ದೃಶ್ಯ 2 (2021)(U/A)
Release date
10 Dec 2021
genre
ದೃಶ್ಯ 2 ಕಥೆ
ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ದೃಶ್ಯ 2 ಚಿತ್ರ 2014 ರಲ್ಲಿ ತೆರೆಕಂಡ ದೃಶ್ಯ ಚಿತ್ರದ ಸಿಕ್ವೆಲ್. ಪಿ.ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಮೊದಲ ಚಿತ್ರದಲ್ಲಿ ಅಭಿನಯಿಸಿದ ನವ್ಯಾ ನಾಯರ್, ಆರೋಹಿ ನಾರಾಯಣನ್, ಆಶಾ ಶರತ್ ಮತ್ತು ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಖೇಶ್ ಆರ್ ಮೆಹ್ತಾ, ಸಿ.ವಿ.ಸಾರಥಿ ಮತ್ತು ಸೀತಾರಾಮ್ ಬಂಡವಾಳ ಹೂಡಿದ್ದಾರೆ.
ಹಿನ್ನಲೆ: ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪ ಐಜಿ ಹುದ್ದೆಯ ರೂಪಾ ಚಂದ್ರಶೇಖರ್ ಅವರ ಪುತ್ರ ತರುಣ್ ಚಂದ್ರಶೇಖರ್ ಕೊಲೆಯಾಗಿರುತ್ತಾರೆ. ಕೊಲೆಯಾದ ಬಳಿಕ ಶವವನ್ನು ರಾಜೇಂದ್ರ ಪೊನ್ನಪ್ಪ ಆಗಷ್ಟೇ ನಿರ್ಮಾಣ ಹಂತದಲ್ಲಿದ್ದ ಪೋಲೀಸ್ ಠಾಣೆಯಲ್ಲಿ ಹುದುಗಿ ಹಾಕಿದ್ದರು. ನಂತರ ಇಡೀ ಕುಟುಂಬ ಭಯದಲ್ಲೆ ಜೀವನ ನಡೆಸುತ್ತಿರುತ್ತೆ.
ಕಥೆ: ರಾಜೇಂದ್ರ ಪೊನ್ನಪ್ಪ ತನ್ನದೇ ಊರಿನಲ್ಲಿ ಥಿಯೇಟರ್ ಕಟ್ಟಿ ಅದರಲ್ಲಿ ಏಳಿಗೆ ಕಾಣುತ್ತಾನೆ. ತನಗೊಂದು ಒಳ್ಳೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಸಿನಿಮಾ ಸ್ಕ್ರಿಪ್ಟ್ ರೈಟರ್ ಅನಂತ್ ನಾಗ್ ಅವರ ಬಳಿ ತೆರಳುತ್ತಾರೆ. ಅಲ್ಲಿ ಯಾವ ರೀತಿ ಕಥೆಯನ್ನು ಬರೆಸುತ್ತಾರೆ. ಆ ಕಥೆಗೆ ಬರುವ ಟ್ವಿಸ್ಟ್ ಏನು? ರಾಜೇಂದ್ರ ಪೊನ್ನಪ್ಪ ಹುದುಗಿಟ್ಟಿದ್ದ ಮೃತದೇಹ ಪೋಲಿಸರಿಗೆ ಸಿಗೋದು ಹೇಗೆ? ಕುಟುಂಬವನ್ನು ಅಪರಾಧಿಗಳ ಸ್ಥಾನದಿಂದ ಬಚಾವ್ ಮಾಡಲು ರಾಜೇಂದ್ರ ಪೊನ್ನಪ್ಪ ಏನೆಲ್ಲಾ ಮಾಸ್ಟರ್ ಮೈಂಡ್ ಯೂಸ್ ಮಾಡುತ್ತಾರೆ ಅನ್ನೋದೆ ಸಿನಿಮಾದ ಕಥೆ.
**Note:Hey! Would you like to share the story of the movie ದೃಶ್ಯ 2 with us? Please send it to us ([email protected]).