ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿರುವ 'ಡಿಯರ್ ವಿಕ್ರಮ್' ಚಿತ್ರವನ್ನು ಕೆ.ಎಸ್.ನಂದೀಶ್ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ವಸಿಷ್ಠಸಿಂಹ, ಸೋನು ಗೌಡ ಮತ್ತು ರಕ್ಷಾ ಸೋಮಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ನಿತ್ಯ ಮತ್ತು ವಿಕ್ರಮ್ ತಮ್ಮ ಉನ್ನತ ಸೈದ್ಧಾಂತಿಕ ವಿಚಾರಗಳು ಮತ್ತು ದೇಶಭಕ್ತಿಯ ಕಾರ್ಯಗಳಿಂದ ಕಾಲೇಜಿನಲ್ಲಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗುತ್ತಾರೆ. ಕೆಲ ಸಮಯದ ನಂತರ, ಬದಲಾದ ಸನ್ನಿವೇಶಗಳಲ್ಲಿ ಸಮಾಜ ಸುಧಾರಣೆಗಾಗಿ ವಿಕ್ರಮ್ ಹಿಂಸಾತ್ಮಕ ದಾರಿ ತುಳಿದಾಗ ನಿತ್ಯ ವಿರೋಧಿಸುತ್ತಾಳೆ. ಪ್ರೀತಿ ಮತ್ತು ನೈತಿಕ ಹೋರಾಟದಲ್ಲಿ ವಿಕ್ರಮ್ ಯಾವುದನ್ನು ಆರಿಸುತ್ತಾನೆ ಎಂಬುದು ಚಿತ್ರದ ಕಥೆ.
ಮೂವರು ವಿಭಿನ್ನ ಸೈದ್ದಾಂತಿಕ ನೆಲೆಗಟ್ಟಿನ ವ್ಯಕ್ತಿಗಳು ಭ್ರಷ್ಟ ವ್ಯವಸ್ಥೆಯ ವಿರುದ್ಧ ನೆಡೆಸುವ ಹೋರಾಟದ ಕಥೆ ಈ ಚಿತ್ರದಲ್ಲಿ ಮೂಡಿಬಂದಿದೆ.
ಬೆಳವಣಿಗೆ
ಈ ಪಾಲಿಟಿಕಲ್ ಥ್ರಿಲ್ಲರ್ ಚಿತ್ರಕ್ಕೆ ಮೊದಲು ಗೋಧ್ರಾ ಎಂದು ಹೆಸರಿಡಲಾಗಿತ್ತು. ಕೆಲ ಕಾರಣಗಳಿಂದ ಚಿತ್ರದ ಟೈಟಲ್ ಬದಲಾವಣೆ ಮಾಡಲಾಯಿತು. ಚಿತ್ರದ ಮೊದಲ ಮೋಷನ್ ಪೋಸ್ಟರ್ 2020 ಜನೇವರಿ 13 ರಂದು ಬಿಡುಗಡೆಯಾದರೆ, ಮೊದಲ ಟೀಸರ್ ಜನೇವರಿ 17 ರಂದು ಬಿಡುಗಡೆಯಾಯಿತು.
ಚಿತ್ರದ ಟ್ರೇಲರ್ ಜೂನ್ 22, 2022 ರಂದು ಬಿಡುಗಡೆಯಾಯಿತು.
ರೀಲೀಸ್
ಈ ಚಿತ್ರ ಜೂನ್ 30, 2022 ರಂದು ನೇರವಾಗಿ ವೂಟ್ ಓಟಿಟಿ ಮಾಧ್ಯಮದಲ್ಲಿ ಪ್ರಸಾರವಾಗಲಿದೆ. ವೂಟ್ ಸಲೆಕ್ಟ್ ಸದಸ್ಯತ್ವ ಹೊಂದಿರುವವರು ಚಿತ್ರವನ್ನು ವೀಕ್ಷಿಸಿಬಹುದು.