ದರ್ಬಾರ್ ಸಿನಿಮಾವನ್ನು ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ನಿರ್ದೇಶ ಮಾಡಿದ್ದಾರೆ. ಈ ಚಿತ್ರದಲ್ಲಿ ಸತೀಶ್ ನಾಯಕನಾಗಿ ನಟಿಸಿದ್ದು, ಅವರೇ ನಿರ್ಮಾಣ ಮಾಡಿದ್ದಾರೆ. ಜಾಹ್ನವಿ ರಾಜು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಧುಕೋಕಿಲ, ಹುಲಿ ಕಾರ್ತಿಕ್, ನವೀನ್ ಪಡೀಲ್ ಮುಂತಾದವರು ಚಿತ್ರದಲ್ಲಿದ್ದಾರೆ. ಎಸ್.ಸಾಮ್ರಾಟ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ವಿ ಮನೋಹರ್ ಅವರೇ ಸಂಗೀತ ನೀಡಿದ್ದಾರೆ.
ಬಿಡುಗಡೆ: ದರ್ಬಾರ್ ಸಿನಿಮಾ ಜೂನ್ 9ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.