ಭುವನಂ ಗಗನಂ ಸಿನಿಮಾವನ್ನು ಗಿರೀಶ್ ಮೂಲಿಮನಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮೋದ್‌ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರಾಚೆಲ್ ಡೇವಿಡ್ ಹಾಗೂ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ಪೊನ್ನು ಅಶ್ವಥಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಲರ್ಶ ರೇಖಾ, ಪ್ರಜ್ವಲ್ ರೆಡ್ಡಿ, ಚೇತನ್ ದುರ್ಗ ಮುಂತಾದರು ತಾರಾಗಣದಲ್ಲಿದ್ದಾರೆ. ಗುಮ್ಮಿನೇನಿ ವಿಜಯ್ ಬಾಬು ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ಸುನೀಲ್ ಕಶ್ಯಪ್ ಸಂಕಲನ ಸಿನಿಮಾಗಿದೆ. ಎಂ ಮುನೇಗೌಡ ಗಗನಂ ಭುವನಂ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಗಗನಂ ಭುವನಂ ಸಿನಿಮಾ 2025ರ ಫೆಬ್ರವರಿ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.