯಮ ವರ್ಗದ ಹೆಣ್ಣುಮಗಳಾದ ಸುಕನ್ಯ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಟೋ ಓಡಿಸುವ ಗಂಡ ದಿನಾಲೂ ಕಂಠಪೂರ್ತಿ ಕುಡಿಯುವ ಅಭ್ಯಾಸ ಹೊಂದಿರುವುದರಿಂದ ಮನೆಯ ಪೂರ್ಣ ಜವಾಬ್ದಾರಿ ಜೊತೆ ಮಗಳ ಆರೋಗ್ಯ ಸಮಸ್ಯೆ ಬಗ್ಗೆ ಕೂಡ ಗಮನ ಹರಿಸಬೇಕಾದ ಕರ್ತವ್ಯ ಸುಕನ್ಯಳ ಮೇಲೆ ಬೀಳುತ್ತದೆ. ಸಮಾಜದ ಕಾಕದೃಷ್ಟಿಯ ಜೊತೆಗೆ ,ಇವೆಲ್ಲ ಸಮಸ್ಯೆಗಳನ್ನು ಅವಳು ಹೇಗೆ ನಿಭಾಯಿಸುತ್ತಾಳೆ ಎಂದು ಚಿತ್ರ ಬಿಂಬಿಸುತ್ತದೆ.